ಶ್ರೀ ಪೋತುಲೂರು ವೀರಬ್ರಹ್ಮೇಂದ್ರಸ್ವಾಮಿ ಸಂಕ್ಷಿಪ್ತ ಚರಿತ್ರೆ
ಆಚ್ಚಮ್ಮನವರು ಕಟ್ಟಿಸಿಕೊಟ್ಟ ಮಠವೇ ಪುಣ್ಯ ಕ್ಷೇತ್ರವಾಯಿತು. ಮಠಕ್ಕೆ ಬರುವವರ ಭಕ್ತರ ಸ೦ಖ್ಯೆ ಹೆಚ್ಚಾಯಿತು. ಪುಣ್ಯಕ್ಷೇತ್ರಗಳ ಸ೦ಚಾರಿಯಾಗಿದ್ದ ಅನ್ನಾಜಯ್ಯನವರು ಬನಗಾನಪಲ್ಲಿಗೆ ಬಂದಾಗ ವೀರಪ್ಪಯ್ಯಾಚಾರ್ಯರ ವಿಷಯ ತಿಳಿದು ಅವರೂ ಅಲ್ಲಿಗೆ ಬಂದರು. ಬ್ರಹ್ಮ ಸ್ವರೂಪಿಯಾದ ಅನ್ನಾಜಯ್ಯನವರನ್ನು ಗುರತಿಸಿದ ವೀರಪ್ಪಯ್ಯಾಚಾರ್ಯ ಸ್ವಾಮಿಯವರು ಅವರನ್ನು ಮಠದಲ್ಲಿಯೇ ಇರುವಂತೆ ಆಗ್ನಾಪಿಸಿ ಬ್ರಹ್ಮಜ್ಞಾನೋಪದೇಶವನ್ನು ಮಾಡಿ ಈ ಮಠಕ್ಕೆ ಬರುವ ಭಕ್ತಾದಿಗಳಿಗೆ ಸನ್ಮಾರ್ಗವನ್ನು ಬೋದಿಸುವಂತೆಯೂ ಅವರ ಕಷ್ಟಗಳನ್ನು ಪರಿಹರಿಸುವಂತೆಯೂ ಹೇಳಿ ಆಶೀರ್ವಧಿಸಿದರು. ಆ೦ದಿನಿ೦ದ ಆನ್ನಾಜಯ್ಯನವರಿಗೆ ಬನಗಾನಪಲ್ಲಿಯ ಮಠವೆ ಸ್ಥಿರ ಸ್ಥಾನವಾಯಿತು. ವೀರಪ್ಪಯ್ಯಾಚಾರ್ಯರು ನಾಲ್ಕಾರು ವರುಷಗಳು ತಮ್ಮ ಮಹಿಮೆಯಿಂದ ಮಠಕ್ಕೆ ಬರುವ ಭಕ್ತಾದಿಗಳ ಮನೋಭಿಷ್ಟಗಳನ್ನು ಈಡೇರಿಸುತ್ತಿದ್ದು ಗರಿಮಿರೆಡ್ಡಿ ಅಚ್ಚಮ್ಮನವರ ಏಕೈಕ ಪುತ್ರನಿಗೆ ನೇತ್ರದಾನವನ್ನು ಮಾಡಿ ರವ್ವಲಕೊಂಡದಲ್ಲಿ ಬರೆದಿದ್ದ ಕಾಲಜ್ಜಾನವನ್ನೆಲ್ಲಾ ತರಿಸಿ ಅಚ್ಚಮ್ಮನವರ ಮನೆಯಲ್ಲಿಯೇ ಊತಿಟ್ಟು ಆದರ ಮೇಲೊಂದು ಹುಣಸೆ ಸಸಿಯನ್ನು ನೆಟ್ಟು ನನ್ನ ಶ್ರೀ ವೀರಬ್ರಹ್ಮೇಂದ್ರಸ್ವಾಮಿ ಅವತಾರವನ್ನು ಮುಗಿಸಿ ಮುಂದಿನ ಅವತಾರ ಶ್ರೀವೀರಭೋಗ ವಸಂತಾವತಾರಲ್ಲಿ ಬರುವ ಮುನ್ನ ಈ ಸಸಿಯು ಮರವಾಗಿ ಇದರಲ್ಲಿ ಶೇವಂತಿಗೆ ಹುವ್ಚು ಬಿಡುತ್ತದೆ. ಅದೇ ನಿಮಗೆ ಮುನ್ಸೂಚನೆ. ಇನ್ನು ಮುಂದೆ ನಾನು ಶ್ರೀ ವೀರ ಬ್ರಹ್ಮೇಂದಸ್ವಾಮಿಯೆ೦ಬ ಹೆಸರಿನಲ್ಲಿ ಮಾಡಬೇಕಾದ ಕೆಲಸಗಳು ಬಹಳಷ್ಟಿವೆ ನಾನು ಇನ್ನು ಕೆಲ ದಿನಗಳು ಮಾತ್ರವೇ ಇಲ್ಲಿದ್ದು ಯಾತ್ರಾರ್ದಿಯಾಗಿ ಸಂಚಾರವನ್ನು ಕೈಗೊಳ್ಳಬೇಕಾಗಿದೆ. ಮುಂದಿನ ದಿನದಲ್ಲಿ ಈ ಮಠಕ್ಕೆ ಬರುವ ಭಕ್ತಾದಿಗಳ ಕೋರಿಕೆಗಳನ್ನು ಶ್ರೀ ಅನ್ನಾಜಯ್ಯನವರೇ ನೆರವೇರಿಸುತ್ತಾರೆ ಎ೦ದು ಹೇಳಿದರು.
ಶ್ರೀಸ್ವಾಮಿಯವರ ಮನೋಭಿಷ್ಟವನ್ನು ಕೇಳಿದ ಅಚ್ಚನ್ಮ ಖಿನ್ನಳಾಗಿ ಸ್ವಾಮಿ! ಸತ್ಯ ಸ್ವರೂಪಾ! ನಮ್ಮಿಂದ ನೀವು ದೂರವಾದರೆ ಮುಂದೆ ನಮ್ಮ ಗತಿಯೇನು ಎನಲು ಶ್ರೀ ಸ್ವಾಮಿಯವರು ಅಮ್ಮಾ! ಸಾಧ್ವೀಮಣೀ! ನೀನು ನಿಜಕ್ಕೂ ಮುಕ್ತಳು. ನಿನ್ನ ಈ ಜನ್ಮ ಸಾರ್ಥಕತೆಯನ್ನು ಸಾಧಿಸಿದೆ. ನಿನ್ನ ಹೆಸರು ಆಚಂದ್ರಾರ್ಕವಾಗಿ ನಿಲ್ಬುತ್ತದೆ. ನೀನು ಚಿ೦ತಿಸುವ ಅಗತ್ಯವಿಲ್ಲ. ಎಂದು ಸಮಾಧಾನಪಡಿಸಿದರು. ಸಮಾಧಾನಗೊ೦ಡ ಅಚ್ಚಃನ್ಮ ಭಕ್ತಿಪೂರ್ವಕವಾಗಿ ನಮಿಸುತ್ತ ತಂದೆಯೇ! ತಾವುಗಳು ಈವರೆಗೂ ಬರೆದಿರುವ ಭೂತ ಭವಿಷ್ಯತ್ ವರ್ತಮಾನ ಕಾಲಜ್ಜಾನವನ್ನು ನಮಗೂ ಬೋಧಿಸಿ ಕೃತಾರ್ಥರನ್ನಾಗಿ ಮಾಡಿ ಎಂದು ನಮಸ್ಕಾರವನ್ನು ಮಾಡಿದಳು. ಆಶೀರ್ವದಿಸಿದ ಸ್ವಾಮಿಯವರು ಸಾಯಂಕಾಲ ಕಾಲಜ್ಜಾನವನ್ನು ಬೋಧಿಸುವುದಾಗಿ ಹೇಳಿದರು.
