ಶ್ರೀ ಪೋತುಲೂರು ವೀರಬ್ರಹ್ಮೇಂದ್ರಸ್ವಾಮಿ ಸಂಕ್ಷಿಪ್ತ ಚರಿತ್ರೆ
ಗ್ರಾಮದೇವತೆ ಪೋಲೇರಮ್ಮ ದೇವತೆಯ ಗುಡಿಯ ಕಟ್ಟೆಯ ಬಳಿ ಗ್ರಾಮದ ಹಿರಿಯರಾದಿಯಾಗಿ ಎಲ್ಲರೂ ಸೇರಿದ್ದರು. ವೀರಪ್ಪಯ್ಯನವರು ಅಲ್ಲಿಗೆ ಬರುತ್ತಲೆ ಹಿರಿಯ ರೆಡ್ಡಿಯೊಬ್ಬರು ವೀರಪ್ಪಯ್ಯಾ ಗ್ರಾಮದೇವತೆ ಪೋಲೇರಮ್ಮನ ಜಾತೆ ಸಾಗಿದೆ. ಜಾತ್ರೆ ಖರ್ಚಿಗಾಗಿ ಊರಿನವರೆಲ್ಲರೂ ಚ೦ದಾ ಹಣವನ್ನು ಕೊಟ್ಟಿರುವಾಗ ನೀನೊಬ್ಬನು ಕೊಡದಿರುವುದು ಸರಿಯೆ? ಅಲ್ಲದೆ ದೇವತೆಗೆ ರಥವನ್ನು ಸಿದ್ದ ಮಾಡಿಕೊಡುವ ಜವಾಬ್ದಾರಿಯನ್ನು ನಿನಗೇ ವಹಿಸುತ್ತೇವೆ ಎಂದು ಹೇಳುತ್ತ ತಾನು ಚುಟ್ಟವನ್ನು ಹಚ್ಚಿಕೊಳ್ಳಲು ಬೆಂಕಿ ಪೊಟ್ಟಣಕ್ಕೆ ಜೇಬುಗಳನ್ನು ಉಡುಕಾಡಿ ಪೊಟ್ಟಣ ಇಲ್ಲವಾದ್ದರಿಂದ ಬೆಂಕಿಗಾಗಿ ಸುತ್ತಲೂ ನೋಡುತ್ತಿದ್ದನು. ಅದನ್ನು ಗಮನಿಸಿದ ವೀರಪ್ಪಯ್ಯನವರು ಗ್ರಾಮದೇವತೆ ಪೋಲೇರಮ್ಮನ ಕಡೆನೋಡುತ್ತ ಪೋಲೇರೀ ಗ್ರಾಮದ ಹಿರಿಯರಿಗೆ ಬೆಂಕಿಯನ್ನು ತ೦ದು ಕೊಡೆ ಎಂದರು. ಆ ಶಕ್ಷಣವೇ ಶಿಲೆಯಂತಿದ್ದ ಗ್ರಾಮದೇವತೆ ತನ್ನ ಮುಂದಿದ್ದ ದೂಪ ಕುಂಡವನ್ನು ಕೈಗೆತ್ತಿಕೊಂಡು ಬ೦ದು ರೆಡ್ಡಿಯ ಮುಂದೆ ನಿ೦ತಳು. ದೇವತೆಯನ್ನು ಕ೦ಡ ಗ್ರಾಮದ ಹಿರಿಯರಾದಿ ಎಲ್ಲರೂ ಗಡಗಡನೆ ನಡುಗುತ್ತಾ ಕಂಬದಂತೆ ಮಾತನಾಡದೆ ನಿಂತು ಬಿಟ್ಟರು. ನಂತರ ವೀರಪ್ಪಯ್ಯನವರು ಅಮ್ಮಾ!ಗ್ರಾಮಸ್ತರ ಮುಂದೆ ನನ್ನೆ ಮಾತು ನಡೆಸಿಕೊಟ್ಟದ್ದರಿಂದ ಧನ್ಯವಾದಗಳ. ಊನಿನ್ನು ನಿನ್ನ ಸ್ಥಾನದಲ್ಲಿ ಕುಳಿತುಕೊಳ್ಳಬಹುದು ಎ೦ದರು. ಪೋಲೇ೦ಮ್ಮ ತನ್ನ ಸ್ಥಾನಕ್ಕೆ ಹೋಗಿ ಯಧಥಾವಿಧವಾಗಿ ಕುಳಿತಳು.
