ಶ್ರೀ ಪೋತುಲೂರು ವೀರಬ್ರಹ್ಮೇಂದ್ರಸ್ವಾಮಿ ಸಂಕ್ಷಿಪ್ತ ಚರಿತ್ರೆ

  • ನಾನು ನನ್ನ ಪೂಜ್ಯಗುರುವಿನ ಶಿಷ್ಯನಷ್ಟೆ ಎಂದನು ಸಿಧಯ್ಸಾ ಎರಡೂ ಅರಿಯದ ನಿನಗೆ ನಿನ್ನ ಗುರುವು ಕಲಿಸಿರುವ ಪಾಠ ಲದೇನೆ?' ಎಂದು ಕೇಳಲು ನನ್ನ ಗುರುಗಳ ವಿಷಯ ಇಲ್ಲಿ ಬೇಕಾಗಿಲ್ಲ. ತಾವು ಸುಮ್ಮನೆ ಕಳಿಸಿದ ಕಾರಣವಷ್ಟನ್ನೇ ತಿಳಿಸಿ ಎ೦ದನು ಸಿದ್ದಯ್ಯ ಎಂಥಾ ದುರಹಂಕಾರದ ಮಾತು. ಮೊದಲು ಗುರು ಸನ ನೂ ಆಸ್ಥಾನದ ದೊರೆಗಳಿಗೂ ಸಲಾಮನ್ನು ಮಾಡುವುದನ್ನು ಕಲಿ ಇಲ್ಲವಾದರೆ ಇದಕ್ಕೆ ಶಿಕ್ಷೆ ಏನೆಂಬುದು ಗೊತ್ತೇ? ಎ೦ದು ದರ್ಪದಿಂದ ಕೇಳಿದರು ನವಾಬರು. ನವಾಬೂಜೀ! ನಿಮ್ಮ ಶಿಕ್ಷೆ, ರಕ್ಷೆ ನನ್ನನ್ಸೇನೂ ಭಾ ನಾನು ಸಲಾಮನ್ನು ಮಾಡದಿರುವುದಕ್ಕೆ ಕಾರಣವೆಂದರೆ ನನ್ನ ಸಲಾಮನ್ನು ನನ್ನ ಸದ್ಗುರು ದೇವರು ಶ್ರೀ ವೀರಬ್ರಹ್ಮೇಂದ್ರಸ್ವಾಮಿಯವರೊಬ್ಬರಲ್ಲದೆ ಬೇರೆಯಾರೂ ಭರಿಸಲಾರರು. ಆದ ಕಾರಣದಿಂದಲೇ ನ ನಾನು ಸಲಾಮನ್ನು ಮಾಡದಿರುವುದು. ಎಂದು ಹೇಳಿ ಸುಮ್ಮನಾದನು ಸಿದ್ಧಯ್ಯಾ. ಓ ಹೋ ನಿನ್ನ ಸಲಾಮಿನಲ್ಲಿ ಅಷ್ಟು ಮಹತ್ವವಿದೆಯೇ? ನಿನ್ನ ಗ ಅಷ್ಟು ಪ್ರಭಾವಶಾಲಿಗಳೇ? ಎಲ್ಲಿ ಒಮ್ಮೆ ಸಲಾಮನ್ನು ಮಾಡು ನೋಡೋಣವಂದರು ನವಾಬರು, ನವಾಬೂಜೀ! ಇದಕ್ಕೆ ತರ್ಕ ಬೇಡ. ಆನಾಕ :ತಕ್ಕೆ ಕಾರಣವಾದೀತು. ಎಂದು ಹೇಳಿದ ಸಿದ್ದಯ್ಯಾ ರಾಜಾಸ್ಥಾನಕ್ಕೆ ಅಡ ಸ್ವಲ್ಪ ದೂರದಲ್ಲಿದ್ದ ದೊಡ್ಡದೊಂದು ಕರಿಯ ಕಲ್ಲಿನ ಗುಂಡನ್ನು ಧಿಟ್ಟಿಸಿ ನೋಡುತ್ತ ಎರಡು ಕೈಗಳನ್ನು ಜೋಡಿಸಿ ಮನಸಾರೆ ಗುರುಸ್ಮರಣೆಯನ್ನು ಮಾಡುತ್ತಾ ಜೋಡಿಸಿದ ಕೈಗಳನ್ನು