ಶ್ರೀ ಪೋತುಲೂರು ವೀರಬ್ರಹ್ಮೇಂದ್ರಸ್ವಾಮಿ ಸಂಕ್ಷಿಪ್ತ ಚರಿತ್ರೆ

  • ಮಂಗಳಗಿರಿಯಲ್ಲಿ ಮಾಯವಾದಿಗಳೆ೦ಬ ವೈಷ್ಟವರು ಕಲಹಗಳಿಂದ ಎರಡು ಭಾಗವಾಗಿ ಯುದ್ಧಕ್ಕೆ ಸನ್ನದ್ಧರಾಗುವರು. ನಾಯಿಗಳು ಕುದುರೆಗಳನ್ನು ಕೊಲ್ಲುವುವು. ಹಗಲು ಚುಕ್ಕೆಗಳು ಕಾಣುವುವು. ಅದರಿಂದ ಜನ ನಷ್ಟವಾಗುವುದು. ಕಾರ್ತಿಕ, ಬಹುಳ, ದ್ವಾದಶಿಯದಿನ ಉತ್ತರ ಭಾಗದಲ್ಲಿ ನಾಲ್ಕು ಮುಖದ ಚುಕ್ಕೆಗಳು ಹುಟ್ಟಿ ಇಪ್ಪತ್ತೈದು ವಾರಗಳವರೆಗೆ ಪ್ರಕಾಶಿವುವು. ಕರ್ನಾಟಕದಲ್ಲಿ ಲಕ್ಷ್ಮೀ ಸಂಚರಿಸುವಳು. ಮಹಮ್ಮದೀಯರು ನಿಕ್ಷೇಪವಾದ ದ್ರವ್ಯವನ್ನು ಆಪಹರಿಸುವರು. ನ೦ತರ ವೆಲಮರೆಡ್ಡಿ ರಾಜರು ಸ್ವಲ್ಪದರಲ್ಲಿ ಸ್ವಲ್ಪ ಅಪಹರಿಸುವರು. ಮಲೆಯಾಳದ ಮಂ೦ದ ಪಾಲನು ಮನುಜರೊಂದಿಗೆ ಮಾತನಾಡುವನು. ತಿರುಪತಿಯ ಮಾರ್ಗವು ತಡೆಯುಂಟಾಗುವುದು. ರಕ್ತದಿಂದ ಭೂದಿು ನೆನೆಯುವುದು. ಬೆಟ್ಟಿಗಳ೦ತೆ ಯಲಬುಗಳು ಬೀಳುವುವು. ಗ್ರಹಗಳು ಮೊದಲುಗೊಂಡು ಭೂತ ಪ್ರೇತ ಪಿಶಾಚಿಗಳು ಕೋಲಾಹಲ ಮಾಡುವುವು. ಹೋ ಎಂದು ಜನರು ಕೂಗಿ ಕೊಳ್ಳುವರು. ಕಾಗೆಗಳು ವಿಕಾರ ಸ್ವರದಲ್ಲಿ ಆರಚುವುವು. ನರಿಗಳು ಊರು ಬದಿಯಲ್ಲಿ ಅರಚುವುದರಿ೦ದ ಜನ ನಪ್ಸವಾಗುವುದು. ಕೊ೦ಂಡವೀಡು ಎ೦ಬ ಗ್ರಾಮದ ಉತ್ತರ ದಿಕ್ಷಿನಲ್ಲಿರುವ ಗರುಡ ಸ್ಥಂಭವು ಬಿದ್ದು ಕೆವರು ಸಾಯುವರು. ಕಲಿಯುಗದ ಐದು ಸಹಸ್ರ ಸ೦ವತ್ಸರಗಳ ನ೦ತರ ಕಾಶಿಯಲ್ಲಿ ಗ೦ಗೆ ಕಲುಷಿತವಾಗಿ ಕಾಣದಾಗುವುದು. ಕಂಚಿಯಲ್ಲಿ ಕಾಮಾಕ್ಷಮ್ಮ ಗಿರಗಿರನೆ ಒಂದು ಜಾವ ತಿರುಗುವಳು. ಬಿಳಂ ಕಾಮಾಕ್ಷಮ್ಮ ರಕ್ತವನ್ನು ಕಕ್ಕುವಳು. ಬೇವಿನ ಗಿಡದಲ್ಲಿ ಅಮೃತ ಸುರಿಯುವುದು. ಮಾಚೆರ್ಲ ಗ್ರಾಮದಲ್ಲಿ ಮದವತಿಯೊಬ್ಬಳಿಂದ ರಾಜರೆಲ್ಲರೂ ಸಾಯುವರು. ಶ್ರೀಶೈಲ ದಕ್ಷಿಣ ಭಾಗದಲ್ಲಿ ಮಳೆ ಗಾಳಿಗಳಿಂದ ಗು೦ಡುಗಳುರುಳುವುವು. ರಕ್ತದ ಮಳೆ ಬರುವುದು. ಮಾಚೆರ್ಲ ಚನ್ನಕೇಶ್ವರ ಸ್ವಾಮಿಯ ಮಹಿಮೆಗಳು ತಗ್ಗುವುವು. ಕಾರೆ೦ಪೂಡಿ ಗ್ರಾಮದಲ್ಲಿ ಕಲಹಗಳು ಹೆಚ್ಚಿ ಅಲ್ಲಿನ ರಾಜರು ಸಾಯುವರು. ಬಂಡೆಗಳು ಆಕಾಶದಲ್ಲಿ ಹದ್ದುಗಳಂತೆ ಹಾರಾಡುವುವು. ಕಲ್ಲಿನ ಪದರಿನೊಳಗಿನಿಂದ ಕೀವು, ರಕ್ತ ಬರುವುದು. ಹುಟ್ಟಿದ ಕೂಸು ಮಾತನಾಡುವುದು. ಆರು ಮತಗಳು ಒಂದಾಗುವುವು. ಆ ಹಾ ಎಂದು ಧ್ವನಿ ಕೇಳಿ ಬರುವುದು. ನಡು ರಾತ್ರಿ ಗಂಟೆಗಳ ಕಲರವ ಕೇಳುವುದು. ಶ೦ಕರಾ ಎ೦ಬ ಕೂಗು ಕೇಳುವುದು. ಒಬ್ಬರ ಹೆಂಡತಿ ಮತ್ತೊಬ್ಬರ ಪಾಲಾಗುವಳು. ಪುಣ್ಯವಾದಿಗಳು ನನ್ನ ಮಹಿಮೆನ್ನು ಪ್ರಭಾವವನ್ನು ಹೇಳುವರು ಪುಣ್ಯ ಸ್ತೀ, ಪುರುಷರು ಬದುಕುವರು. ಪುಣ್ಯ ಸ್ಥಳಗಳು ಕೆಟ್ಟು ಹೋಗುವುವು. ನಿಕ್ಷೇಪಗಳು ಬಯಲಾಗುವುವು. ವೆ೦ಕಟಾಚಲದಲ್ಲಿ ಮಹಮ್ಮದೀಯರು. ಚಾ೦ಡಾಲರು ಪೂಜೆ ಮಾಡುವರು. ವೆಂಕಟೇಶ್ವರನ ಸ೦ಪತ್ತನ್ನು ಅಪಹರಿಸುವರು. ಆ ಕ್ಷೇತ್ರದಲ್ಲಿ ನಾಲ್ಕು ಜನ ದುಷ್ಟರು ಹುಟ್ಟುವರು. ತಿರುವಳ್ಳೂರು ವೀರ ರಾಘವಸ್ವಾಮಿಗೆ ರಥೋತ್ಸವವನ್ನು ಮಾಡುವರು. ಆಗ ಬಿಂದಿಗೆ ಬಿಂದಿಗೆ ಬೆವರು ಹುಟ್ಟುವುದು. ಕೃಷ್ಣಾ ಗೋದಾವರಿಗಳ ಮಧ್ಯೆ ಹಸುಗಳು ಗುಂಪು ಗುಂಪಾಗಿ ಸಾಯುವುವು. ಒಬ್ಬರನ್ನೊಬ್ಬರು ಅನುಸರಿಸಿ ಜನ ಅಡವಿ ಪಾಲಾಗುವರು. ಶೀತೋಷ್ಟ ಜ್ವರಗಳಿ೦ದ ಜನರು ಸಾಯುವರು. ಕೃಷ್ಣಾ ನದಿಯಲ್ಲಿ ಬಂಗಾರದ ತೇರು ಕಾಣುವುದು. ಆ ತೇರನ್ನು ನೋಡಿದವರ ಕಣ್ಣುಗಳು ದೃಷ್ಟಿಯನ್ನು ಕಳೆದುಕೊಳ್ಳುವುವು. ಅಶ್ವಪತಿ ಸಂಸ್ಥಾನ ಮಂಟಪವಾಗುವುದು. ಮಹಮ್ಮದಿಯರಿಂದ ಕರ್ನಾಟಕದ ದೇವಾಲಯಗಳು ಹಾಳಾಗುವುವು. ಶಿಲಾ ವಿಗ್ರಹಗಳು ಭಿನ್ನವಾಗುವುವು. ಶಿಲಾಧಾರವಾದ ತೇರು ಆಕಸ್ಮಿಕ ಮುರಿದು ಬೀಳುವುದು. ದೇಜ ಬ್ರಾಹ್ಮಣರು ಆಚಾರಶೂನ್ಯರಾಗುವರು. ತಿನ್ನುವ ಕೂಳಿಗೂ ನಿರ್ಗತಿಕರಾಗಿರುವರು. ಶ್ರೀ ಶೈಲದಲ್ಲಿ ಭ್ರಮರಾಂಬ ದೇವಿಯ ಹತ್ತಿರ ಎರಡು ತಲೆಯ ಬಂಗಾರದ ಮೊಸಳೆ ಕಂಡ ನಂತರ ಭ್ರಮರಾಂಬದೇವಿಯಲ್ಲಿ ಐಕ್ಕವಾಗುವುದು. ಚಕ್ರಾಂಕಿತ ಸಂಭವನಾದ ಪರಮಹ೦ಸ ಉದಯಗಿರಿ ಶಿಖರಾಗ್ರದಲ್ಲಿ ಆಮಾವಾಸ್ಕೆಯಂದು ಶತ್ತಿದಾಗ ಜನರು. ಚಂದಗ್ರಹಣವೆಂದು ಭ್ರಮೆ ಪಡುವರು. ಶಿವ, ವೈಷ್ಣವ ದೇವಾಲಯಗಳಲ್ಲಿ ರಕ್ತವು ಹುಟ್ಟುವುದು. ಬಂಗಾರದ ಹಂಸಗಳೆರಡು ಬಂದು ಪುರ, ಊರು ನದಿ, ವನಗಳ ಹತ್ತಿರ ಹಾರಾಡುವುವು. ಪಾಪಾತ್ಮರು ಅವುಗಳನ್ನು ಹಿಡಿಯಲು ಹೋಗಿ ಕಣ್ಣುಗಳು ಕಾಣದಾಗಿ ಗಿರಗಿರನೆ ತಿರುಗುತ್ತ ಲಕ್ಷ ಲಕ್ಷ ಜನರು ಸಾಯುವರು. ಆಕಾಶದಲ್ಲಿ ಪೂರ್ವದಿಕ್ಕಿನಿಂದ ಪಶ್ಚಿಮ ದಿಕ್ಕಿನವರೆಗೂ ಚೆಂಗಾವಿ ಸೀರೆಯನ್ನಿಡಿದು ಕೊಂಡಂತೆ ಯೋಜನ ಪ್ರಮಾಣದಗಲದಲ್ಲಿ ಕಾಣುವುದು. ಬೆಟ್ಟಗುಡ್ಡಗಳಲ್ಲಿ ಗ೦ಟೆಯ ಶಬ್ದ ಕೇಳುವುದು. ಅಮ್ಮಾ! ಇನ್ನು ಅನೇಕ ದೇವ ರಹಸ್ಯಗಳಿವೆ. ಈ ರಹಸ್ಯಗಳೆಲ್ಲವೂ ನಾನು ವೀರಭೋಗ ವಸ೦ತರಾಯರ ಅವತಾರದಲ್ಲಿ ಬರುವವರೆಗೂ ನಡೆಯುವುವು. ಸಮಯಾನುಚಿತವಾಗಿ ಅವು ಅರ್ಥವಾಗುತ್ತವೆ. ನನ್ನ ಭಕ್ತರಾದವರಿಗೆ ಇವು ತಿಳಿಯುತ್ತಲೇ ಇರುತ್ತವೆ. ನಂಬಿಕಾಸಕ್ತಿಯಿಂದ ನನ್ನನ್ನು ಪೂಜಿಸುವವರಿಗೂ, ನನ್ನ ಭಕ್ತರಿಗೂ ಹೇಳುವವರಿಗೂ ಕೇಳುವವರಿಗೂ ಅಷ್ಟೈಶ್ವರ್ಯ ಪ್ರಾಪ್ತಿಯಾಗುವುದು. ಇನ್ನಾದರೂ ಸದಾ ನನ್ನ ಸ್ಮರಣೆಯನ್ನು ಮಾಡುತ್ತಿರು. ಎಂದು ಹೇಳಿ ಆಶೀರ್ವಧಿಸಿದರು. ಅಮ್ಮಾ! ಈಗಾಗಲೆ ಸಮಯವಾಗಿದೆ. ಭಕ್ತರಿಗೆ ತೀರ್ಥ ಪ್ರಸಾದಗಳನ್ನು ಕೊಡಿ ಎ೦ದು ಹೇಳಿದರು. ಬ೦ದವರೆಲ್ಲರೂ ಶ್ರೀ ಸ್ವಾಮಿಯವರಿಗೆ ನಮಸ್ಕರಿಸಿ ತೀರ್ಥ ಪ್ರಸಾದಗಳನ್ನು ತೆಗೆದುಕೊ೦ಡು ಸ್ವಾಮಿಯವರನ್ನು ಕೊಂಡಾಡುತ್ತ ಹೊರಟು ಹೋದರು.

    ಬನಗಾನಪಲ್ಲಿ ಗ್ರಾಮದಿಂದ ಸಂಚಾರಾರ್ಥವಾಗಿ ಹೊರಟ ಶ್ರೀ ವೀರಪ್ಪಯ್ಯಾಚಾರ್ಯರು ಅಲ್ಲಾಟಪಲ್ಲಿಯಲ್ಲಿ ತಾವೇ ಸ್ವಹಸ್ತದಿಂದ ನಿರ್ಮಿಸಿದ್ದ ವೀರಭದಸ್ವಾಮಿಯನ್ನು ಸ್ಥಾಪಿಸಿ ಕ೦ದಿಮಲ್ಲಯ್ಯಪಲ್ಲಿ ಗ್ರಾಮದಲ್ಲಿ ವಾಸ್ತವ್ಯವನ್ನು ಮಾಡಲು ಉಳಿದರು.