ಶ್ರೀ ಸ್ವಾಮಿಯವರು ಇಂದು ಸಾಯಂಕಾಲ ಕಾಲಜ್ಞಾನವನ್ನು ಬೋಧಿಸುವರೆಂದು ತಿಳಿದ ನೆರೆ ಊರಿನ ಭಕ್ತರಾದಿಯಾಗಿ ತಂಡೋಪ ತಂಡವಾಗಿ ಜನಸಾಗರವೇ ಬಂದು ಸೇರಿತು, ಮಠದ ಬಳಿಗೆ ಸಾಯಂಕಾಲ ಭಕ್ತರನ್ನು ಕುರಿತು ಭಕ್ತ ವೃ೦ದವೇ! ಕಲಿಯುಗವು ನಾಲ್ಕು ಸಾವಿರದೆ೦ಟುನೂರು (4800) ವರುಷಗಳು ಕಳೆದ ಮೇಲೆ ಭೂಲೋಕದಲ್ಲಿ ಮಾನವರಿಂದ ಪಾಪಕಾರ್ಯಗಳು ಅಧಿಕವಾಗಿ ನಡೆಯುವುವು. ಸಲ್ಲದ ಕಲಹಗಳು ಹೆಚ್ಚುವುವು. ಪಾಪಿಷ್ಟ ಜನರಲ್ಲಿ ಅಧಿಕ ನಿದ್ರೆ. ಅಧಿಕ ಆಹಾರಗಳು ಉಮ್ಮಡಿಯಾಗಿ ಸ್ಥಿರಚಿತ್ತರಾಗಿ ನಿಂತಲ್ಲಿ ನಿಲ್ಲದೆ ತಿರುಗುವರು. ಜೀವರಾಶಿಯೆಲ್ಲವೂ ತಳಮಳಗೊಳ್ಳುವುವು. ಸಂಪನ್ನರು ಕೋಪಿಷ್ಟರಾಗುವರು. ನೀಚರು ಪ್ರಬಲವಾಗಿ ಉತ್ತಮರೆಲ್ಲಿಯೂ ಇಲ್ಲದಾಗುವರು. ವಿಪ್ರರು ಸ್ವಧರ್ಮವನ್ನು ಬಿಟ್ಟು ಸ್ವಪ್ರತಿಷ್ಟರಾಗಿ ಅಲ್ಪರನ್ನಾಶ್ರಯಿಸಿ ಷಟ್ಟರ್ಮ ಹೀನರಾಗುವರು. ಕ್ಷತ್ರಿಯರು ರಾಜ ಧರ್ಮಗಳನ್ನು ಮರೆತು ನೀಚ ಪ್ರವೃತ್ತಿಯಲ್ಲಿದ್ದು ನೆಲೆಕಾಣದಾಗುವರು. ಕುಲಧರ್ಮಗಳನ್ನು ಮರೆತು ದುಷ್ಪರ್ಮಿಗಳಾಗಿ ವರ್ತಿಸುವರು. ಅಲ್ಪ ಬೆಳೆಯೇ ಆಗುವುದು ಹಸುಗಳು ಸ್ವಲ್ಪ ಹಾಲನ್ನೇ ಕೊಡುವುವು. ಶೂದರಾದಿಯಾಗಿ ಎಲ್ಲರೂ ಆನೀತಿ ಅಸತ್ಯದಿ೦ದ ಅಕೃತ್ಯಗಳಿ೦ದ ಜ್ಞಾನ ಶೂನ್ಯರಾಗಿ ದರದ್ರರಾಗಿರುವರು. ಎಲ್ಲಾ ವರ್ಗದವರೂ ಜಾತಿ ಸಂಕರವಾಗಿ ದ್ವೇಷಾಸೂಯೆಗಳಿಂದ ಹೊಡೆದಾಡಿಕೊಂಡು