ಮೇಲೆತ್ತಿ ಕಣ್ಮುಚ್ಚಿ ಜೈ! ಸದ್ಗುರು ಶ್ರೀ ವೀರಬ್ರಹ್ಮೇಂದ್ರಸ್ವಾಮಿ ಜೈ! ಎದು ನಮಿಸುತ್ತಲೆ ಆ ಕರಿಯ ಕಲ್ಲಿನ ಗುಂಡು ಆ ಕ್ಷಣಾರ್ಧದಲ್ಲಿ. ಸಿಡಿಲಿನಂತಹ ಶಬ್ದದೊಂದಿಗೆ ಸಿಡಿದು ಚೂರು ಚೂರಾಗಿ ಹೋಯಿತು. ಸಿಡಿದಾ ಗುಂಡಿನ ಶಬ್ದಕ್ಕೆ ಬಹುದೂರದವರಿಗೂ ಕೇಳುಗರಿಗೆ ಕಿವಿಗಳನ್ನು ಮುಚ್ಚಿ ಹಿಡಿಯುವಂತಾಯಿತು. ಆಸ್ಥಾನದಲ್ಲಿದ್ದವರೆಲ್ಲರಿಗೂ ಕ್ಷಣಕಾಲ ಕಗ್ಗತ್ತಲು ಕವಿದಂತಾಗಿ ದಿಕ್ಕೆಟ್ಟು ನಿಂತು ಬಿಟ್ಟರು.

    ಸ್ವಲ್ಪ ಸಮಯದ ನ೦ತರ ಎಚ್ಚತ್ತ ನವಾಬರ ಬಳಿಗೆ ಬಂದ ಸಿದ್ಧಯ್ಯ ನವಾಬೂಜೀ! ನಾನು ಸಲಾಮು ಮಾಡದಿರುವ ಕಾರಣವನ್ನು ಈಗ ಅರಿಶಿರಾ? ಎನಲು ಸಿದ್ಧಯ್ಯನಿಗೆ ಸಲಾಮನ್ನು ಸಲ್ಲಿಸಿದ ನವಾಬರು ತಮ್ಮ ಮಹಲಿಗೆ ಆಹ್ವಾನಿಸಿ ನಾನಾವಿಧದಲ್ಲಿ ಗೌರವಿಸಿ ಆಧರಿಸಿದರು. ಜ್ ಭಯ ಭಕ್ತಿಯಿಂದ ಏವನಯ ವಿಧೇಯತೆಗಳಿಂದ ಸಿದ್ಧಾಜಿ! ತಮ್ಮನ್ನು ತಮ್ಮ ಗುರುಗಳನ್ನು ಮಹಾ ಮಹಿಮರೆಂದರಿಯದೆ ಮಾಡಿದ ನಮ್ಮ ಅಪರಾಧಗಳನ್ನು ಕ್ರಮಿಸಿ ಕೃಪೆತೋರಬೇಕು. ದಯಾಮಯಾ! ತಾವು ನಮಗೆ ಕ್ಷಮಧಾನ. ನೀಡಬೇಕು ಎಂದು ಬೇಡಿದರು. ಸಿಹೃದಿಯಾದ ಸಿದ್ದಯ್ಯ ಇದರಲ್ಲಿ ನಿಮ್ಮ ಅಪರಾಧವೇನೂ ಇಲ್ಲ ನವಾಬೂಜೀ! ಸಂದರ್ಭ ಹಾಗೆ "ಮಾಡಿದೆಯಪ್ಪ ಎಂದು ಏಳಲು ಮತ್ತೆ ನವಾಬರು ಸ್ವಾಮೀ ಸಿದ್ಧಾಜೀ ನಿಮ್ಮ ಮಹಿಮೆಯೇ ಇಂತಿರುವಾಗ ನಿಮ್ಮ ಆ ಗುರುಗಳು ಅದೆಂತಹ ಮಹಿಮಾ ಪುರುಹರಾಗಿದ್ದಾರೋ...... ನಮ್ಮಲ್ಲಿ ದಯೆತೋರಿ ನಿಮ್ಮ ಗುರುಗಳ ದರ್ಶ ನವನ್ನು ಮಾಡಿಸಿ ನಮ್ಮನ್ನು ಕೃತಾರ್ಥರನ್ನಾಗಿಸಬೇಕೆಂದು ಪಾರ್ಥಿಸಿದರು.

