
ಶ್ರೀ ಪೋತುಲೂರು ವೀರಬ್ರಹ್ಮೇಂದ್ರಸ್ವಾಮಿ ಸಂಕ್ಷಿಪ್ತ ಚರಿತ್ರೆ
-
ನಂದನ ನಾಮ ಸಂವತ್ಪರಕ್ತೆ ದೇಶವು ಸುಬಿಕವಾಗಿ. ಅನ೦ಶ ಜಗವಂತನ ಕಾಲ ಸತು ನ ಸ ಕಾರ್ಯಗಳಾಗುವವು. ಅದಕ್ಕೋಸ್ಕರ ನಾನು ಅವತರಿಸಬೇಕಾಗಿದೆ. ಮಧುರೆ ಮೀನಾಕ್ಷಮ್ಮ ಮಾತಾಡುವಳು. ನಾಗಯ್ಯಾ ಎ೦ಬ ನಾಲ್ಕು ವರ್ಷದ ಬಾಲಕನು ವೇದಗಳನ್ನು ಓದುವನು. ಬನಗಾನಪಲ್ಲಿಗ್ರಾಮ ಪಟ್ಟಣವಾಗುವುದು. ರೂಪಾಯಿಗೆ ಪುಟ್ಟಿಯಷ್ಟು ಧಾನ್ಯವನ್ನು ಮಾರಿದನಂತರ ಪ್ರಜೆಗಳು ತಿಂಡಿಗೆ ಕೊರತೆಯಿಲ್ಲದೆ ಸುಖಪಡುವರು. ರಾಮದುರ್ಗಕ್ಕೆ ರಾಮಗಿಳಿಯು ಬಂದು ರಾಮಧರ್ಮಜ ಸಮಾಚಾರವನ್ನು ಹೇಳುವುದು. ಏಳುವರ್ಷದ ಬಾಲಿಕೆಗೆ ಮಕ್ಕಳಾಗುವರು ಗೋಲುಕೊ೦ಡ ಎಂಬಲ್ಲಿ ಕೊ೦ಗ ಮಾತನಾಡುವುದು. ತುಂಗ ಭದ್ರಾನದೀ ತೀರ ಪ್ರಾಂತ್ಯದಲ್ಲಿ ಮೂವ್ಟರು ಶೃಂಗಾರವಾಗಿ ರಾಜ್ಯವಾಳುವರು. ಆಗ ಕೃತಯುಗ ಧರ್ಮವು ನಡೆಯುವುದು. ಭಾರತೀಯರು ಸ್ವಧರ್ಮಪಾಲನೆಯನ್ನು ಮಾಡದೆ ಪರಧರ್ಮವನ್ನಾಶ್ರಯಿಸಿ ಭ್ರಷ್ಟತೆಯನ್ನೊಂದುವರು. ಕ್ಷಣಿಕ ಸುಖಕ್ಕಾಗಿ ಆತುರ ಪಡುವರು. ಪ್ರಜೆಗಳೇ ಪ್ರಭುಗಳಾಗುವರು. ಪ್ರಭವನಾಮ್ಕ ಸಂವತ್ಸರದಿ೦ದ ನನ್ನ ಕೀರ್ತಿ ದೇಶಾದ್ಯಂತ ತಿಳಿಯುವುದು. ಶೃತಿ ಧರ್ಮಗಳನ್ನು ಶೂದ್ರರು ಹೇಳುವರು. ಅದನ್ನು ಕೇಳಿದ ವಿಪ್ರರು ನಿ೦ದಿಸುತ್ತ ಸ೦ಚರಿಸುವರು. ಪ್ರಭುಗಳು ಪ್ರಜೆಗಳಿಗೆ ಭಯ ಪಡುವರು. ಮನೋವೇಗದಲ್ಲಿ ಮಾತುಗಳು ತಿಳಿಯುವುವು. ಕೆ೦ಪು ಇರವೆ ಆನೆಯ ರೂಪದಲ್ಲಿ ಕಾಣುವುದು. ಮುಸ್ಟು ಆರದ ಮಕ್ಕಳು ಮಾತನಾಡುವರು ಕ್ರೂರ ಮೃಗಗಳಿ೦ದ ಜನ ನಷ್ಟವಾಗುವುದು. ರಸ ಗ೦ಧ ದ್ರವ್ಯಗಳ ಸಾರ ಕೆಟ್ಟುಹೋಗುವುದು. ಆಕಾಶದಲ್ಲಿ ದೊಡ್ಡ ನಕ್ಷತ್ರ ಹುಟ್ಟುವುದು. ಅದನ್ನು ನೋಡಿದವರು ನಶಿಸುವರು. ಆ ಸಮಯದಲ್ಲಿ ನಾನು ವೀರಭೋಗ ವಸ೦ತರಾಯರಾಗಿ ಬರುವೆನು. ಸೂರ್ಯನು ಹಚ್ಚನೆ ಬಣ್ಣದಲ್ಲಿ ಮನುಷ್ಯನ ರೂಪದಲ್ಲಿ ಕಾಣುವನು.
ರಕ್ತಾಕ್ಷಿ ನಾಮ ಸಂವತ್ಸರದಲ್ಲಿ ಮಾರ್ಗಶಿರ ಶುದ್ಧ ಸಪ್ತಮಿ ತಿಡಿಯಲ್ಲಿ ಚನ್ನಪಟ್ಟಣದಲ್ಲಿ ಒಬ್ಬ ವಿಪ್ರನ ಮನೆಯಲ್ಲಿ ಏಳು ವರ್ಷದ ಬಾಲಿಕಗೆ ಒಂದು ಗ೦ಡು ಮಗು ಜನಿಸುವುದು ಆ ಶಿಶುವು ನಾಲ್ಕು ಹಸ್ತಗಳು, ಮೂರು ಕಾಲುಗಳು, ಶಿರಸ್ಸಿನಲ್ಲಿ ಕೊ೦ಬುಗಳಿರುವುವು. ಆ ಬಾಲಕನು ಇಪ್ಪತ್ತೆರಡು (22) ದಿನಗಳು ಜೀವಂತವಾಗಿದ್ದು ಇಪ್ಪತ್ಮೂರನೇ (23) ದಿನದಂದು ಶ್ರೀ ವೀರಭೋಗ ವಸ೦ತರಾಯರು ಬರುವರು. ಮೂವತ್ತೆರಡು ಬಿರುದುಗಳಿ೦ದ ಕೊಲ್ಲಾಪುರಿ ಮಹಾಲಕ್ಷ್ಮೀ ಸಮೇತವಾಗಿ ದುರ್ಮಾರ್ಗರನ್ನು ನಾಶಮಾಡಲು ಬರುವರೆಂದು ತಿಳಿಸಿ ಮರಣ ಹೊಂದುವುದು, ಇದೇ ನಿಮಗೆ ನಿದರ್ಶನವು.
ನನ್ನ ಬರುವಿಕೆಗಾಗಿ ಭಕ್ತರು ಎದುರು ನೋಡುವರು. ಪಾಪಘ್ಲಿ ಮಠವು ಉನ್ನತ ಸ್ಥಿತಿಗೆ ಬರುವುದು. ಪೋತುಲೂರು ಬ್ರಹ್ಮ೦ರವರ ಭಕ್ತರು ಜ್ಯೋತಿ ಸ್ವರೂಪರಾಗಿ ಬರುವರು, ಐದು ವರ್ಷದ ಬಾಲಕ ಭಿವಿಷ್ಯತ್ ಹೇಳುವನು. ಕಾಶಿ ದೇಶದಲ್ಲಿ ಫನ ತರವಾದ ಚುಕ್ಕೆಗಳು ಪಂಚವರ್ಣಗಳ೦ದ ಪ್ರಕಾಶಿಸುವುವು. ಜಗನ್ನಾಯಕರು ಬಟೆಗಳನ್ನು ಬೆಳೆಸಿ ಚ೦ದ್ರಗಿರಿಗೆ ಸೇರುವರು ವಿಶ್ವಕರ್ಮರು ವಿಸ್ತಾರವಾಗಿ ಅನೇಕ ಕಾರ್ಯಗಳು ನಡೆಯುವುವು.
ಪುಣ್ಯ ಭೂಮಿಯೆಂದು ಕೀರ್ತಿಯೊಂದಿರುವ ಭಾರತದೇಶದಲ್ಲಿ ಪ್ರಪಂಚದಲ್ಲಿಯೂ ದುರ್ನೀತಿ ಕೆಟ್ಟ ಲಕ್ಷಣಗಳು. ಅಸತ್ಯ, ಕ್ರೂರತ್ವ, ಮಾಡಿ, ಮೋಸ, ಅನಾಚಾರ, ಅಕೃತ್ಯೆ ಇತ್ಯಾದಿಗಳು ಆಧಿಕವಾಗುವುವು. ಕಾಮಾಂಧರಾಗುವರು. ವಾವಿ ವರಸೆಗಳಿಲ್ಲದೆ ಸ೦ಚರಿಸುವರು. ಹಸುವಿಗೆ ಐದು ಶಿರಸ್ಸು ಎರಡು ಯೋನಿಗಳು ಹುಟ್ಟುವುವು. ಹಸುವಿನ ಗರ್ಭದಿಂದ ಮಗು ಜನಿಸುವುದು, ಆ ಮಗು ಮನುಷ್ಯರೊಂದಿಗೆ ತರ್ಕವಾದ ಮಾಡುವುದು. ವಿಪರಿ೦ಂದ ಆಚಾರವು ನಶಿಸಿ ಹೋಗುವುದು.
ವೈಶಾಖ ಶುದ್ಧ ದಶಮಿ ಭಾನುವಾರ ಮಧ್ಯಾಹ್ನ ಎರಡು ಘಂಟೆಗೆ ಸರಿಯಾಗಿ ನನ್ನ ಪಾದಸೇವೆ ಮಾಡಿದ ಪ್ರತಿ ಫಲಕ್ಕಾಗಿ ಅವು ಸಿದಧನಿಗೇ ಸಲ್ಲುತ್ತವೆ. ಅವನು ಸುಪ್ರಸಿದ್ಧನು. ನಾನಿನ್ನು ಸಮಾಧಿಯಾಗುವ ಸಮಯದವರೆಗೂ ನಿಷ್ಠೆಯಲ್ಲಿರಬೇಕಾಗುತ್ತದೆ. ನೀವು ಮುಂದೆ ಆಗುವ ಕಾರ್ಯಗಳನ್ನು ಮಾಡಿರೆ೦ದರು.
ಊರು ಜನ ಸಾಗರದಂತೆ ತುಂಬಿತ್ತು. ಸಮಾಧಿಯ ಪೂಜಾ ಕಾರ್ಯಗಳಲ್ಲಿ ಪಂಚ ಗೋತ್ರಿಕ ಪೌರೋಹಿತರು ನಿರತರಾಗಿದ್ದರು. ಮಂತ್ರ ಘೋಷಗಳು ಮಂಗಳವಾದ್ಯಗಳು ಮುಗಿಲನ್ನು ಮುಟ್ಟುವಂತೆ ಕೇಳುತ್ತಿದ್ದವು. ಎಲ್ಲೆಲ್ಲಿಯೂ ಜಯಫೋಷಗಳು ಕೇಳಿ ಬರುತ್ತದ್ದವು. ಕಲಿಯುಗ (4694) ನಾಲ್ಕು ಸಾವಿರದ ಆರುನೂರ ತೊಂಭತ್ನಾಲಕ್ಕೆ ಸರಿಯಾಗಿ ಶಿಸ್ತಶಕ ಒಂದು ಸಾವಿರದ ಐದುನೂರ ತೊಂಭತ್ನಾಲ್ಕ (1594)ನೇ ಸ೦ವತ್ಸರದಂದು ಸಮಾಧಿ ನಿಷ್ಠೆಯನ್ನು ವಹಿಸಿದರು. ಶ್ರೀ ವೀರಬ್ರಹ್ಮೇಂದ್ರಸ್ವಾಮಿಯವರು, ಪೌರೋಹಿತರಿ೦ಂದಲೂ ನೆರೆದ ಭಕ್ತಾದಿಗಳಿಂದಲೂ ಜೈ! ಶ್ರೀ ವೀರಬ್ರಹ್ಮೇಂದ್ರಸ್ವಾಮಿಯವರಗೆ ಜೈ! ಜೈ! ಅವತಾರ ಪುರುಷ ಕಾಲಜ್ಞಾನ ಮಹಾಮಹಿಮರಿಗೆ ಜೈ! ಜಯ ಘೋಷಗಳೊಂದಿಗೆ ಭೇರಿ ಮೃದ೦ಗಾದಿ ಕಹಳೆಗಳು ಮುಗಿಲನ್ನು ಮುಟ್ಟುವಂತೆ ಮೊಳಗಿದವು.
ಗುರುವಿನಾಗ್ಗೆಯಂತೆ ರಾತ್ರೋ ರಾತ್ರಿ ಪಯಾಣಸಿದ ಸಿದ್ದಯ್ಯ ಭಯ ಭೀತಿಗಳನ್ನು ಗಮನಕ್ಕೆ ತಂದುಕೊಳ್ಳದೆ ಗುರುಸ್ಮರಣೆಯಲ್ಲಿ ಅತುರಾತುರನಾಗಿ ನಡೆಯುತ್ತಿದ್ದನು. ಮೂಡಣ ದಿಕ್ಕು ಕೆಂಪೇರುತ್ತಿತ್ತು. ದಾರಿ ಸಾಗಿದೆಯೇ ಇಲ್ಲವೇ ಎ೦ಬ ಅರಿವು ಸಿದ್ದಯ್ಯನಿಗಿರಲಿಲ್ಲ. ಸಿದ್ದಾ! ಎಂಬ ದ್ವನಿ ಅವನ ಕಿವಿಗೆ ತಾಗಿತು. ಶಕ್ಷಣ ಎಚ್ಚೆತ್ತ ಸಿದ್ದಯ್ಯ. ಮುಂದೆ ಅತಿ ವೃದ್ಧ ಸನ್ಯಾಸಿಯೊಬ್ಬರು ನಿಂತಿದ್ದರು. ಅಯ್ಯಾ! ಹಿಂದೆ ಮುಂದಿನ ಅರಿವಿಲ್ಲದೆ ಹೋಗುತ್ತಿರುವೆಯಲ್ಲ ಎಲ್ಲಿಗೆ ನಿನ್ನ ಪಯಣವೆಂದರು ಆ ವೃದ್ಧರು. ನನ್ನ ಪೂಜ್ಯ ಗುರುದೇವರು ಶ್ರೀ ವೀರಬ್ರಹ್ಮೇ೦ದ್ರ ಸ್ವಾಮಿಯವರು ಸಜೀವ ಸಮಾಧಿ ನಿಷ್ಠೆಯನ್ನು ವಹಿಸಲಿದ್ದಾರೆ. ಪೂಜೆಗಾಗಿ ಹೂವನ್ನು ತರಲು ಬನಗಾನಪಲ್ಲಿಗೆ ಹೋಗುತ್ತಿದೇನೆ೦ದನು ಸಿದ್ಧಯ್ಯಾ. ಅಯ್ಯೋ! ಹುಚ್ಚು ಹುಡುಗಾ! ಬನಗಾನಪಲ್ಲಿ ಎಲ್ಲಿ? ನೀನೆಲ್ಲಿ? ಇಲ್ಲಿಗೆ ಐದು ಗಾವುದ - ಅ೦ದರೆ ಅರವತ್ತು ಮೈಲಿ ಹೋಗಿ ನೀನು ಹೂವನ್ನು ತರುವುದೆ೦ದರೇನು? ನೀವು ನಿಜ ಗುರು ಶಿಷ್ಯರೇ ಆಗಿದ್ದರೆ ಮುಳ್ಳಿದ್ದ ಗಿಡದ ಎಲೆಗಳು ಹೂವುಗಳಾಗಲಾರವೇ? ಎ೦ದರು ಆ ವೃದ್ಧ ಸನ್ಯಾಸಿಗಳು. ನನ್ನ ಗುರುಗಳು ಮಹಾಮಹಿಮೆಯುಳ್ಳವರೆಂಬ ಅರಿವು ಮೂಡಿ ಸಮೀಪದಲ್ಲಿಯೇ ಇದ್ದ ಮುಳ್ಳಿಲ್ಲದ ಗಿಡದ ಎಲೆಗಳನ್ನು ಕಿತ್ತು ಜೋಳಿಗೆಗೆ ಹಾಕಿಕೊಳ್ಳುತ್ತಲೆ ಪರಿಮಳವನ್ನು ಬೀರುವ ಹೂವುಗಳಾದವು. ಸಿದ್ಧಯ್ಯಾನಿಗೆ ಮಹಾದಾನ೦ದವಾಯಿತು. ಅಲ್ಲಿಯೇ ನಿ೦ತು ಗಮನಿಸುತ್ತಿದ್ದ ವೃದ್ಧರು :ಮಗೂ! ಪರಿಮಳ ಪುಷ್ಪಗಳಿ೦ಂದಾಗುವ ಪ್ರಯೋಜನವಾದರೂ ಏನು? ನಿಮ್ಮ ಗುರುಗಳು ನೆನ್ನೆಯ ಮಧ್ಯಾಹ್ನವೇ ಸಮಾಧಿ ನಿಷ್ಠೆಯಲ್ಲಿ ಕುಳಿತರಲ್ಲಾ! ಎಂದು ನಡುಕ ದ್ವನಿಯಲ್ಲಿ ಹೇಳಿದ್ದನ್ನು ಕೇಳಿದ ಸಿದ್ದಯ್ಯ ಹಾ ಎಂದು ದಿಗ್ದಾಂತನಾದ. ಸಮಾಧಿಯಾಗುವ ಸಮಯದಲ್ಲಿ ಏನು ಜನಾ...ಏನು ವೈಭವಾ...ನೋಡಲು ಎರಡು ಕಣ್ಣುಗಳೇ ಸಾಲದಾದವು. ಎನ್ನುತ್ತಲೆ ಪೂಜ್ಯರೇ ತಾವು ಹೇಳುತ್ತಿರುವುದು ಸತ್ಯವೇ? ಎಂದನು ಸಿದ್ದಯ್ಯ ಅಸತ್ಯವೆಂಬುದೇ ನಮಗೆ ತಿಳಿಯದೆ೦ಂದರು. ವೃದ್ಧರು. ಹಾ ಗುರುದೇವಾ ಎನ್ನುವಷ್ಟರಲ್ಲಿ ಮಾಯವಾಗಿದ್ದರು ಆ ವೃದ್ಧರು.

