
ಶ್ರೀ ಪೋತುಲೂರು ವೀರಬ್ರಹ್ಮೇಂದ್ರಸ್ವಾಮಿ ಸಂಕ್ಷಿಪ್ತ ಚರಿತ್ರೆ
-
ರೋಗ ಮುಕ್ತನಾಗಿದ್ದ ಬ್ರಾಹ್ಮಣೋತ್ರಮನು ಮುಂದೆ ಬಂದು ಸ್ವಾಮಿ! ವೀರಬ್ರಹ್ಮೇ೦ದ್ರಗುರುವೇ! ಇಂದು ಇಲ್ಲಿಯೇ ಉಳಿದು ಈ ಅಗಹಾರಿಕರ ಆತಿಥ್ಯವನ್ನು ಸ್ವೀಕರಿಸಿ ನಮಗೆ ತೀರ್ಥ ಪ್ರಸಾದಗಳನ್ನಿತ್ತು ಕೃತಾರ್ಥರನ್ನಾಗಿ ಮಾಡಿರಂದು ಬೇಡಿದನು. ಅದಕ್ಕೆ ಪಂಡಿತರೆಲ್ಲರೂ ಸಮ್ಮತಿಸಿ ರಥವೊಂದನ್ನು ಸಿದ್ದಪಡಿಸಿ ಶ್ರೀ ಸ್ವಾಮಿಯವರನ್ನು ರಥಾರೂಢರನ್ನಾಗಿಸಿ ತಾವೇ ಎಳೆದು ಕೊ೦ಡು ಹೋಗಿ ಅತಿಥಿ ಗೃಹವೊಂದರಲ್ಲಿ ಬಿಟ್ಟರು. ಅಂದು ವಿಶ್ರಾಂತಿಯನ್ನು ಪಡೆದು ರಾತ್ರಿ ಭೋಜನವಾದನ೦ತರ ಎಲ್ಲರೂ ನಿದ್ರಿಸಿದರು.
ಮಾರನೆ ದಿನ ಬೆಳಗಾಗುತ್ತಲೆ ಪುಷ್ಪಗಿರಿ ಆಗ್ರಹಾರಿಕರೆಲ್ಲರೂ ಒಂದಾಗಿ ಸೇರಿ ಶ್ರೀ ಸ್ವಾಮಿಯವರು ಅನುಷ್ಠಾನವನ್ನು ಮುಗಿಸಿ ಬರುತ್ತಲೆ ಎಲ್ಲರೂ ಾಷ್ಟಾ೦ಗ ನಮಸ್ಕಾರವನ್ನು ಮಾಡಿ ತೀರ್ಥ ಪ್ರಸಾದಗಳನ್ನು ಸ್ವೀಕರಿಸಿದ ನ೦ತರ ಸ್ವಾಮಿ! ಸತ್ಪುರುಷಾ! ತಮ್ಮ ಶಿಷ್ಯರಾದಿಯಾಗಿ ಇಂದು ನಮ್ಮ ಆತಿಥ್ಯವನ್ನು ಸ್ವೀಕರಿಸಿ ನಮಗೆ ಕಾಲಜ್ಜಾನವನ್ನು ಬೋಧಿಸಿ ನಮ್ಮನ್ನು ಕಲಯುಗವು ಐದು ಸಹಸ್ತ ಸ೦ವಶರಗಳ ನ೦ತರ ನಾನು ವೀರಭೋಗ ವಸ೦ಶರಾಯರಾಗಿ ಬರುವ ಸಮಯದಲ್ಲಿ ಉತ್ಪಾಶವಾದ ನಕ್ಷತ್ರವೊಂದು ದಕ್ಷಿಣ ಭಾಗದಲ್ಲಿ ಉದಿಸುತ್ತದೆ. ಅದನ್ನು ಧೂಮಕೇತುವೆಂದು ಕರೆಯುವರು. ನಾಲ್ಕೂ ವರ್ಣದವರು ಸುರಪಾನ ಮತ್ತಲಿರುವರು. ಕಲಿಯುಗದ ಐದು ಸಹಸ್ತ ಸ೦ವಶ್ಸರಗಳವರೆಗೆ ವಿಪರು ಪೂಜಿತರಾಗಿದ್ದು ನ೦ತರ ಅನ್ಯರನ್ನಾಶ್ರಯಿಸಿ ಜೀವಿಸುವ೦ತಾಗುವರು. ಆ ನ೦ತರ ವಿಶ್ವಕರ್ಮ ವಂಶಿಕರಾದ ವಿಶ್ವ ಬ್ರಾಹ್ಮಣರು (ದೇವ ಬ್ರಾಹ್ಮಣರು) ಸಕ್ರಮವಾಗಿ ಅಭಿವೃದ್ಧಿಯಾಗುತ್ತಿದ್ದು ಪಂಚಾಂಗ ಪೌರೋಹಿತ್ಯಾದಿಗಳಲ್ಲಿ ನಿರ೦ತರಾಗಿರುವವರು ಬಾಹ್ಮಣರಿಗೆ ಪೀಠಗಳು ವಲೆಯರಿಗ್ಳ ಮಂಚಗಳು ಆಗುವುವು. ವಿಪ್ರರು ಕುಲಹೀನರ ಪಂಚೆಗಳ ಆಶ್ರಯದಲ್ಲಿರುವರು. ವಿಧವಾ ವಿವಾಹಗಳು ನಡೆಯುತ್ತವೆ. ಅದನ್ನೇ ಎಲ್ಲಾ ವರ್ಣದವರು ಅನುಸರಿಸುತ್ತಾರೆ. ವಿಪ್ರ ಬ್ರಾಹ್ಮಣರನ್ನು ಯಾರೂ ಕರೆಯದಾಗಿ ಬೆಳೆವ ಭೂಮಿಗಳನ್ನು ಮಾರಿಕೊಳ್ಳುವರು. ವಿಪ್ರ ಬಾಹ್ಮಣರಿಗೂ ಮತ್ತು ದೇವಬ್ರಾಹ್ಮಣರಿಗೂ ಯಾವಾಗಲೂ ವೈರತ್ವವಿರುವುದು. ವಿಪ್ರ ಬ್ರಾಹ್ಮಣರ ಸಾ೦ಗತ್ಯವು ನಾಶವಾಗಿ ನೀಚರ ಸಹವಾಸದಲ್ಲಿರುವರು.ನನ್ನ ಮಾತುಗಳೆಲ್ಲವೂ ನಡೆಯುವುದರ ಮೂಲಕ ತಿಳಿಯುವುವು. ನಾನು ವೀರಭೋಗ ವಸ೦ಶರಾಯರಾಗಿ ಬರುವ ವೇಳೆಗೆ ಧನ ಮಧಾಂಧರು ಅಜ್ಜಾನಿಗಳಾಗಿ ಅಡವಿಪಾಲಾಗುವರು. ನನ್ನ ಮಾತಿನಲ್ಲಿ ನಂಬಿಕೆಯುಳ್ಳವರು ಉಳಿಯುವರು. ಧನ ಕನಕಗಳಿಗೆ ಆಸೆಪಟ್ಟು ಬೆಟ್ಟಗಳನ್ನು ಒಡೆದು ಹಾಕುವರು. ಭೂಮಿ, ಅಡವಿಗಳಲ್ಲಿ ಅಪಾರ ಸಂಪತ್ತು ಅಡಗಿರುವುದು ನೂರಾ ಇಪ್ಪತ್ತು ತಿರುಪತಿಗಳು ಹಾಳಾಗುವುವು. ಅದು ನನ್ನ ಬರುವಿಕೆಗೆ ಸೂಚನೆಯು, ಶೃ೦ಗೇರಿ, ಪುಷ್ಪಗಿರಿಯ ಪೀಠಗಳು ಪ೦ಚಾನರರ ವಶವಾಗುವುವು. ನಾನು ಬರುವ ಮುನ್ನ ಪ೦ಚಾನನರು ಸ್ವಲ್ಪ ಸ್ವಲ್ಪವೇ ಅಭಿವೃದ್ದೀಯಾಗುತ್ತ ಬರುವರು. ಇನ್ನೂ ಹೇಳಬೇಕಾದ ದೇವ ರಹಸ್ಯಗಳು ಸಾಕಷ್ಟಿವೆ. ನಾನು ಮುಂದಿನ ದಿನದಲ್ಲಿ ತಪಸ್ಸಿನಲ್ಲಿರಬೇಕಾಗುತ್ತದೆ. ಈಗ ನಿಮಗೊ೦ದು ಮಂತ್ರವನ್ನು ಉಪದೇಶಿಸುತ್ತೇನೆ ಎಂದು ಹೇಳಿ... ಓ೦- ಹ್ರೀ೦-ಕ್ಷೀ೦-ಶ್ರೀಂ-ಶಿವಾಯ ಬ್ರಹ್ಮಣೇ ನಮಃ ಎ೦ಬ ದ್ವಾದಶಾಕ್ಷರಿ ಮಂತ್ರವನ್ನು ಉಪದೇಶಿಸಿದರು. ನಂತರ ತೀರ್ಥಪಸಾದಗಳನ್ನು ಎಲ್ಲರೂ ಸ್ವೀಕರಿಸಿದರು. ಮರುದಿನ ಉದಯ ಕಾಲದಲ್ಲಿ ಕ೦ದಿಮಲ್ಲಯ್ಯಪಲ್ಲಿಗೆ ಪಯಣ ಬೆಳೆಸಿದರು.
ಶ್ರೀ ಸ್ವಾಮಿಯವರು ಕಂದಿಮಲ್ಲಯ್ಯಪಲ್ಲಿಗೆ ಹಿಂದಿರುಗತ್ತಲೆ ಅಲ್ಲಿನ ಕಳ್ಳರು ಒ೦ದು ಗೂಡಿ ಸ್ವಾಮಿಯವರು ಸಂಚಾರದಲ್ಲಿ ಸಂಪತ್ತನ್ನು ತಂದಿರುತ್ತಾರೆ ಅದನ್ನು ಅಪಹರಿಸಬೇಕೆಂದು ಯೋಚಿಸಿದರು. ಅವರಲ್ಲಿ ಸ್ವಾಮಿಯವರ ಶಿಷ್ಯನು ಒಬ್ಬನಿದ್ದನು. ಅವನಿಂದ ರಾತ್ರಿಯಲ್ಲಿ ಯಾರ್ಯಾರರುತ್ತಾರೆ, " ಮಲಗುತ್ತಾರೆ ಎಂಬ ಮಾಹಿತಿಗಳನ್ನು ತಿಳಿದು ಅಮವಾ ಸೈಯ ಕಾತ್ರಿ ಮಠಕ್ಕೆ ಕನ್ನ ಹಾಕಿದರು. ಅಲ್ಲಿ ಧನ ಕನಕ ಆಭರಣಗಳೇನೂ ಸಿಗಲಿಲ್ಲಚಾಡಗೂ ಅಲ್ಲಿರುವ ಸಾಮಾನುಗಳನ್ನೇ ಮೂಟೆ ಕಟ್ಟಿ ಹೊರತರಲು ಪಯತ್ನಿಸಿಡಾಗ ಯಾರಿಗೂ ಕಣ್ಣುಗಳು ಕಾಣದಾಗಿ ತಡವರಿಸಿದರು. ಕನ್ನಹಾಕಿದ ಕಿಂಡಿ ಆರಿಯದಾಯಿತು. ವಿಧಿಯಿಲ್ಲದೆ ಗೋಳಾಡುತ್ತ ಅಲ್ಲಿಯೇ ಕುಳಿತು ಬಿಟ್ಟರು.