    ನವಾಬೂಜೀ! ಈ ನಿಮ್ಮ ಪ್ರಾರ್ಥನೆ ನಮ್ಮ ಗುರುದೇವರಿಗೆ ಸಲ್ಲುತ್ತದೆ. ನಾನು ಮಾಡುವುದು ಕಿ೦ಚಿತ್ತು ಇಲ್ಲ. ಇದುವರೆಗೂ ನಡೆದಿರುವುದೆಲ್ಲವನ್ನೂ ನನ್ನ ಗುರುದೇವರು ಆಯಾ ಕ್ಷಣದಲ್ಲಿಯೇ ನೋಡಿರುತ್ತಾರೆ. ನಾನು ಕತ ಅಗತ್ಯವೇ ಇರದು. ಸಮಯ ಬಂದಾಗ ನಿಮ್ಮ ಇಚ್ಚೆಯು ಕಫ್ಣದೆ ನೆರವೇರುತ್ತದೆ. ಎ೦ದು ಹೇಳಿ ಗುರು ಸ್ಮರಣೆ ಮಾಡುತ್ತ ಕಂದಿಮಲ್ಲಯ್ಯಪಲ್ಲಿಗ ಬಂದನು.

    ಶ್ರೀ ವೀರಬ್ರಹ್ಮೇಂದ್ರಸ್ವಾಮಿಯವರು ಸಿದ್ಧಯ್ಯನನ್ನು ಸಮೀಪದಲ್ಲಿ ಕೂಡಿಸಿಕೊಂಡು ಪ್ರಪಂಚ ಸೃಷ್ಟಿಯ ನೇಮವನ್ನು, ಪ೦ಂಚ ಭೂತಗಳ ವಿಮರ್ಶೆ, ಸಂ೦ಖ್ಯಾಸೂತ್ರ ವವರ, ಪಂಚೀಕರಣ, ದೇಹತ್ರಯಗಳ ವಿಷಯಗಳನ್ನು ಒಂದೊಂದಾಗಿ ಅರ್ಥವಾಗುವಂತೆ ಹೇಳುತ್ತ. ಸಮಯೋಚಿತವಾಗಿ ಘಟ ವಿಮರ್ಶೆ, ಷಟ್ಜಕ್ರ, ಮೂಲಾಧಾರ, ಸ್ವಾ ೇಷ್ಟಾನ, ಮಣಿಪೂರಕ, ಅನಾಹತ, ವಿಶುದ್ಧ, ಆಗ್ನೇಯ, ಸಹಸ್ರಾರ ಚಕ್ರಗಳ ವಿಷಯಗಳನ್ನು ಆಯಾ ಸಂದರ್ಭಕ್ಕನುಸಾರವಾಗಿ ಶಿಷ್ಯವೃಂದಕ್ಕೆ ಬೋಧಿಸುತ್ತಿದ್ದರು.

    ಒಮ್ಮೆ ನಮ್ಮಲ್ಲಿಯೇ ಯಾವ ಯಾವ ಸ್ಥಾನದಲ್ಲಿ ಯಾವ ಯಾವ ಅಧಿದೇವತೆಗಳಿದ್ದಾರೆ೦ದು ಬೋಧಿಸುತ್ತ, ಹೊರಗಿನ ಭ್ರಮಾ ಲೋಕಕ್ಕೆ ಮಾರುಹೋಗದೆ ನಿತ್ಯಾನುಷ್ಠಾನದಲ್ಲಿ ನಮ್ಮಲ್ಲಿಯೇ ಅಧಿದೇವತೆಗಳನ್ನು ನೋಡಿಕೊಳ್ಳುತ್ತ ಜೀವನ್ಮುಕ್ತರಾಗಬೇಕು. ಎಂದು ಶಿಷ್ಯರಿಗೆ ಬೋಧಿಸುತ್ತಿರುವಾಗ ಅಲ್ಲಿಯೇ ಮರೆಯೊಂದಿಗೆ ನಿಂತಿದ್ದ ಮಾದಿಗರ ಕಕ್ಕಯ್ಯ ಶ್ರೀ ಸ್ವಾಮಿಯವರು ಬೋಧಿಸುತ್ತಿದ್ದ ವಿಷಯಗಳನ್ನು ಗಮನಿಸಿ ನೇರವಾಗಿ ಮನೆಗೆ ಬಂದನು. ನಮ್ಮಲ್ಲಿಯೇ ಅಧಿದೇವತೆಗಳಿದ್ದಾರೆಂಬ ವಿಷಯವನ್ನೇ ಗಮನದಲ್ಲಿಟ್ಟುಕೊಂಡು ದೇವತೆಗಳನ್ನು ನೋಡುವ ಹಂಬಲದಿಂದ ಅತುರನಾಗಿ ನಿದ್ರಿಸುತ್ತಿದ್ದ ತನ್ನ ಹೆ೦ಡತಿಯನ್ನು ಚೂರು ಚೂರಾಗಿ ಕತ್ತರಿಸಿದನು.

