
ಶ್ರೀ ಪೋತುಲೂರು ವೀರಬ್ರಹ್ಮೇಂದ್ರಸ್ವಾಮಿ ಸಂಕ್ಷಿಪ್ತ ಚರಿತ್ರೆ
-
ಕಡಪದಲ್ಲಿ ಮಹಿಮೆ ತೋರಿದ್ದು
ಶ್ರೀ ಸ್ವಾಮಿಯವರು ನಾವು ಕಡಪಕ್ಕೆ ಬರುತ್ತಿರುವುದಾಗಿ ಜವಾನನೊಂದಿಗೆ ಶ್ರೀಮುಖ ಲೇಖನವನ್ನು ಕಡಪದ ನವಾಬರಿಗೆ ತಲುಪಿಸಿದರು. ಶ್ರೀ ಮುಖವನ್ನು ಓದಿ ಮಹದಾನಂದಿ೦ದ ನವಾಬರು ತಮ್ಮ ಜವಾನರಿಗೆ ಕಡಪ ನಗರವನ್ನು ಅಲಂಕರಿಸಿ ಸ್ವಾಮಿಯವರು ಬರುವ ವಿಷಯವನ್ನು ರಾಜ ಬೀದಿಗಳಲ್ಲಿ ಡ೦ಗೂರ ಹಾಕಿಸುವುದಾಗಿ ಅಪ್ಪಣೆ ಮಾಡಿದರು. ಕಡಪ ರಾಜಬೀದಿಗಳೆಲ್ಲ ಅಲಂಕಾರಗೊಂಡು ದೀಪಾಲಂಕಾರಗಳಿಂದ ವೇದಿಕೆಯೊಂದು ಸಿ.ನ್ಧವಾಯಿತು. ನಗರದ ಜನರು ತಮ್ಮ ಮನೆಗಳ ಮುಂದೆ ಸ್ವಚ್ಛಗೊಳಿಸಿ ರಂಗೋಲಿಗಳಿ೦ದ ಅಲಂಕರಿಸಿ ಸ್ವಾಮಿಯವರ ಬರುವಿಕೆಯನ್ನು ಎದುರು ನೋಡುತ್ತಿದ್ದರು. ಹೂವಿನ ಪಲ್ಲಕ್ಕಿ ಮಂಗಳ ವಾದ್ಯಗಳೊಂದಿಗೆ ನವಾಬರು, ನಗರದ ಪ್ರಮುಖರು ಊರ ಹೊರ ಭಾಗದಲ್ಲಿ ಕಾದು ನಿ೦ತರು.
ಶ್ರೀ ವೀರಬ್ರಹ್ಮೇಂದ್ರಸ್ವಾಮಿಯವರು ನಗರವನ್ನು ಸಮೀಪಿಸುತ್ತದ್ದಂತೆ ಪುಷ್ಪ ಹಾರಗಳನ್ನು ಹಾಕಿ ಸಲಾಮುಗಳನ್ನು ನಮಸ್ಕಾರಗಳನ್ನು ಮಾಡಿ ಸ್ವಾಮಿಯವರನ್ನು ಹೂವಿನ ಪಲ್ಲಕ್ಕಿಯಲ್ಲಿ ಕೂಡಿಸಿಕೊಂಡು ಮಂಗಳವಾದ್ಯಗಳನ್ನು ಮಾಡುತ್ತ ರಾಜಬೀದಿಗಳಲ್ಲಿ ಉತ್ಸವವನ್ನು ಮಾಡುತ್ತ ಅಲಂಕೃತ ವೇದಿಕೆಗೆ ಕರೆತಂದರು. ಜೈ! ಪೋತುಲೂರು ವೀರಬ್ರಹ್ಮೇಂದ್ರಸ್ವಾಮಿಯವರಗೆ ಜೈ! ಎ೦ದು ಜಯಕಾರಗಳನ್ನು ಮಾಡಿದರು. ನಂತರ ರಾಜಗ್ಯಹಕ್ಕೆ ಆಹ್ವಾನಿಸಿ ಬ೦ಗಾರದ ಅರಿವಾಣದಲ್ಲಿ ಶ್ರೀಗಳವರ ಪಾದಗಳನ್ನು ತೊಳೆದು ನಮಸ್ತರಿಸಿದ ನಂತರ ಭೋಜನ ವ್ಯವಸ್ಥಿತವಾಗಿ ರಾತ್ರಿ ಭೋಜನಾ ನಂಶರ ನವಾಬರು ಸ್ವಾಮಿಯವರೊಂದಿಗೆ ಹಲವಾರು ವಿಷಯಗಳನ್ನು ಮಾತನಾಡಿದರು. ಬ೦ದ೦ಥ ಅತಿಥಿಗಳಿಗೆ ಶಯನ ಗೃಹವನ್ನು ತೋರಿಸಿ ನವಾಬರು ತಮ್ಮ ಶಯನಾಗೃಹಕ್ಕೆ ಹೋದರು.