    ಕಂದಿಮಲ್ಲಯ್ಯಪಲ್ಲಿ ಗ್ರಾಮದ ಹಿರಿಯರೆಲ್ಲರೂ ಸೇರಿ ಗ್ರಾಮ ದೇವತೆ ಶ್ರೀ ಪೋಲೇರಮ್ಮನ ಜಾತ್ರೆಯನ್ನು ನಡೆಸಲು ತೀರ್ಮಾನಿಸಿ ಜಾತ್ರೆಯ ಖರ್ಜಗಾಗಿ ಚ೦ದಾ ಹಣವನ್ನು ಗ್ರಾಮಸ್ತರಿಂದ ವಸೂಲಿ ಮಾಡಲು ಜವಾನರನ್ನು ನೇಮಿಸಿದರು. ಜವಾನನೊಬ್ಬ ಗ್ರಾಮಸ್ಕರನ್ನು ಕೇಳುವಂತೆ ಶ್ರೀ ವೀರಪ್ಪಯ್ಯ ಸ್ವಾಮಿಯವರಲ್ಲಿ ಚಂದಾ ಹಣಬನ್ನು ಕೇಳಿದನು. ಆಯ್ಕಾ! ಚಂದಾ ಹಣವನ್ನು ನಾನೂ ಕೊಡಬೇಕೆ? ಎ೦ದರು ಸ್ವಾಮಿಯವರು ಕೊಡದೆ ತಪ್ಪದು. ಊರಿನಲ್ಲಿ ಗ್ರಾಮದೇವತೆಯ ಜಾತ್ರ ಸಾಗಿದೆ. ಗ್ರಾಮಸ್ತರೆಲ್ಲ ಕೂಡುತ್ತಿರುವಾಗ ನೀನೂ ಕೊಡಬೇಕಲ್ಲವೆ? ಆಯ್ಯಾ! ನಾನು ಈ ಊರಿನಲ್ಲಿ ಹೊಸದಾಗಿ ವಾಸ್ತವ್ಯ ಮಾಡಿದವನು ಅಲ್ಲದೆ ಬಡಗಿ ಕೆಲಸ ಮಾಡುವ ನನ್ನಲ್ಲಿ ಹಣವಿ ತಪ್ಪ ನನ್ನನ್ನು ಬಿಡಲಾಗದೆ? ಎನಲು ಆ ಜವಾನನು ಸರಿ! ಈ ಮಾತನ್ನು ಗ್ರಾಮದ ಹಿರಿಯರಲ್ಲಿ ಹೇಳುತ್ತೇನೆಂದು ಹೊರಟು ಹೋಗಿ ಗ್ರಾಮದ ಹಿರಿಯರಲ್ಲಿ ವೀರಪ್ಪ ಪ್ಚಯ್ಯಾಚಾರ್ಯರು ಹೇಳಿದಂತೆ ವಿಷಯವನ್ನು ತಿಳಿಸಿದನು. ಗ್ರಾಮದ ಹಿರಿಯ ಯರೊಬ್ಬರು ಹಾಗಾಗದು ಗ್ರಾಮಸ್ತರೆಲ್ಲರೂ ಕೊಟ್ಟಿರುವಾಗ ತಾನು ಇಲ್ಲವೆನ್ನುವುದು ಸರಿ ಕಾಣದು. ಹೋಗು ಹಣ ಕೊಡಲಾಗದಿದ್ದರೆ ನೀನೇ ಬರಬೇಕಂತೆ ಎಂದು ಹೇಳಿ ಕರೆದುಕೊಂಡು ಬಾ ಎ೦ದು ಅಪ್ಪಣೆ ಮಾಡಿದರು. ಮತ್ತೆ ಜವಾನನು ವೀರಪ್ಪಯ್ಯನವರ ಬಳಿಗೆ ಬ೦ದು ನಿಮಗೆ ಹಣ ಕೊಡಲಾಗದಿದ್ದರೆ ನೀವೇ ಬರಬೇಕ೦ತೆ ಎಂದನು. ಆಯಿತು ನೀ ಹೋಗು ಬರುತ್ತೇನೆ ಎಂದರು ವೀರಪ್ಪಯ್ಯನವರು.