ಬೆಳಗಿನ ಪೂಜೆಗೆಂದು ಮಠದ ಬಾಗಿಲನ್ನು ತೆಗೆದಾಗ ದಿಕ್ಕೆಟ್ಟು ಕುಳಿತ್ತಿದ್ದ ಕಳ್ಳರು ತಡ ಬಡಿಸುತ್ತ ಬಂದು ಶ್ರೀ ಸ್ವಾಮಿಯವರ ಪಾದಗಳನ್ನಿಟದು ಸ್ವಾಮಿ ನಮ್ಮ ಅವಿವೇಕತನಕ್ಕೆ ತಕ್ಕ ಶಾಸ್ತಿಯಾಯಿತು. ತಾವು ಮಹಿಮಾ ಪುರುಷರೆಂದು ಅರಿತಿದ್ದರೂ ಸಹಾ ಧನಕನಕದ ಆಸೆಗಾಗಿ ಅಪರಾಧವನ್ನು ಮಾಡಿದೆವು. ದಯಾಮಯಾ! ನಮ್ಮ ಸರ್ವ ಅಪರಾಧಗಳನ್ನು ಕ್ಷಮಿಸಿ ೈಪೆತೋರಿ ಎ೦ದು ಪಾದಗಳನ್ನು ಬಿಡದಾದರು. ಅಯ್ಯಾ! ನೀವುಗಳು ಅನ್ಯರು ಸಂಪಾದಿಸಿದ ಧನ ಕನಕ ಕ್ಷಣಿಕ ಸಂಪತ್ತನ್ನು ಅಪಹರಿಸಿ ಅನ್ಯರಿಗೆ ಒಂಸೆ ಕೊಡುವ ಬದಲು ಮೋಕ್ಷದಾಯಕವಾದ ಗುರುವಿನಲ್ಲಿರುವ ಜ್ಞಾನ ಸಂಪತ್ತನ್ನು ಕೊಳ್ಳೆಯೊಡೆದು ವಾಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬಾರದೇಕೆ? ಎನಲು ಸುಜ್ಞಾನ ನಿಧಿಯೇ! ನಮಗೆ ಜ್ಞಾನ ಬೋಧೆಯನ್ನು ಮಾಡಿ ನಿಮ್ಮ ಶಿಷ್ಯರನ್ನಾಗಿ ಸ್ವೀಕರಿಸಿ ಕೃತಾರ್ಥರನ್ನಾಗಿಸಿ ಎಂದು ಬೇಡಿದರು ಕಳ್ಳರು. ಕರುಣಾ ಮೂರ್ತಿಗಳಾದ ಸ್ವಾಮಿಯವರು ಕಳ್ಳರಲ್ಲಿ ದಯೆ ತೋರಿ ತಮ್ಮ ಹಸ್ತವನ್ನು ಅವರ ಶಿರಸ್ಸಿನ ಮೆಲಿಡುತ್ತಲೆ ಎಲ್ಲರ ಕಣ್ಣುಗಳು ಕಾಣುವಂತಾದವು. ಅಂದಿನಿಂದ ಅವರು ಮೈದಣಿಸಿ ದುಡಿಯುತ್ತ, ಸ್ವಾಮಿಯವರ ಸೇವೆಯಲ್ಲಿ ನಿರತರಾಗಿರುತ್ತಿದ್ದರು. ಶ್ರೀ ಸ್ವಾಮಿಯವರು ಗುರು ಪೌರ್ಣಮಿಯೊಂದರಲ್ಲಿ ಅವರಲ್ಲರಿಗೂ ಜ್ಞಾನೋಪದೇಶವನ್ನು ಮಾಡಿದರು. ಅಂದಿನಿಂದ ಸ್ವಾಮಿಯವರ ಶಿಷ್ಕರಾಗಿ ಮೋಕ್ಷಮಾರ್ಗವನ್ನು ಕಂಡುಕೊ೦ಡರು. ಇನ್ನು ಸಂಚಾರ ಸಾಕೆಂದು ಮಠದಲ್ಲಿಯೇ ಉಳಿದು ಗೋವಿಂದಯ್ಯಾಚಾರ್ಯ ಸ್ವಾಮಿಯವರಿಗೆ ಸಂಸಾರಣ್ಯ ಸ್ವರೂಪವನ್ನು ಒಳಗೊಂಡು ಅನೇಕ ದೇವರಹಸ್ಕಗಳನ್ನು ಬೋದಿಸುತ್ತಿದ್ದರು. ಮಗೂ! ಗೋವಿಂದಯ್ಯ ನೀನು ಸ್ಥಿತ ಪ್ರಜ್ಞನಾಗಿ ಎಲ್ಲವನ್ನೂ ಸಮತೋಭಾವನೆಯಿಂದ ಕಾಣುತ್ತಿರು. ಮುಂದಿನ ದನಗಳಲ್ಲಿ ನಾನು ತಪೋನಿಷ್ಠೆಗೆ ಕುಳಿತು ಕೊಳ್ಳಬೇಕಾಗುತ್ತದೆ. ನಿನ್ನ ಧರ್ಮಪತ್ನಿ ಗಿರಿಜಮ್ಮನ ಗರ್ಭ ಸ೦ಭೂತೆ ಈಶ್ವರೀ ದೇವಿಯೇ ಈ ಮಠದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾಳೆ ಎಂದು ಹೇಳಿದರು ಶ್ರೀ ಸ್ವಾಮಿಯವರು.
ಊರಿನ ಜನರಂತೆ ಗ್ರಾಮದೇವತೆಯ ಪೂಜೆಗೆ೦ದು ಆಣಿ ಮಾಡುತ್ತಿದ್ದ ಗೋವಿಂದಮ್ಮನವರನ್ನು ಕರೆದು ಗೋವಿಂದಾ ನೀನು ಎಲ್ಲರಂತೆ ಕಲ್ಲುಗಳಿಗೆ ಪೂಜೆ ಮಾಡುವುದು ಸರಿಯೇ ಅಡಿಗೆಯನ್ನು ಸಿದ್ಧಮಾಡು ಗ್ರಾಮದೇವತೆ ಪೋಲೇರಿಯನ್ನೇ ಊಟಕ್ಕೆ ಆಹ್ವಾನಿಸೋಣವೆಂದರು. ಸಂತೋಷ ಭರಿತರಾದ ಗೋವಿಂದಮಾಂಬರು ಅಡಿಗೆಯನ್ನು ಸಿದ್ದಗೊಳಿಸುವುದರೊಳಗೆ ಪೋಲೇರಮ್ಮ ಊಟಕ್ಕೆ ಬರುವ ವಿಷಯಾ ಊರಿನವರಿಗಲ್ಲದೆ ನೆರೆ ಊರಿನವರಿಗೂ ತಿಳಿದು ಜನ ಜಾತ್ರೆಯೇ ಕೂಡಿತು. ಆಕಸ್ಮಿಕವಾಗಿ ಕರ್ನೂಲು ನವಾಬರೂ ಬಂದಿದ್ದರು. ಊಟಕ್ಕೆಂದು ಸ್ವಾಮಿಯವರ ಬಲಭಾಗದಲ್ಲಿ ಪೋಲರಮ್ಮಗೂ ಮಣೆಯನ್ನು ಹಾಕಲಾಗಿತ್ತು. ಎಲ್ಲರೂ ಊಟಕ್ಕೆ ಕುಳಿತಾಗ ಶ್ರೀ ಸ್ವಾಮಿಯವರು ಪೋಲೇರೂ ಈಗಾಗಲೇ ಸಮಯವಾಗಿದೆ ಊಟಕ್ಕೆ ಬಾ ಎನ್ನುತ್ತಲೆ ಪೋಲೇರಮ್ಮ ಹದಿನಾಲ್ಕನೇ ವಯಸ್ಸಿನವಳಾಗಿ ಎಲ್ಲರಿಗೂ ಕಾಣುವಂತೆ ಬ೦ದು ಊಟವನ್ನು ಮುಗಿಸಿ ಶ್ರೀ ಸ್ವಾಮಿಯವರ ಅಪ್ಪಣೆಯಂತೆ ತನ್ನ ಸ್ಥಾನಕ್ಕೆ ಹೊರಟು ಹೋದರು. ಇದೆಲ್ಲವನ್ನು ಕಂಡ ನವಾಬರಾದಿಯಾಗಿ ಭಕ್ತರೆಲ್ಲರೂ ಹರ್ಷಿತರಾಗಿ ನಾವೇ ಭಾಗ್ಯವ೦ತರೆಂದು ಸ್ವಾಮಿಯವರನ್ನು ಜೈಕಾರಗಳಿ೦ದ ಕೊಂಡಾಡುತ್ತಾ ಎಲ್ಲರೂ ಹೋದರು.