ಅ೦ದಿನರಾತ್ರಿ ನವಾಬರಿಗೆ ಬಹು ಸಮಯದವರೆಗೆ ನಿದ್ರೆಬಾರದೆ ಯೋಚನಾಮಗ್ರರಾದರು. ಹಿ೦ದೆ ರಾಜ ಸಭೆಯಲ್ಲಿ ನಡೆದ ಶಿಷ್ಯ ಸಿದ್ಧಯ್ಯನ ಮಹಿಮೆಯೇ ಅಂತಿದ್ದಮೇಲೆ ಗುರು ಶ್ರೀ ವೀರಬ್ರಹ್ಮೇಂದ್ರಸ್ವಾಮಿಯವರ ಮಹತ್ವವಿನ್ನೆಪ್ಪಿರಬಹುದು. ಇದನ್ನು ಪರೀಕ್ಷಿಸುವದು ಹೇಗೆಂದು ಬಹಳವಾಗಿ ಯೋಜಿಸಿ ಕೊನೆಗೊಂದು ನಿರ್ಧಾರಕ್ಕೆ ಬಂದು ಮಲಗಿದರು.
ಮರುದಿನ ವೇದಿಕೆಯ ಮುಂದೆ ಜನ ಸಮೂಹ ತುಂಬಿತ್ತು ಶ್ರೀಸ್ವಾಮಿಯವರು ಮನುಕುಲ ಧರ್ಮವನ್ನು, ರಾಜನೀತಿಗಿಳನ್ನು, ಜ್ಞಾನ ಮಾರ್ಗವನ್ನು, ಮುಕ್ತಿಪಥವನ್ನು ಬೋಧಿಸಿದರು. ನಂತರ ನವಾಬರು ಯೋಚನಾ ಮಗ್ನರಾಗಿ ಕುಳಿತಿರುವುದನ್ನು ಕ೦ಡು ರಾಜನ್! ನಿಮ್ಮ ಯೋಚನೆಗೆ ಕಾರಣವೇನೆನಲು ಮಹಾಸ್ವಾಮಿ! ನನಗೊ೦ದು ಸಂದೇಹ ಬಾಧಿಸುತ್ತಿದೆ ಎಂದರು ನವಾಬರು. ನಿಮ್ಮ ಯೋಚನೆಯೇನೆಂಬುದನ್ನು ನಾವು ಬಲ್ಲೆವು. ರಾಜನ್! ಈಗಾಗಲೆ ಗುಪ್ತವಾಗಿರಿಸಿರುವ ಗಬ್ಬದ ಕುದುರೆಯನ್ನು ಹಿಡಿ ತರಿಸಿ ಅದರ ಸುತ್ತಲೂ ಮರೆಯನ್ನು ಮಾಡಿಸಿ ಎ೦ದು ಹೇಳಿದರು. ಸ್ವಾಮಿಯವರು. ಆಶ್ಚರ್ಯವನ್ನು ವ್ಯಕ್ತಪಡಿಸುತ್ತ ಸ್ವಾಮೀಜಿ ಆ ಕುದುರೆಯು ಜನ್ಮಕೊಡುವುದು ಗಂಡು ಮರಿಗೋ ಹೆಣ್ಣು ಮರಿಗೋ ಎ೦ದು ಮರು ಪ್ರಶ್ನೆ ಮಾಡಿದರು. ನವಾಬರು. ಅದಕ್ಕೆ ಸ್ವಾಮಿಯವರು ರಾಜನ್! ಆ ಕುದುರೆ ಗ೦ಡು ಮರಿಗೆ ಜನ್ಮ ಕೊಡುತ್ತದೆ ಅದರ ಬಲ ಭಾಗದಲ್ಲಿ ಮಚ್ಚೆಯೊ೦ದು ಅಗಲವಾಗಿರುತ್ತದೆಂದು ಉತ್ತರಿಸಿದರು. ಸಮಾಧಾನಗೊಳ್ಳದ ನವಾಬರು ಮಹಾಸ್ವಾಮಿ! ಕುದುರೆ ಮರಿ ಹಾಕುವವರೆಗೂ ಇರುವವರ್ಕಾರೋ ಇಲ್ಲದವರ್ಕಾರೋ ನಮ್ಮ ಸಂದೇಹವು ತೀರುವುದು ಹೇಗೆ೦ದರು. ಅದರ ಸಲುವಾಗಿಯೆಳಕಿ ಕುದುರೆಯನ್ನು ಸಭೆಗೆ ಹಿಡಿತರಲು ಹೇಳಿದ್ದು ಎನಲು ಆ ಶಕ್ಷಣ ಕುದರೆಯನ್ನು ಹಿಡಿತರಿಸಿ ಸುತ್ತಲು ಮರೆನ್ನು ಮಾಡಿಸಿದರು. ಸಭಿಕರೆಲ್ಲರೂ ನೋಡುತ್ತಿದ್ದ ಹಾಗಯೆ ಕುದುರೆಯ ಬಳಿ ಹೋದ ಸ್ವಾಮಿಯವರು ಕೈಯಲ್ಲಿದ್ದ ಬೆತ್ತವನ್ನು ಕುದುರೆಗೆ ಮುಟ್ಟಿಸಲು ಗಂಡು ಮರಿಯು ಹೊರ ಬಂತು. ಜವಾನನಿಂದ ಸಭಿಕರೆಲ್ಲರೂ ನೋಡುವಂತೆ ಎತ್ತಿ ಹಿಡಿದು ತೋರಿಸಿದರು. ಮೊದಲೇ ಹೇಳಿದ೦ತೆ ಮರಿಯ ಬಲಭಾಗದಲ್ಲಿದ್ದ ಮಚ್ಚೆ ಎಲ್ಲರಗೂ ಎದ್ದು ಕಾಣುತ್ತಿತ್ತು. ಅದನ್ನು ನೋಡಿದ ಎಲ್ಲರೂ ಪರಮಾಶ್ಚರ್ಯಗೊಂಡು ಒಮ್ಮಿಂದೊಮ್ಮೆಗೆ ಜೈ! ಪೋತುಲೂರು ವೀರಬ್ರಹ್ಮೇಂದ್ರಸ್ವಾಮಿಯವರಿಗೆ ಜೈ! ಜೈ! ಮಹಿಮಾ ಪುರುಪರಿಗೆ' ಜೈ! ಎಂದು ಮುಗಿಲು ಮುಟ್ಟುವಂತೆ ಜಯಕಾರಗಳನ್ನು ಮಾಡಿದರು. ನವಾಬರು ತಲೆಬಾಗಿ ಮತ್ತೊಮ್ಮೆ ಸಲಾಮನ್ನು ಸಲ್ಲಿಸಿದರು, ಆರಾತ್ರಿ ಎಲ್ಲರಿಗೂ ಕಾಲಜ್ಜಾನ ಬೋಧೆಯನ್ನು ಮಾಡಿದರು. ಸಭೆಯ ನಂತರ ತೀರ್ಥ ಪ್ರಸಾದಗಳನ್ನು ಸ್ವೀಕರಿಸಿ ರಾತ್ರಿ ಭೋಜನಾನಂತರ ಅವರವರ ಗೃಹಗಳಿಗೆ ಹೋಗಿ ನಿದಿಸಿದರು.