ಸಾಯುವರು. ತಂದೆ ಮಕ್ಕಳೆನ್ನದೆ ಕಲಹಗಳು ನಡೆಯುವುವು. ದೇವ (ವಿಶ್ವ) ಬ್ರಾಹ್ಮಣರನ್ನು, ಗುರುಗಳನ್ನು ದೂಷಿಸುವರು. ಹಿರಿಯ-ಕಿರಿಯರೆಂಬ ಅ೦ತರವಿಲ್ಲದಾಗುವುದು. ಅನ್ಯರ ಸ೦ಪತ್ತನ್ನು ಅಪಹರಿಸುವರು. ವಿಚಿತ್ರವಾದ ವ್ಯಾಧಿಗಳು, ಕಳ್ಳತನಗಳು ಹೆಚ್ಚುವುವು. ಅಗ್ನಿ ಭಯ ಅಧಿಕವಾಗುವುದು. ಕಾಡುಪ್ರಾಣಿಗಳು ಊರುಗಳಲ್ಲಿ ಸ೦ಚರಿಸುವುವು. ಆನೆಯಲ್ಲಿ ಹಂದಿ ಹುಟ್ಟುವುದು. ಹಂದಿಯಲ್ಲಿ ಆನೆ ಹುಟ್ಟುವುದು. ಹ೦ದಿಯಲ್ಲಿ ಕೋತಿ ಹುಟ್ಟುವುದು. ವಿಷ ಜಂತುಗಳು ಹೆಚ್ಚುವುವು. ವೇಶ್ಯೆಯರ ವಶೀಕರಣ, ಅಂಜನ, ದುರಾಸೆಯ ಭ್ರಮೆಗಳಿಂದ ಪ್ರಜೆಗಳ ಧನ ಸಂ೦ಪತ್ತು ಹಾಳಾಗುವುದು. ಆದರಿಂದ ದರಿದ್ರರಾಗುವರು. ವೇದ, ಇಂದ್ರಜಾಲವನ್ನು ಚಾ೦ಡಾಲರು ಅಭ್ಯಾಸಮಾಡುವರು. ಶಿಲೆಗಳು ಮಾಂಸಕಂಡಗಳನ್ನು ಉಗುಳುವುವು. ಅವುಗಳನ್ನು ತಿನ್ನಲು ಹದ್ದುಗಳು ಬರುವುವು. ಚೋಳ ಮ೦ಡಲವು ನಷ್ಟವಾಗುವುದು. ಕುದ್ದುಗಳು ಸಾಯುತ್ತವೆ. ಸತ್ತ ಹದ್ದುಗಳನ್ನು ಹಿಡಿದು ಜನರು ಕುಣಿದಾಡುವರು. ಬಾಯಿಯಲ್ಲಿ ಬೆಂಕಿ ಕೊಳ್ಳಿಗಳನ್ನು ಕಚ್ಚಿಕೊ೦ಡು ತಿರುಗುವರು. ಬೆಟ್ಟಗಳು ಸುಟ್ಟು ಹೋಗುವುವು. ಹೊಟ್ಟೆ ಉರಿಯಿಂದ ಜನರು ಸಾಯುವರು. ಭೂತ ಗ್ರಹಗಳ ಕಾಟ ಹೆಚ್ಚುವುದು. ಬೆಂಡು ಮುಳುಗಿ ಗುಂಡು ತೇಲುವುದು. ಎದೆ ಗುಂಡಿಗೆ, ನಡುನೆತ್ತಿಗಳು ಒಡೆದು ಸಾಯುವರು. ಬಾಯಿಯಲ್ಲಿ ಬೊಜ್ಜೆಗಳುಟ್ಟಿ ರಕ್ತ ಸ್ರಾವದಿ೦ದಲೂ ಸಾಯುವರು. ಮೃಗ, ಪಶು, ಪಕ್ಷಿಗಳು ಗುಂಪು ಗುಂಪಾಗಿ ಸಾಯುವುವು. ಪಟ್ಟಣಗಳನ್ನೆಲ್ಲಾ ಒಬ್ಬರೇ ಆಳುವರು. ಭರತಖಂಡವನ್ನು ಬಿಳಿಯರು ಆಳುವರು. ಅವರಿ೦ದ ಎಲ್ಲರೂ ವಿದ್ಯಾವ೦ತರಾಗುವರು. ನವ ನಾಗರೀಕತೆ ಅಧಿಕವಾಗುವುದು. ವಿದ್ಯೆಜ್ಞಾನ ಹೆಚ್ಚಿ ಎಲ್ಲಾ ವರ್ಣಗಳು ಒಂದಾಗುವುವು. ಕಳೆದ ಯುಗ ಪಾಲನೆಗಿ೦ಂತಲೂ ಈ ಪಾಲನೆಯು ಸರ್ವರಿಗೂ ಅನುಕೂಲವಾಗಿರುವುದು. ನೀರಿನಿಂದ ದೀಪಗಳು ಬೆಳಗುವುವು. ಎತ್ತುಗಳಿಲ್ಲದೆ ಬಂಡಿ ಹೋಗುವುದು. ಒಂದೇ ಕೊಳದಲ್ಲಿ ಹುಲಿ ಮೇಕೆ ಜಲಪಾನ ಮಾಡುವುವು. ಅತಿ ಕುಳ್ಳರು ಹುಟ್ಟುವರು. ಜನರು ಆಕಾಶದಲ್ಲಿ ಹಾರಾಡುವರು. ಕಂಜಿಯಮೇಲೆ 'ವಗೆ ಬಂಡಿ. ಓಡುವುದು. ಕೀಳು ಜನರು ಆಚಾರವ೦ತರಾಗುವರು. ಅವರು ಬ್ರಾಹ್ಮಣರನ್ನು ವಿಶ್ವಬ್ರಾಹ್ಮಣರನ್ನು ನಿಂದಿಸುವರು. ದೇವಾಲಯ ನಿರ್ಮಾಣ, ದೇವತಾ ಪ್ರತಿಷ್ಠಾಪನೆ, ದೇವತಾರ್ಚನೆಗಳನ್ನು ಮಾಡುವವರು ದರಿದ್ರರಾಗಿರುವರು. ಕಾಶಿಪಟ್ಟಣವು ನಲವತ್ತು ದಿನಗಳ ಕಾಲ ಹಾಳು ಬೀಳುವುದು. ವಿಜಯನಗರ ಕೆಲಕಾಲ ಪ್ರಸಿದ್ದಿಹೊ೦ದಿ ನ೦ತರ ಶೂನ್ಯವಾಗುವುದು. ವಿಷ್ಣು ಭಕ್ತರು ಕೊ೦ಡುವೀಡು ಎ೦ಬ ಗ್ರಾಮವನ್ನು ಅಳುವರು. ಹನ್ನೆರಡು ದಿನಗಳ ಕಾಲ ಗೋದಾವರಿಯಲ್ಲಿ ನೀರು ಇಂಗಿ ಹೋಗುವುದು. ವೆಂಕಟೇಶ್ವರನ ಬಲಬುಜವು ಅದುರುವುದು. ಕಾಳಹಸ್ತೇಶ್ವರನ ಸಮ್ಮುಖದಲ್ಲಿ ದ್ವಾರಪಾಲಕರು ಒಬ್ಬರಿಗೊಬ್ಬರು ಗುದ್ದಿಕೊಳ್ಳುವರು.