ಮತ್ತೆ ವೀರಪ್ಪಯ್ಯನವರು ಗ್ರಾಮಸ್ತರನ್ನು ನೋಡುತ್ತ ಚುಟ್ಟವನ್ನು ಹಿಡಿದು ನಿಂತಿದ್ದ ಹಿರಿಯರನ್ನು ಕುರಿತು ಹಿರಿಯರಾದ ನೀವು ಭಯ ಪಡುವುದೇ? ಅನ್ನುಷ್ಟರಲ್ಲಿ ಅಲ್ಲಿದ್ದವರೆಲ್ಲರೂ ಏಕ ಕಾಲಕ್ಕೆ ನಿ೦ತಲ್ಲಿಂದಲೇ ಸಾಷ್ಟಾಂಗವನ್ನು ಹಾಕಿ ಕೈ ಮುಗಿಯುತ್ತ ನಿಂತರು. ಆಗ ಗ್ರಾಮದ ಹಿರಿಯರು ಮಹಾನುಭಾವಾ! ತಾವು ಸಾಮಾನ್ನನೆಂಬಂತೆ ಭಾವಿಸಿದ ನಮ್ಮ ಸರ್ವಾಪರಾಧಗಳನ್ನು ಕ್ಷಮಿಸಿ ಎ೦ದು ಮತ್ತೊಮ್ಮೆ ದೀರ್ಥದ೦ಡ ನಮಸ್ಕಾರವನ್ನು ಮಾಡಿದರು. ಹಿರಿಯರಾದಿಯಾಗಿ ಗ್ರಾಮಸ್ವರೆಲ್ಲರೂ ವೀರಪ್ಪಯ್ಯ ಸ್ವಾಮಿಯವರಿಗೆ ಜೈ! ವೀರಪ್ಪಯ್ಯಾಚಾರ್ಯ ಸ್ವಾಮಿಯವರಿಗೆ ಜೈ! ಜೈ! ಎಂದು ಜಯಕಾರಗಳನ್ನು ಮಾಡುತ್ತ ಮತ್ತೊಮ್ಮೆ ಎಲ್ಲರು ನಮಸ್ಮಾರಗಳನ್ನು ಮಾಡಿದರು.
ಶ್ರೀ ವೀರಪ್ಪಯ್ಯಸ್ವಾಮಿಯವರ ಮಹಿಮಯಿಂದ ಗ್ರಾಮದೇವತೆ ಪೋಲೇರಮ್ಮನ್ ಜಾತ್ರೆಗೆ ರಥವು ಸಿದ್ದವಾಗಿತ್ತು. ಜಾತ್ರೆಯು ವಿಜೃಂಬಣೆಯಿಂದ ನಡೆಯಿತು. ಅಂದಿನಿಂದ ಒಬ್ಬೊಬ್ಬರಾಗಿ ಭಕ್ತರು ಬರತೊಡಗಿದರು. ಶ್ರೀ ಜೀಡಪುಹಸನಿಗ್ಗೆ ವಾಸ್ತವ್ಯಕ್ಕೆ 'ಬೇಕಾಗವ ಬಲ್ಲಿ ವ್ಯವಸ್ಥೆಗಳು ಆಗಿದ್ದವು. ತಮ್ಮಲ್ಲಿಗೆ ಬರುವ ಭಕ್ತ ರಿಗೆ ಆಧ್ಯಾತ್ಮ ವಿಷಯಗಳನ್ನು ತಿಳಿಸುತ್ತ ಜ್ಞಾನಬೋದ'ಯವನನ್ನು ವರಾಡುತ್ತಿದ್ದರು. ದಿನೇದಿನೇ ಅವರ ಕೀರ್ತಿಪ್ರಚಾರಗೊಳ್ಳುತ್ತಿತ್ತು. ಸಾಕ್ಷಾತ್ ಪರಬ್ರಹ್ಮ ಸ್ವರೂಪಿಗಳೆ೦ದು ನಂಬಿದ ಜನರು ಶ್ರೀ ವೀರಬ್ರಹ್ಮೇಂದ್ರಸ್ತಾಮಿಯೆಂದು ಕರೆಯಲಾರಂಭಿಸಿದರು.
ಶ್ರೀ ವೀರಬ್ರಹ್ಮೇಂದಸ್ವಾಮಿಯವರು ಕ೦ದಿಮಲ್ಲಯ್ಯ ಪಲ್ಲಿಯಲ್ಲಿ ಭಕ್ತರ ನ ್ಸ ಇದ್ದು ಕೆಲದಿನಗಳ ನಂತರ ಸ೦ಚಾರಾರ್ದಿಗಳಾಗಿ ದೇವಾಲಯದ ಸೌಂದರ್ಯಗಳನ್ನು ವೀಕ್ಷಿಸುತ್ತ ಕ್ಷೇತ್ರ ದರ್ಶನಗಳನ್ನು ಚ ಉಳಿದಲ್ಲೆಲ್ಲ ಜ್ಞಾನ ಮಾರ್ಗವನ್ನು ಬೋಧಿಸುತ್ತ ಪೇದಕೋಮೆರ್ಲವೆ೦ಬ ಗ್ರಾಮವನ್ನು ತಲುಪಿದರು. ವಿಶ್ರಾಂತಿಗಾಗಿ ಆಲ್ಲಿನ ದೇವಾಲಯದ ಮುಂದಿನ ಮರದ ಕಟ್ಟೆಯ ಮೇಲೆ ಕುಳಿತರು. ಪೇದಕೊಮರ್ಲಗ್ರಾಮದಲ್ಲಿ ಶಿವಕೋಟಯ್ಯಾಚಾರ್ಯ ಎ೦ಬ ವಿಶ್ವಬ್ರಾಹ್ಮಣರ ಒಂದು ಮನೆಯಿತ್ತು. ಶಿವಕೋಟಯ್ಯಾಚಾರ್ಯ ದಂಪತಿಗಳಿಗೆ ಗೋವಿಂದಮ್ಮ ಎಂಬ ಏಕೈಕ ಪುತ್ತಿಯಿದ್ದು ಪ್ರಾಪ್ತ ವಯಸ್ಸಳು, ಸೌಂದರ್ಯವತಿಯೂ, ಸುಗುಣಮತಿಯುಳ್ಳವಳು ಆಗಿದ್ದಳು. ಎಲ್ಲಿಯೋ ಹೋಗಿದ್ದ ಶಿವಕೋಟಯ್ಯಾಚಾರ್ಯರು ಮನೆಗೆಬರುವಾಗ ಒಬ್ಬಂಟಿಯಾಗಿ ಸನ್ಯಾಸಿಯಂತೆ ಕುಳಿತಿದ್ದ ಶ್ರೀವೀರಬ್ರಹ್ಮೇ೦ದ್ರಸ್ವಾಮಿಯವರನ್ನು ನೋಡಿ ತಾವು ಯಾರೆಂದು ವಿಚಾರಿಸಿದರು. ನಾವು ಕ೦ದಿಮಲ್ಲಯ್ಯಪಲ್ಲಿ ಗ್ರಾಮದ ವಾಸ್ತವ್ಯದವರು. ವಿಶ್ವಬ್ರಾಹ್ಮಣರು. ವೀರಬ್ರಹ್ಮ೦ ಎ೦ದು ಕರೆಯುವರು. ನಾವು ಆಗಾಗ ಕೇತ್ರಸ೦ಚಾರಾರ್ದಿಗಳಾಗಿ ಬರುತ್ತೇವೆ. ವಿಶ್ರಾಂತಿಗಾಗಿ ಇಲ್ಲಿ ಕುಳಿತಿದ್ದೇವೆ 'ಎಂದು ಮಾತನಾಡುತ್ತಿರುವಾಗ ನೀರಿಗಾಗಿ ಬ೦ದ ಗೋವಿಂದಮ್ಮ ದೂರದಿಂದಲೆ ತಂದೆಯೊಂದಿಗೆ ಮಾತನಾಡುತ್ತಿದ್ದ ಬ್ರಹ್ಮಂರವರನ್ನು ನೋಡಿ ಇವರೇ ನನ್ನ ಸ್ವಪ್ನದಲ್ಲಿ ಸನ್ಯಾಸಿಯಂತೆ ಕಂಡಎರು. ಎಂದು ಗುರುತಿಸಿ ಮೌನವಾಗಿಯೇ ಮನೆಗೆ ಹಿಂದಿರುಗಿದಳು.
