ಶ್ರೀ ಪೋತುಲೂರು ವೀರಬ್ರಹ್ಮೇಂದ್ರಸ್ವಾಮಿ ಸಂಕ್ಷಿಪ್ತ ಚರಿತ್ರೆ

  • ತಲೆಬಾಗಿ ನಡೆಯಬೇಕಾಗಿತ್ತು, ಆರ್ಲಿನ ಸಿತಿ. ಶ್ರೀ ಸ್ವಾಮಿಯವರ ಶಿಷ್ಯ ವೃಂದವು ಮಾಡುತ್ತಿದ್ದ ವೇದಥೋಷಗಳು ಬಿರುದಾವಳಿಗಳು ಆವರ ಕಿವಿಗಳಿಗೆ ಬೀಳುತ್ತಲೆ ಗೋಬ್ರಾಹ್ಮಣರೆಲ್ಲರು ಒಟ್ಟುಗೂಡಿ ಬ೦ದು ಆ ಸಮೂಹವನ್ನೇ ಸುತ್ತು ವರೆದು ನಿಂತು ಎಲವೋ ನೀವುಯಾರು? ಸದ್ಭಾಹ್ಮಣರ೦ತೆ ವೇದ ಘೋಷ ಮಾಡುವ ಅಧಿಕಾರವನ್ನು ನಿಮಗೆ ಕೊಟ್ಟವರ್ಕಾರು? ಸಕಲ ವಿದ್ಯಾ ಪಾರಂಗತ ಪ್ರಕಾಂಡ ಪಂಡಿತರಂತೆ ವಾಹನಾ ರೂಢನಾಗಿರವ ಅವನ್ಯಾರು? ಎ೦ದು ದರ್ಪದಿಂದ ಕೇಳಿದರು. ಆವರ ಮುಂದೆ ನಿಂಶ ಸಿದ್ದಯ್ಯ ಸ್ವಾಮಿ ಪ೦ಡಿತೋತ್ತಮರೇ ನಾವು ಕ೦ದಿಮಲ್ಲಯ್ಯಪಲ್ಲಿ ಪುರವಾಸಿಗಳು. ಗಾಡಿಯಲ್ಲಿ ಕುಳಿತಿರುವವರು ಜಗತ್ ಸೃಷ್ಟಿಕರ್ತ ಭಗವಾನ್ ಶ್ರೀ ವಿಶ್ವ್ಮರ್ಮ ವಂಶಸ್ಥರಾದ ವಿಶ್ವಬ್ರಾಹ್ಮಣ ಗುರುವರ ಶ್ರೀ ಪೋತುಲೂರು ವೀರಬ್ರಹ್ಮೇಂದ್ರಸ್ವಾಮಿಯವರು, ನಾವುಗಳೆಲ್ಲ ಆವರ ಶಿಷ್ಯರು. ನನ್ನನ್ನು ದೊದೇಕುಲ ಸಿದ್ಧಯ್ಯ ಎನ್ನುವರು. ನಾವು ಸ೦ಚಾರಾರ್ದಿಗಳಾಗಿ ಹೋಗುತ್ತಿದ್ದೇವೆಂದು ಹೇಳಿದನು. ಬ್ರಾಹ್ಮಣ ಪಂಡಿತರ ಕೋಪ ನೆತ್ತಿಗೇರಿತು. ಕಣ್ಣುಗಳು ಕೆಂಪಾದವು. ಎಲ್ಲವೋ ನೀನು ಮಹಮದೀಯನಾಗಿದ್ದು ಮೈಗೆ ವಿಭೂತಿ, ಹಣಗೆ ತಿಲಕ, ಕೈಯಲ್ಲಿ ಜಪಮಾಲೆ ಕೊರಳಲ್ಲಿ ರುದ್ರಾಕ್ಷಿ ಹಾರ. ಮ್ಲೇಚ್ಚನಾದ ನಿನ್ನ ಬಾಯಲ್ಲಿ ಮಂತ್ರಗಳೇಕೆ? ಎಂದು ಮಹಾ ಧರ್ಪದಿ೦ಂದ ನುಡಿದರು. ನನಗೆ ನನ್ನ ಗುರುದೇವರು ಹೇಳಿದಂತೆ ನಡೆಯುವುದೊ೦ದಲ್ಲದೆ ಇನ್ಯಾವುದರ ಅಗತ್ಯವೂ ನನಗಿಲ್ಲವೆ೦ದನು ಸಿದ್ಧಯ್ಯ. ಆದರೂ ಸುಮ್ಮನಾಗದ ಬ್ರಾಹ್ಮಣರು ನಾನಾ ಪ್ರಶ್ನೆಗಳನ್ನು ಹಾಕಿದರು. ಅವುಗಳಿಗೆ ತಕ್ಕ ಉತ್ತರವನ್ನು ಸಾವದಾನವಾಗಿಯೇ ಕೊಟ್ಟನು ಸಿದ್ದಯ್ಯ. ಶಾ೦ತರಾಗದ ಆ ಪಂಡಿತರು ಸ್ವಾಮಿಯವರು ಕುಳಿತಿದ್ದ ಗಾಡಿಯನ್ನು ಸುತ್ತುವರಿದು ಏಯ್ ಬ್ರಹ್ಮಯ್ಯ ಸದ್ಧಾಹ್ಮಣನಂತೆ ಗಾಡಿಯಲ್ಲಿ ಕುಳಿತು ವರಾನವಾಗಿದ್ದ ವರಾತ್ರಕ್ಕೆ ನಮ್ಮಿಂದ ತಪ್ಪಿಸಿಕೊಳ್ಳಲಾಗದು. ಅನ್ಯಜಾತಿಯವರನ್ನೆಲಾ ಶಿಷ್ಯರನ್ನಾಗಿ ಮಾಡಕೊಂಡು ವಿಶ್ವಬ್ರಾಹ್ಮಣನೆಂದು ಹೇಳಿಕೊಳ್ಳುತ್ತ ಗುರು ಪೀಠವನ್ನಲಂಕರಿಸಿದ ಮಾತ್ರಕ್ಕೆ ನಮ್ಮಂತೆ ಬ್ರಾಹ್ಮಣನಾಗಬಲ್ಲೆಯಾ? ಬ್ರಾಹ್ಮಣೋಮುಖಮಾಸಿತ್ ೦ಬ ಶೃತಿಯಾನುಸಾರೆ ಬ್ರಹ್ಮಮುಖ ಸ೦ಜಿನಿತರಾದ ನಮಗೆ ವೇದ ಪಾರಾಯಣ ಮಾಡುವ ಅಧಿಕಾರವಿದೆಯೇ ವಿನಹ ಆನ್ಕರಿಗೆಲ್ಲಿಯದು? ವಿಶ್ವಬ್ರಾಹ್ಮಣನೆಂದು ಹೇಳಿಕೊಳ್ಳುವ ನೀನು ನಮ್ಮ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಕೊಡದಿದ್ದರೆ ನಿಮಗೆ ಉಳಿಗಾಲವಿಲ್ಲ ಎಂದು ಒಬ್ಬೊಬ್ಬರೂ ಒಂದೊಂದು ಪ್ರಶ್ನೆಗಳನ್ನು ಹಾಕುತ್ತಿದ್ದರು. ಅವರ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಸಮಾದಾನವಾಗಿಯೇ ಕೊಡುತ್ತಿದ್ದರು, ಶ್ರೀ ಸ್ವಾಮಿಯವರು. ಆದರೆ ಪಂಡಿತರ ಕೋಪವು ಮಾತ್ರ ತಾರಕಕ್ಕೇರುತ್ತಿತ್ತು. ಒಬ್ಬೊಬ್ಬರು ಒಂದೊಂದು ಪಶ್ನೆಯನ್ನು ಹಾಕುತ್ತ ಬ್ರಹ್ಮಯ್ಯ ಬ್ರಾಹ್ಮಣನಲ್ಲದ ನಿನಗೆ ವೇದಾಧಿಕಾರವೆಲ್ಲಿಯದು? ಅ೦ದಮೇಲೆ ನಿನ್ನ ಶಿಷ್ಯ ದೂದೇಕುಲದವನಾದ ಸಿದ್ಧಯ್ಯನಿಗಿನ್ನೆಲ್ಲಿದೆ? ಅಧಿಕಾರ ಎ೦ದರು ಪಂಡಿತರು. ಆಯ್ಯಾ! ವಿಪ್ರ ಪಂಡಿತರೇ ಜನ್ಮಜಾಯತೇ ಶೂದ್ರ ಅಂದಮೇಲೆ ಎಲ್ಲರೂ ಯೋನಿ ಸಂಭೂತರೇ ಆಗಿರುವುದರಿ೦ದ ಹುಟ್ಟಿನಿಂದ ಎಲ್ಲರೂ ಶೂದ್ರರೆ! ಜಗತ್ತಿನಲ್ಲಿ ಬ್ರಹ್ಮನ ಮುಖದಿ೦ದ ಜನಿಸಿದವರು ಯಾರೋಬ್ಬರೂ ಇಲ್ಲ. ಹೀಗಿರುವಾಗ ನಮ್ಮ ಶಿಷ್ಯ ಸಿದ್ದಯ್ಯ ದೂದೇಕುಲದವನಾದರೂ ಬ್ರಹ್ಮಜ್ಞಾನದಲ್ಲಿ ಸದ್ದಾಹ್ಮಣನೇ ಆಗಿರತ್ತಾನೆ. ಬ್ರಹ್ಮಜ್ಞಾನಂತು ಬ್ರಾಹ್ಮಣ ಎಂದು ಹೇಳಿಲ್ಲವೆ? ಎಂದರು ವೀರಬ್ರಹ್ಮೇಂದ್ರಯವರು. ಆಗ ಪಂಡಿತರಲ್ಲೊಬ್ಬರು ನಿಮ್ಮಿಂದ ಪಾಂಡಿತ್ಯವನ್ನು ಕೇಳುವ ಅಗತ್ಯ ನಮಗಿಲ್ಲ. ನಮ್ಮ ಪಾಂಡಿತ್ಯದ ವಿದ್ವತ್ತನ್ನು ಮೆಚ್ಚಿ ರಾಜ ಮಹಾರಾಜರುಗಳು ಕೊಟ್ಟ ಬಿರುದಾವಳಿಗಳು ಅಷ್ಟೇ? ಇಷ್ಟೇ? ನಿಮ್ಮಲ್ಲಿ ಒಂದಾದರೂ ಇಲ್ಲವಲ್ಲ ಪಂಡಿತರೇ ನಮಗೆ ರಾಜ ಮಹಾರಾಜರುಗಳು ಕೊಡುವ ಬಿರುದುಗಳ ಅಗತ್ಯವಿಲ್ಲ. ಮಾನವೀಯತೆಯ ಸಮಾನತೆಯು ಬೇಕಷ್ಟೆ. ನಿಮ್ಮಲ್ಲಿನ ಬಿರುದುಗಳಲ್ಲೂ ಇಂದಿನ ನಿಮ್ಮ ವರ್ತನೆಯಲ್ಲೂ ಬಾಯ್ಕಾತಿನ ಬೆದರಿಕೆಗಳಲ್ಲದೆ ಬ್ರಹ್ಮಜ್ಞಾನ ಕಿಂಚಿತ್ತು ಕಾಣುತ್ತಿಲ್ಲವಲ್ಲ? ಎನಲು ಮತ್ತೊಬ್ಬ ಪಂಡಿತನು ಭೂಸುರರೆನಿಸಿದ ನಮ್ಮನ್ನು ನಿಂದಿಸಿದರೆ ನಿಮ್ಮನ್ನು ನಾವು ಸುಮ್ಮನೆ ಬಿಟ್ಟೇವೆಯೇ? ನಮ್ಮಲ್ಲಿ ಕ್ಷಮಾಪಣೆಯನ್ನು ಕೇಳಿ. ನೀವು ಹಿ೦ದಿರುಗ ಬೇಕಲ್ಲದೆ ಮುಂದೆ ಒಂದು ಹೆಜ್ಜೆಯೂ ಹೋಗುವಂತಿಲ್ಲವೆಂದನು. ಅಯ್ಯಾ! ಇಂದಿನ ನಿಮ್ಮ ವರ್ತನೆಯಲ್ಲಿ ಅಸುರತ್ಹವೇ ತುಂಬಿದೆಯಲ್ಲದೆ ಭೂಸುರತ್ವವು ಸ್ವಲ್ಪವಾದರೂ ಇಲ್ಲವಲ್ಲ? ಬ್ರಾಹ್ಮಣರಲ್ಲಿ 1 ಸದ್ಭಾಹ್ಮಣರು, 2 ಕರ್ಮಬ್ರಾಹ್ಮಣರು, 3 ವೇಷ ಬಾಹ್ಮಣರೆಂದು ಮೂರು ವಿಧಾನಗಳಿವೆ. ಒ೦ದನೆಯದೆಂದರೆ ಬ್ರಹ್ಮಜ್ಞಾನವನ್ನು ಪಡೆದವರು ಸದ್ಭಾಹ್ಮಣರು. ಎರಡನೆಯದಾಗಿ ತಮ್ಮ ಕರ್ಮಾದಿಗಳಲ್ಲಿ ಬ್ರಹ್ಮಜ್ಞಾನವಿಲ್ಲದೆ ಬ್ರಾಹ್ಮಣ ಚಿಹ್ನೆಯನ್ನು ತೋರುತ್ತ, ತಮ್ಮ ತಪ್ಪಿನ ಅರಿವಿಲ್ಲದವರಾಗಿ, ಅನ್ಯರ್ಕಾರಾದರು ಭಕ್ತಿ, ಭಗವನ್ನಿಷ್ಠೆ ವೇದಪಾರಾಯಣ ಮಾಡುತ್ತ ಮೋಕ್ಷಾಪೇಕ್ಷೆಯಲ್ಲಿರುವವರನ್ನು ಕ೦ಡು ಸಹಿಸಲಾಗದೆ ಮೋಸದಿಂದ ವರ್ಣಭೇದವನ್ನು ಎತ್ತಿ ಹಿಡಿದು ಹಿ೦ಎಸಿಸುವವರು ಕರ್ಮ ಬ್ರಾಹ್ಮಣರು. ಮೂರನೆಯದು ರಾತ್ರಿ ವೇಷವನ್ನು ಧರಿಸಿ ಹಗಲು ಶೂದನಾಗಿರುವುದೇ ವೇಷ ಬ್ರಾಹ್ಮಣರು. ಹೀಗಿರುವುದರಿಂದ ಆ ಭಗವಂತನ ಸೃಷ್ಟಿಯಲ್ಲಿ ಸರ್ವರಿಗೂ ವೇದ ಪಾರಾಯಣಗಳನ್ನು ಮಾಡುವ ಅಧಿಕಾರವಿದೆ. ಯತಾರ್ಥವಾದಿ ಜಗದ್ವಿರೋದಿಯೆಂದಿದೆ. ವೇಷದಾರಿಗಳಿಗೆ ಯತಾರ್ಥವರ್ಥವಾಗಲಾರದು ಎಂದು ಹೇಳಿದರು. ಶ್ರೀ ವೀರಬ್ರಹ್ಮೇಂದ್ರಸ್ವಾಮಿಯವರು.

    ಶ್ರೀ ವೀರಬ್ರಹ್ಮೇಂದ್ರಸ್ವಾಮಿಯವರ ಉತ್ತರಕ್ಕೆ ಬೆಲೆ ಕೊಡದ ವಿಪ್ರ ಪಂಡಿತರು ನಮ್ಮ ಪಾಂಡಿತ್ಯದ ಅರ್ಥವಿಲ್ಲದ ಈ ಕಮ್ಮಾರನೊಬ್ಬ ಗುರು, ಈತನಿಗೆ ಕುಲ ಹೀನರು ಶಿಷ್ಕರು. ಇಂಥವರಲ್ಲಿ ಪಾಂಡಿತ್ಯದ ವಿಷಯವೇಕೆ. ಐವರನ್ನೆಳೆದು ನಮ್ಮ ಅಗ್ರಹ್ಯಾರದಿ೦ದ ಹೋರದೂಡುವುದೇ ಸರಿ! ಎಂದು ಸ್ವಾಮಿಯವರನ್ನು ಗಾಡಿಯಿಂದ ಎಳೆಯಲು ಮುಂದಾದರು. ಆಗ ಶ್ರೀ ವೀರಬ್ರಹ್ಮೇಂದ್ರ ಸ್ವಾಮಿಯವರು ಈ ಪಂಡಿತರಿಗೆ ಸಮಾದಾನ ಸರಿಯಾದ ಉತ್ತರವಲ್ಲವೆ೦ದು ತಮ್ಮ ಉಗ್ರದೃಷ್ಟಿಯನ್ನು ಅಗ್ರಹಾರದ ಕಡೆಗೆ ಬಿಡುತ್ತಲೆ ಅಗ್ರಹಾರವೆಲ್ಲ ಅಗ್ನಿಜ್ಜಾಲೆಯಿಂದ ದಗದಗನೆ ಉರಿಯಶತ್ತಿತು. ಅದನ್ನು ನೋಡಿದ ಆ ವಿಪ್ರ ಪಂಡಿತರು ಸಿ೦ಹದ ಮುಂದೆ ನಿ೦ಶ ಸ್ವಾನನಂತಾದರು. ಅವರ ಪ್ರಾಣ, ತ್ರಾಣಗಳು ನಿತ್ರಾಣವಾಗಿ ನಿ೦ತು ಬಟ್ಟರು. ಅಷ್ಟರಲ್ಲಿ ಹಿ೦ದೆ ಕುಷ್ಟರೋಗದಿ೦ದ ಮುಕ್ತನಾಗಿದ್ದ ಬ್ರಾಹ್ಮಣೋತ್ತಮ ಅಲ್ಲಿಗೆ ಬಂದು ಸಾಷ್ಟಾಂಗವನ್ನು ಹಾಕಿ ವಿನಯ ವಿಧೇಯತೆಗಳಿಂದ ದಯಾಪರಾ! ಸದ್ಗುರುದೇವಾ! ನಿಮ್ಮ ಮಹಿಮೆಯನ್ನರಿಯದ ಇವರಿಗೆ ಅಕ್ಷರ ಪಾಂಡಿತ್ಯವಲ್ಲದೆ ಬ್ರಹ್ಮಜ್ಞಾನ ಪಾಂಡಿತ್ಯವಿಲ್ಲದಿರುವುದೇಇಂಥಾ ಅನುಹುತಕ್ಕೆ ಕಾರಣವಾಗಿದೆ. ಮಹಾಮಹಿಮಾ! ಕರುಣಾಮಯಾ! ನಮ್ಮಲ್ಲಿ ದಯೆತೋರಿ ಆ ಅಗ್ರಹಾರಿಕರಲ್ಲಿ ಕ್ಷಮಾ ಭಿಕ್ಷೆಯನ್ನು ಕರುಣಿಸಿ ಕಾಪಾಡಿ ತಂದೆಯೇ ಎ೦ದು ಮತ್ತೊಮ್ಮೆ ಸಾಷ್ಟಾಂಗವನ್ನು ಹಾಕಿದನು ಆ ಸದ್ದಾಹ್ಮಣೋತ್ತಮನು. ಸುಜ್ಜಾನಿಯಾದ ಬ್ರಾಹ್ಮಣನ ಬೇಡಿಕೆಗೆ ಸಮಾಧಾನಗೊಂಡ ಶ್ರೀ ವೀರಬ್ರಹ್ಮೇಂದ್ರಸ್ವಾಮಿಯವರು ತಮ್ಮಲ್ಲಿರುವ ಮಾಂತ್ರೋದಕವನ್ನು ಪ್ರೋಕ್ಷಿಸಲು ಅಗ್ರಹಾರವು ಮೊದಲಿನಂತೆಯೇ ಆಯಿತು.

    ನಿರ್ವೀಣವಾಗಿ ನಿಂತಿದ ವಿಪ್ರ ಪಂಡಿತರಿಗೆ ಪ್ರಾಣ, ತ್ರಾಣಗಳು ಮರುಕಳಿಸಿದವು. ಅವರೆಲ್ಲರೂ ಒಂದೇ ಸಲ ತ್ರಾಹೀ ತ್ರಾಹೀ ಎಂದು ಸಾಷ್ಟಾಂಗವನ್ನು ಹಾಕಿದರು. ಶ್ರೀ ವೀರಬ್ರಹ್ಮೇ೦ದ್ರ ಗುರುವೇ ನಮ್ಮ ಅಜ್ಞಾನಕ್ಕೆ ತಕ್ಷ ಪಾಠವನ್ನು ಕಲಿಸಿದಿರಿ. ನಮಗೆ ಜ್ಞಾನದ ಒಳಗಣ್ಣನ್ನು ತೆರಸಿದಿರಿ ಎಂದು ತಮ್ಮ ತಪ್ಪಿಗಾಗಿ ಮತ್ತೆ ಮತ್ತೆ ಕ್ರಮಯನ್ನು ಯಾಚಿಸಿ ಅಂಜುತ್ತಾ ನಿಂತರು. ಅಯ್ಯಾ! ವಿಪ್ರೋತ್ತಮರೇ ಯಾರೇ ಆಗಲಿ ಗುರುಸೇವೆಯಿಂದ ಪರತತ್ತ್ವವನ್ನರಿತವರೇ ಸುಜ್ಜಾನಿಗಳಾಗಿ ಸದ್ಧಾಹ್ಮಣರೆನಿಸುತ್ತಾರೆ. ಹುಟ್ಟಿನಿಂದ ಯಾರೂ ಬಾಹ್ಮಣರಾಗುವುದಿಲ್ಲ. ಅವರವರ ವರ್ತನೆಗಳಿಂದ ವರ್ಣಭೇದಗಳು ಕಲ್ಪಿತವಾಗುತ್ತವೆ. ಕಲ್ಪಿತ ವಿದ್ಯೆಗಿಂತಲೂ ಬ್ರಹ್ಮಜ್ಞಾನ ಸ೦ಪದವೇ ಶ್ರೇಷ್ಠವೆಂದು ತಿಳಿದು ಇನ್ನು ಮುಂದೆಯಾದರೂ ಸದ್ಧಾವನೆಯಿ೦ದ ವರ್ತಿಸಿರಿ. ನಮಗೆ ಹೋಗಲು ದಾರಿಯನ್ನು ಬಿಡಿ ಎಂದರು ಶ್ರೀಸ್ವಾಮಿಯವರು.