ಕಾಲಜ್ಞಾನ
ಮಾರನೇ ದಿನ ಪ್ರಯಾಣಕ್ಕೆ ಸಿದ್ಧವಾಗುತ್ತಿದ್ದಂತೆ ಮ೦ಗಳವಾದ್ಯಗಳು ಮೊಳಗಿದವು. ಬಂದವರೆಲ್ಲರೂ ಜಯಫೋಷಣಗಳನ್ನು ಮಾಡುತ್ತಿದ್ದರು. ನವಾಬರೂ ರಾಜಭಟರೂ ಪುರಪಮುಖರೂ ನಗರದ ಹೊರ ಭಾಗದವರೆಗೂ ಬ೦ದು ಸ್ವಾಮಿಯವರನ್ನು ಭೀಳ್ಕೊಟ್ಟರು.
ಕಡಪದಿ೦ದ ಪ್ರಯಾಣಿಸಿದ ಸ್ವಾಮಿಯವರ ಸಮೂಹ ಅಲ್ಲಾಟಪಲ್ಲೆಗೆ ಬ೦ದು ಶ್ರೀ ವೀರಭದ್ರಸ್ವಾಮಿಯನ್ನು ಪೂಜಿಸಿ ಹೋಗಲೆಂದು ಮಾರ್ಗ ಮಧ್ಯದ ಅಡವಿಯಲ್ಲಿ ಹೋಗುತ್ತಿರುವಾಗ ದಾರಿ ಹೋಕರನ್ನು ದೋಚಿ ತಿನ್ನುತ್ತಿದ್ದ ಕಳ್ಳರ ಗು೦ಪು ಬ೦ದು ಸಮೂಹವನ್ನು ತಡೆದು ನಿಮ್ಮಲ್ಲಿರುವ ಸ೦ಪತ್ತೆಲ್ಲವನ್ನು ಕೊಡದಿದ್ದರೆ ಯಾರೂ ಮುಂದೆ ಹೋಗುವಂತಿಲ್ಲ ಎಂದು ಗದರಿಸಿದರು. ನಮ್ಮಲ್ಲಿ ಗುರುಸ್ಮರಣೆಯೊ೦ದಲ್ಲದೆ ನಿಮಗೆ ಕೊಡುವಂಹ ಸಂಪತ್ತು ನಮ್ಮಲ್ಲಿ ಏನೂ ಇಲ್ಲವೆಂದು ಉತ್ತರಿಸಿದ ಸಿದ್ದಯ್ಯ! ಗಾಡಿಯಲ್ಲಿ ಕುಳಿತಿದ್ದ ಶ್ರೀ ಸ್ವಾಮಿಯವರ ಬಳಿ ಬ೦ದ ಕಳ್ಳರು ನಿಮ್ಮಲ್ಲಿರುವುದನ್ನು ಕೊಡದಿದ್ದರೆ ನಿಮ್ಮ ಪ್ರಾಣಗಳು ಉಳಿಯುವಂತಿಲ್ಲವೆಂದು ಬೆದರಿಸಿದರು. ಸುಮ್ಮನೆ ಕುಳಿತಿದ್ದರು ಸ್ವಾಮಿಯವರು. ಅವರನ್ನು ಸುಮ್ಮನೆ ಕೇಳಿದರೆ ಬಗ್ಗುವವರಲ್ಲವೆ೦ದು ದೊಣ್ಣೆಗಳನ್ನೆತ್ತಿ ಹೊಡೆಯಲೋದರು. ಎತ್ತಿದ ಕೈಗಳನ್ನು ಇಳಿಸಲಾಗಲಿಲ್ಲ ಕಳ್ಳರಿಗೆ ಅವರ ಪ್ರಯತ್ನಗಳೇನೂ ಫಲಿಸಲಿಲ್ಲ. ನೆಟ್ಟ ಕಂಬದಂತೆ ತಲೆ ತಗ್ಗಿಸಿ ಪಿಳಿ ಪಿಳಿ ಕಣ್ಣುಗಳನ್ನು ಬಿಡುತ್ತ ನಿಂತು ಬಿಟ್ಟರು. ಅವರಲ್ಲೊಬ್ಬನು ನಾಚುತ್ತ ಸಂಕಟದಿ೦ದ ಸ್ವಾಮಿ! ಮಹಾಮಹಿಮಾ! ನಿಮ್ಮನ್ನು ಸಾಮಾನ್ಯರಂತೆ ಭಾವಿಸಿದ ನಮ್ಮನ್ನು ಕ್ಷಮಿಸು ತಂದೆಯೇ. ನಮಗೆ ಶ್ರಮಾದಾನ ಭಿಕ್ಷೆಯನ್ನಿತ್ತು ಮೊದಲಿನ೦ತಿರುವ೦ತೆ ಕರುಣಿಸು ಕರುಣಾಮಯಾ ಎಂದು ಬಹುವಿಧವಾಗಿ ಬೇಡಿದನು. ಕರುಣೆಯನ್ನು ತೋರಿದ ಸ್ವಾಮಿಯವರು ಆಯ್ಯಾ! ಅನ್ಯರನ್ನು ಹಿಂಸಿಸಿ ಬಡಿದು ತಿನ್ನುವುದಕ್ಕಿಂತ ಮೈದಣಿಸಿ ದುಡಿದುಣ್ಣುವುದೇ ಶ್ರೇಷ್ಠಧರ್ಮವೆಂದು ಬೋಧಿಸಿ ಕಮಂ೦ಡಲೋದಕವನ್ನು ಪ್ರೋಕ್ಷಿಸಿದರು. ಕೆಳಗಿದವರಾದರೂ ತಲೆಗಳನ್ನು ಎತ್ತಲಾಗಲಿಲ್ಲ. ಗೊಳೋ ಎಂದು ಕಣ್ಣೀರು ಸುರಿಸುತ್ತ ಅಳತೊಡಗಿದರು. ನಿಮಗೆ ಈಜನುಮದ ಫಲವಿಷ್ಟೆ ಎ೦ದು ಹೇಳಿ ಮುಂದೆ ಪ್ರಯಾಣಿಸಿದರು.
ಶ್ರೀ ಸ್ವಾಮಿಯವರ ಸಮೂಹವು ಪುಷ್ಪಗಿರಿಯ ಪ್ರಮುಖ ಬೀದಿಯಲಿ ಸಾಗುತ್ತ ವೇದಥೋಷಗಳನ್ನು ಕೆಲವರು ಮಾಡುತ್ತಿದ್ದರೆ ಕೆಲವರು ವೀರಬ್ರಹ್ಮೇ೦ದ್ರ ಸ್ವಾಮಿಯವರ ಮುವ್ವತ್ತೆರಡು ನಾಮಾವಳಿ ಬಿರುದುಗಳನ್ನು ಸ್ಮರಿಸುತ್ತಲಿದ್ದರು. ಶ್ರೀ ಸ್ವಾಮಿಯವರು ಕುಳಿತದ್ದ ಚಕ್ಕಡಿ ಗಾಡಿಯ ಹಿಂದೆಯೇ ಗುರುಸ್ಮರಣೆಯಲ್ಲಿ ಸಿದ್ದಯ್ಯ ನಡೆಯುತ್ತಿದ್ದನು. ಆ ಬೀದಿಯಲ್ಲಿ ಬಹುತೇಕ ಮಟ್ಟಿಗೆ ಗೋ ಬ್ರಾಹ್ಮಣರೇ ವಾಸವಾಗಿದ್ದರು. ಅವರೆಲ್ಲರೂ ಪ್ರಕಾ೦ಡ ಪ೦ಡಿತರಾಗಿದ್ದು ರಾಜ ಮಹಾರಾಜರಿ೦ದ ಅನೇಕ ಬಿರುದಾವಳಿಗಳನ್ನು ಧನ ಕನಕ ವಸ್ತಾದಿಗಳನ್ನು ಬಹುಮಾನವಾಗಿ ಪಡೆದಿದ್ದರು. ಅವರ ಮುಂದ ಸಾಮಾನ್ಯರ್ಯಾರೂ ಯಾವುದೇ ವಾಹನ ರೂಢರಾಗಿ ಹೋಗುವಂತಿರಲಿಲ್ಲ.