    ಯಾವ ಸ್ಥಾನದಲ್ಲಿ ಯಾವ ಒಬ್ಬ ದೇವತೆಯೂ ಕಾಣಲಿಲ್ಲ. ಗಾಬರಿಗೊಂಡು ಕುಸಿದುಬಿದ್ದ, ಹೆಂಡತಿಯ ದೇಹ ಚೂರು ಚೂರಾಗಿರುವುದನ್ನು ನೋಡಿ ಅಶಿ ದುಃಖಿತನಾದ. ತನ್ನ ಕೈಯಿಂದಲೆ ಹೆ೦ಡತಿಯನ್ನು ಕೊಂದದ್ದಕ್ಕೆ ಗೊಳೋ ಎಂದು ಅತ್ತ. ಸ್ವಲ್ಪ ಸಮಯದ ನಂತರ ತಡೆಯಲಾಗದಷ್ಟು ಕೋಪ. ಅದೇ ಮಚ್ಚನ್ನು ಕೈಲಿಡಿದು ಬರಬರನೆ ಬಂದ ಶ್ರೀ ಸ್ವಾಮಿಯವರು ಶಿಷ್ಯರಿಗೆ ಏನನ್ನೋ ಬೋಧಿಸುತ್ತಿದ್ದರು. ಕ್ಷಣಕಾಲ ಮರೆಯಲ್ಲಿಯೇ ನಿಂತು ಅಧಿದೇವತೆಗಳನ್ನು ಕಾಣುವ ವಿಧಾನವನ್ನು ವಿವರಿಸುತ್ತಿದ್ದರು ಸ್ವಾಮಿಯವರು. ಅದನ್ನು ಕೇಳಿದ ಕಕ್ಕಯ್ಯನಿಗೆ ಸಹಿಸಿಕೊಳ್ಳಲಾಗಲಿಲ್ಲ. ಈ ಕಪಟಿ ಸನ್ಯಾಸಿಯ ವಿಷಯಗಳೆಲ್ಲ ಬೂಟಾಟಿಕೆ. ದೇವತೆಗಳು ಮಾನವರ ದೇಹದಲ್ಲಿದ್ದರೆ ದೇವರೇಕೆ? ದೇವರ ಗುಡಿಗಳೇಕೆ? ನನ್ನಂಥವರನ್ನು ಮೋಸಗೊಳಿಸಿ ಸುಖ ಪಡುವ ಇಂತಹ ಕಪಟಿಗಳಿರಬಾರದು ಎಂದು ಉದ್ರೇಕಗೊಂಡು ಬ೦ದ ಕಕ್ಕಯ್ಯ ಶ್ರೀ ಸ್ವಾಮಿಯವರ ಕತ್ತನ್ನು ಕತ್ತರಿಸಲೆ೦ದು ಕೈಲಿದ್ದ ಮಚ್ಚನ್ನು ಬೀಸಿದ ಯಥಾವಿಧವಾಗಿ ಕುಳಿತಿದ್ದರು ಶ್ರೀ ಸ್ವಾಮಿಯವರು. ಗುರಿ ತಪ್ಪಿತೆಂದು ಮತ್ತೊಮ್ಮೆ ಮಗದೊಮ್ಮೆ ಪ್ರಯತ್ನಿಸಿದ ಕೈ ಮತ್ತೆ ಬೀಸಿದ ತನ್ನಕ್ಕೆ ಸೋತು. ಮಚ್ಚು ಕೆಳಗೆ ದ್ದುಹೋಯಿತು. | ಸಿಟ್ಟ ಕಕ್ಕಯ್ಯ ಸಂಕಟವನ್ನು ತಾಳಲಾರದೆ ನಿಮ್ಮ ಪೊಳ್ಳು ಮಾತನ್ನು ಕೇಳಿ ನನ್ನ ಮುದ್ದಿನ ಹೆ೦ಡತಿಯನ್ನು ಕೊಂದು ಅನಾಥನಾದೆನೆಂದು ಗೋಳಾಡಿದ. ಅದು ನಿನ್ನ ಭ್ರಮೆ. ಹುಟ್ಟು, ಸಾವುಗಳು ಮನುಷ್ಯರ ಅಧೀನದಲ್ಲಿಲ್ಲ. ಕೊಲ್ಲಲು ನೀಯಾರು? ಸಾಯಲು ಅವಳ್ಳಾರು? ಎಲ್ಲವೂ ವಿಧಿಯ ಸಂಕಲ್ಪದಂತೆ ನಡೆಯುವುದು, ಎಂದು ಕಕ್ಕಯ್ಯನನ್ನು ಕರೆದುಕೊ೦ಡು ಅವನ ಮನೆಗೆ ಬಂದು ಹೆಂಡತಿಯನ್ನು ಕರೆಯುವಂತೆ ಕಕ್ತಯ್ಯನಿಗೆ ಹೇಳಿದರು. ಕಕ್ಕಯ್ಯನಿಗೆ ಕೋಪ, ಸಂಕಟಗಳೆರಡನ್ನು ತಡೆಯಲಾಗಲಿಲ್ಲ. ಗೋಳಾಡುತ್ತ ಮತ್ತಲ್ಲಿಯ ಹೆಂಡತಿ ನನ್ನ ಕೈಯಿಂದೆ ಚೂರು ಚೂರಾಗಿ ಕತ್ತರಿಸಿದ್ದೇನೆ. ಎಂದು ಗೋಳಾಡಿದನು. ಕಕ್ಕಾ! ನನ್ನ ಮಾತಿನಲ್ಲಿ ನ೦ಂಬಿಕೆಯನ್ನಿಟ್ಟು ಕರೆಯಪ್ಪಾ ಎಂದರು. ಅಳುತ್ತಲೇ 'ಮುತ್ತೀ ಎಂದು ಕೂಗಿದ. ಗಂಡ ಬಂದನೆಂಬ ಸ೦ತೋಷದಲ್ಲಿ 'ಅತುರದಿಂದ ಒಳಗಿನಿಂದ ಬ೦ದಳು ಮುತ್ತಿ. ಕಕ್ಕಯ್ಯನಿಗೆ ಪರಮಾಶ್ಚರ್ಯವಾಯಿತು. ಒಮ್ಮೆ ಮುತ್ತಿಯನ್ನು ಒಮ್ಮೆ ಸ್ವಾಮಿಯವರನ್ನು ನೋಡಿದ ಇಬ್ಬರೂ ಹಸನ್ಮುಖಿಗಳಾಗಿದ್ದರು. ಸ್ವಾಮಿಯವರು ತಮ್ಮ ಮನೆಯ ಬಳಿ ಐರುವುದನ್ನು ಕಂಡ ಮುತ್ತಿ ಸಾಮೀ! ನೀವು ನಮ್ಮ ಮನೆಯ ಮುಂದೆ ಎಂದು ಸ೦ತೋಷಾನ೦ದಗಳಿ೦ಂದ ಏನೋ ಮಾಮಾ ಸುಮ್ನೆ ನಿಂತಿದ್ದೀಯಲ್ಲ ಬೀಳು ಸಾಮೋರ್ವಾಲಿಗೆ ಅಂತ ಕಕ್ಕಯ್ಯನೊಂದಿಗೆ ಸ್ವಾಮಿಯವರ ಮುಂದೆ ಸಾಷ್ಟಾಂಗವನ್ನು ಹಾಕಿದರು ದಂಪತಿಗಳ ಶಿರಸ್ಸಿನ ಮೇಲೆ ಆಭಯ ಹಸ್ಮಮನ್ನಿರಿಸಿ ನೀವು ಚಿರ೦ಜೀವಿಗಳು ನಿಮ್ಮ ಕೀರ್ತಿ ಅಮರವಾಗಿರುತ್ತದೆ ಇಂದಿನಿಂದ ನೀವು ನಮ್ಮ ಶಿಷ್ನರು ಎಂದು ಆಶೀರ್ವದಿಸಿದರು ಶ್ರೀ ವೀರಬ್ರಹ್ಮೇ೦ದ್ರಸ್ವಾಮಿಯವರು.