ಶಿವಕೋಟಂ೦ನನ್ಯಾಚಾಂರ್ಕುರು ಬ್ರಹ್ಮ೦ ರವರೊಂದಿಗೆ ಮಾತನಾಡಿಕೊಳ್ಳುತ್ತಿರುವಾಗ ಇದ್ದಕ್ಕಿದ್ದಹಾಗೆ ಅಳು ಕೇಳಿಬ೦ತು. ಅದನ್ನು ಗಮನಿಸುವಷ್ಟರಲ್ಲಿ ಗಟ್ಟಿಯಾಗಿ ಅಳುತ್ತಾ ಹೆಣವನ್ನು ಹೊತ್ತು ಸುಡುಗಾಡಿಗೆ ಹೋಗಲು ಬರುತ್ತಿದ್ದ ಗುಂಪು ಸಮೀಪಕ್ಕೆ ಬಂತು. ಏನಿದು. ಎಂದು ವಿಚಾರಿಸಿದಾಗ ರೆಡ್ಡಿಯ ಮಗನಿಗೆ ಹಾವು ಶಚ್ಚಿ ನಿನ್ನೆಯೇ ಮೃತನಾಗಿದ್ದಾನೆ. ಏಕೈಕ ಪುತ್ರನ ಸಾವನ್ನು ಸಹಿಸಲಾಗದೆ ರೆಡ್ಡಿಯು ಅಳುತ್ತಿದ್ದಾನೆಂದು ಹೇಳಿದರು. ರೆಡ್ಲಿಯ ಮಗನು ಸತ್ತಿಲ್ಲ ಅವನು ಪೂರ್ಣಾಯುವು ಎಂದರು ಬ್ರಹ್ಮಂ ಅವನಾಗ ನಿನ್ನೆಯೇ ಸತ್ತನು ಎ೦ದರು ಹಿರಯರೊಬ್ಬರು. ಅವನು ಸತ್ತಿಲ್ಲ ಕೆಳಗಿಳಿಸಿ ಎನಲು ಹೆಣವನ್ನು ಕೆಳಗಿಳಿಸಿದರು. ಬ್ರಹ್ಮ೦ರವರು ತಮ್ಮ ಕೈಲಿದ್ದ ಕಮಂಡಲೋದಕವು ಅಭಿಮಂತ್ರಿಸಿ ಪ್ರೋಕ್ಷಿಸಿದರು. ತಕ್ಷಣ ಎದ್ದು ನಿಂತ ಬಾಲಕನನ್ನು ನೋಡಿದವರೆಲ್ಲರೂ ಆಶ್ಚರ್ಯಾನಂದಗಳಿಂದ ಜೈ ವೀರಬ್ರಹ್ಮ೦ ಎಂದು ಸ೦ತೋಷಪಟ್ಟರು. ಇದನ್ನು ನೋಡುತ್ತಿದ್ದ ತುಂಟ ಹುಡಗರು ಹುಡುಗಾಟಿಕೆಯ ಬುದ್ದಿಯಿಂದ ತನ್ನಗೆಳೆಯನೊಬ್ಬನನ್ನು ಹೊತ್ತು ತಂದು ಸ್ವಾಮಿ ನಮ್ಮ ಗೆಳೆಯನು ಸತ್ತು ಹೋಗಿದ್ದಾನೆ ಎಂದು ಆಳುವವರಂತೆ ನಟಿಸಿದರು. ಶ್ರೀ ವೀರಬ್ರಹ್ಮೇ೦ದಸ್ವಾಮಿಯವರು ಪಾಪ ಆಯುಷ್ಟು ಮುಗಿದು ಸತ್ತು ಹೋಗಿದ್ದಾನೆ೦ದರು. ಹುಡುಗರು ಗೊಳ್ಳೆಂದು ನಗುತ್ತ ಹುಡುಗನನ್ನು ಎಬ್ಬಿಸಲು ಪ್ರಯತ್ನಿಸಿದರು, ಆದರೆ ಹುಡುಗನು ಮೇಲೇಳಲಿಲ್ಲ. ಸತ್ತೇ ಹೋಗಿದ್ದನು. ದಿಗ್ಗಮೆಗೊಂಡ ಹುಡುಗರು ಶ್ರೀ ಸ್ವಾಮಿಯವರ ಪಾದವನ್ನಿಡಿದು ಗೋಳಾಡಿದರು. ಆ ತುಂಟರಿಗೆ ಸರಿಯಾದ ಬುದ್ದಿ ಹೇಳಿ ಹುಡುಗನನ್ನು ಬದುಕಿಸಿದರು.
ತಂದೆಯವರೊಂದಿಗೆ ಬರುತ್ತಿದ್ದ ಶ್ರೀ ಬ್ರಹ್ಮ೦ರವರನ್ನು ಕಿಟಕಿಯಿಂದ ನೋಡಿದ ಗೋವಿ೦ದಮ್ಮ ಅಮ್ಮಾ! ಅವರೇ ನನ್ನ ಸ್ವಪ್ನದಲ್ಲಿ ಕಂಡವರು ಎಂದು ಹೇಳಿ ನಾಚಿದಳು. ತಾಯಿಯು ಗೋವಿ೦ದಮ್ಮನ ನಾಚಿಕೆ, ಆರಳಿದ ಮುಖ, ಮೌನ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದರು.