ಶ್ರೀ ಪೋತುಲೂರು ವೀರಬ್ರಹ್ಮೇಂದ್ರಸ್ವಾಮಿ ಸಂಕ್ಷಿಪ್ತ ಚರಿತ್ರೆ

  • ಆಚ್ಚಮ್ಮನ ಹಸುಗಳೆಲ್ಲವೂ ದಿನಗಳೆದಂತೆ ಸ೦ಮೃದ್ಧಿಯಾಗುತ್ತಿದ್ದವು. ಆಚ್ಚಮ್ಮಗೂ ನೆಮ್ಮದಿಯಾಗಿತ್ತು. ಒ೦ದು ದಿನ ಇದ್ದಕ್ಕಿದ್ದಂತೆ ಪ್ರಯಾಣಿಕರಿಬ್ಬರು ಬಂದು ಅಮ್ಮಾ! ನಿಮ್ಮ ಹಸುಗಳೆಲ್ಲವೂ ಕಾಡಿನ ಮಧ್ಯದಲ್ಲಿವೆ. ಅಲ್ಲಿ ಯಾರೊಬ್ಬರೂ ಇಲ್ಲ. ಕಾಡು ಪ್ರಾಣಿಗಳ ಕಾಟ ವಿಪರೀತವಾಗಿದೆ ನೀವು ಜಾಗ್ರತರಾಗದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು ಹೇಳಿ ಹೋದರು. ಭಯ ಆಶ್ಚರ್ಯಗಳೆರಡೂ ಒಮ್ಮೆಗೆ ಮುಸುಕು ಹಾಕಿದವು. ಅಚ್ಚಮ್ಮಗೆ ಇಂದಿನವರೆಗೂ ಯಾವ ಅಪಾಯವನ್ನು ಕಾಣದ ಅಚ್ಚಮ್ಮಗೆ ಹಸುಗಳೊಂದಿಗೆ ವೀರಪ್ಪಯ್ಯನಿಲ್ಲದಿರುವುದನ್ನು ಕೇಳಿ ಗಾಬರಿಯೂ ಆಯಿತು. ಸಂಜೆಯವೇಳೆಗೆ ಯಾವುದೇ ಅಪಾಯವಿಲ್ಲದೆ ಹಸುಗಳೆಲ್ಲವೂ ಮನೆ ಸೇರಿದುದನ್ನು ಕಂಡು (ಪರವಮನಾನಂದವಾಯಿತು ಅಚ್ಚವರ್ಮಾಗೆ. ಅಂದು ರಾತ್ರಿ ಬಹು ಸಮಯದವರೆಗೂ ನಿದ್ರೆಬಾರದಾಯಿತು ಬಹುವಾಗಿ ಯೋಚಿಸಿದಳು ಅಚ್ಚಮಾ. ನಾಳೆಯೇ ಪರೀಕ್ಷಿಸೋಣವೆ೦ದುಕೊ೦ಡು ಮಲಗಿದಳು.

    ವೀರಪ್ಪಯ್ಯ ಎಂ೦ದಿನ೦ತೆ ಹಸುಗಳೊಂದಿಗೆ ಹೊರಟ. ರಾತ್ರಿಯ ಯೋಚನೆಯಂತೆ ಅಚ್ಚಮ್ಮ ಮರೆ ಮರೆಯಾಗಿ ಸಾಗುತ್ತ ಹಸುಗಳನ್ನು ಹಿ೦ಬಾಲಿಸಿದಳು. ದಿನವೂ ಸೇರಿದ೦ತೆ ಹಸುಗಳೆಲ್ಲವೂ ಗುಂಪುಗೂಡಿ ಮೆಲಕು ಹಾಕುತ್ತ ಮಲಗಿದವು. ವೀರಪ್ಪಯ್ಯ ಹಸುಗಳ ಸುತ್ತಲೂ ಗೆರೆಯನ್ನು ಎಳೆದು ಮಾಮೂಲಿನಂತೆ ತಾಳೆ ಗರಿಯನ್ನು ಕಿತ್ತು ಗುಹೆಯಲ್ಲಿ ಗವೇಶಿಸಿದ. ಅದೆಲ್ಲವನ್ನು ದೂರದ ಮರೆಯಲ್ಲಿ ನಿಂತು ವೀಕ್ಷಿಸುತ್ತಿದ್ದ ಆಚ್ಚಮ್ಮಗೆ ಆಶ್ಚರ್ಯವೊ೦ದು ಕಂಡುಬಂತು. ಅಸಿವಿನಿ೦ದ ನುಗ್ಗಿಬ೦ದ ಹೆಬ್ಬುಲಿಯು ಗೆರೆಯಿಂದ ಒಳಗೆ ಹೋಗಲಾಗದೆ ಗೆರೆಯನ್ನು ಸುತ್ತುತ್ತಿತ್ತು. ಹಸುಗಳಾದರೂ ನಿರ್ಭಯವಾಗಿ ಮೆಲುಕು ಹಾಕುತ್ತ ಮಲಗಿರುವುದನ್ನು ಕ೦ಡು ಭಯದೊಂದಿಗೆ ಆಶ್ಚರ್ಯವನ್ನು ಪಡುತ್ತಿದ್ದಳು. ಹುಲಿಗೆ ಏಟಿನ ಮೇಲೆ ಏಟು ಬೀಳಲಾರಂಭಿಸಿದವು. ವೀರಪ್ಪಯ್ಯನ ಕೈಲಿದ್ದ ಕೋಲು ಹುಲಿಗೆ ಪೆಟ್ಟನ್ನು ಕೊಡುತ್ತಲೇ ಇತ್ತು. ಪೆಟ್ಟನ್ನು ತಾಳಲಾಗದ ಹುಲಿ ಅಡವಿಯಲ್ಲಿ ಕಣ್ಮರೆಯಾಯಿತು. ವೀರಪ್ಪಯ್ಯ ಗುಹೆಯನ್ನು ಪ್ರವೇಶಿಸುವಾಗ ತಾಳೆ ಗಿಡವು ಬಾಗಿದುದನ್ನು, ಗರಿಯನ್ನು ಕಿತ್ತ ನ೦ತರ ನೇರವಾಗಿ ನಿಂತಿದ್ದನ್ನು ದೂರದಿಂದ ನೋಡಿದ ಅಚ್ಚಮ್ಮಗೆ ಏನೊಂದೂ ಅರ್ಥವಾಗದಾಯಿತು. ಮೈಮರೆತು ನಿಂತ ಅಚ್ಚಮ್ಮ ಎಚ್ಚರಗೊಂಡು ಮೆಲ್ಲಗೆ ಗುಹೆಯನ್ನು ಹೊಕ್ಕಳು ಅಲ್ಲಿ ಎಂದೂ ಕಂಡರಿಯದ ಆಶ್ಚರ್ಯವನ್ನೇ ಕಂಡಳು.

    ಗುಹೆಯಲ್ಲಿ ದೇದೀಷ್ಯವಾದ ಪ್ರಕಾಶ, ಸೂರ್ಯಕಾಂತಿಯುತವಾಗಿ ಭೂತ ಭವಿಷ್ಯತ್ ವರ್ತಮಾನ ಕಾಲಜ್ಜಾನವನ್ನು ಬರೆಯುತ್ತಿದ್ದ ವೀರಪ್ಪಯ್ಯನವರನ್ನು ಕಂಡ ಅಚ್ಚಮ್ಮ ಪರಮಾತ್ಮ! ಎಂದು ಶಿರಸಾಷ್ಟಾಂಗ ಪ್ರಣಾಮವನ್ನು ಮಾಡಿ ತಂದೆಯೇ! ನನ್ನ ಸರ್ವ ಅಪರಾಧಗಳನ್ನು ಮನ್ನಿಸೆಂದು ಮೇಲೇಳದಾದಳು. ಎಲ್ಲವನ್ನು ಬಲ್ಲ ವೀರಪ್ಪಯ್ಯನವರು ಅಮ್ಮಾ! ಇದರಲ್ಲಿ ನಿನ್ನ ಅಪರಾಧ ಕಿಂಚಿತ್ತು ಇಲ್ಲ. ನೀನು ಭಯ ಭೀತಳಾಗುವ ಅವಶ್ಯಕತೆಯೂ ಇಲ್ಲ. ಎಲ್ಲವೂ ಬ್ರಹ್ಮ ಲಿಖಿತದ೦ತೆ ನಡೆಯುತ್ತಿದೆ. ನೀನು ಈ ಜನ್ಮದಲ್ಲಿ ಪರಮ ಪಾವನಳು. ಮೇಲೇಳಮ್ಮ ಎ೦ದರು. ಮಹಾಪಾವನಳು ಮಹಿಮಾ! ನಿಮ್ಮನ್ನು ಸಾಮಾನ್ಯನೆಂದು ಭಾವಿಸಿದ ಸರ್ವಾಪರಾಧಕ್ಕೆ ಕ್ಷಮಾದಾನ ನೀಡುವವರಿಗೆ ನನಗೆ ಸಮಾಧಾನವಾಗದು. ಅವತಾರ ಪುರುಷ! ತ್ರಾಹಿ ತ್ರಾಹಿ ಎಂದು ಪದೇ ಪದೇ ನಮಸ್ಕರಿಸಿದಳು ಅಚ್ಚಮ್ಮ. ಅಮ್ಮಾ! ಯಾವ ಅಪರಾಧವನ್ನು ಮಾಡದ ನಿನ್ನನ್ನು ಕ್ಷಮಿಸುವುದಾದರೂ ಇನ್ನೆಲ್ಲಿ ಎಂದು ಆಚ್ಚಮ್ಮನನ್ನು ಸಮೀಪಿಸಿ ತಮ್ಮ ಅಭಯ ಹಸ್ತವನ್ನು ಅಚ್ಚಮ್ಮನ ಶಿರಸ್ಸಿನ ಮೇಲೆ ಇರಿಸಿ ಅಮ್ಮಾ! ನೀನಿನ್ನು ನಿರ್ಭೀತಳಾಗಿರು ಎಂದು ಹರಿಸಿದರು. ಆಚ್ಚಮ್ಮಗೆ ವೀರಪ್ಪಯ್ಯನವರ ಅಭಯ ಹಸ್ತ ಸೋಕುತ್ತಲೆ ಹೊಸ 'ಕೀತನವೊ೦ದು ಮೂಡಿದಂತಾಯ್ತು.

    ಅಂದಿನಿಂದ ಸಾಧ್ವಿ ಅಚ್ಚಮ್ಮ ವೀರಪ್ಪಯ್ಯ ಸ್ವಾಮಿಯವರ ಪೂಜಾ, ಸಂಧ್ಯಾರ್ಚನೆಗೆ ತಾವೇ ಆಣಿ ಮಾಡಿಕೊಡುತ್ತಿದ್ದಳು. ಕುಡಿಯಲು ಹಾಲನ್ನು ಕೊಡುತ್ತಿದ್ದಳು. ವೀರಪ್ಪಯ್ಯನವರು ಹೇಳುತ್ತಿದ್ದ ಅದ್ವೈತ ವಿಚಾರಗಳನ್ನು ಮನಸಾರೆ ಆಲಿಸುತ್ತಿದ್ದಳು. ಹೆಚ್ಚು ಸಮಯವನ್ನು ವೀರಪ್ಪಯ್ಯನವರ ಸೇವೆಯಲ್ಲಿಯೇ ಕಳೆಯುತ್ತಿದಳು. ಇವರ ಪೂಜಾ ಕಾರ್ಯಗಳಿಗೆ ಯಾವ ಕೊರತೆಯೂ ಉಂಟಾಗಬಾರದೆ೦ಂದು ಊರ ಹೊರ ಭಾಗದಲ್ಲಿ ನ್ಯಾಲ (ನೆಲ) ಮಠವನ್ನು ಕಟ್ಟಿಸಿ ಎಲ್ಲಾ ಸಲಕರಣೆಗಳನ್ನು ಅಣಿಮಾಡಿಕೊಟ್ಟಳು. ದಿನಗಳೆದಂತೆ ವೀರಪ್ಪಯ್ಯಚಾರ್ಯಸ್ಥಾಮಿ ಎಂದು ಪ್ರಚಾರಗೊಳ್ಳುತ್ತ ಬನಗಾನಪಲ್ಲಿ ಗ್ರಾಮಕ್ಕೊಂದೇ ಅಲ್ಲದೆ ಸುತ್ತಮುತ್ತಲಿನ ಗ್ರಾಮ ವಾಸಿಗಳೆಲ್ಲರಿಗೂ ವಿಷಯ ತಿಳಿದು ತಮ್ಮಗಳ ಕಷ್ಟ ಸ೦ಕಟಗಳನ್ನು ನಿವಾರಿಸಿಕೊಳ್ಳಲು ಅನೇಕರು ಬಂದು ಸ್ವಾಮಿಯವರು ಅಭಿಮಂತ್ರಿಸಿ ಕೊಟ್ಟ ವಿಭೂತಿ, ಮಂತಾಕ್ಷತೆಗಳಿಂದ ತಮ್ಮ ನೋವುಗಳನ್ನು ನಿವಾರಿಸಿಕೊಂಡು ಅವರು ಬೋಧಿಸುವ ಜ್ಞಾನ ಬೋಧನೆಯನ್ನು ಕೇಳಿ ಸ೦ತೋಷವಾಗಿ ಹಿಂದಿರುಗುತ್ತಿದ್ದರು. ಕೆಲವರು ಅಲ್ಲಿಯೇ ಉಳಿದು ಸೇವೆಯನ್ನು ಸಲ್ಲಿಸುಸುತ್ತಿದ್ದರು.

    ಒಮ್ಮೆ ವೀರಪ್ಪಯ್ಯಚಾರ್ಯಸ್ವಾಮಿಯವರ ಪೂಜಾನ೦ತರ ಅಚ್ಚಮ್ಮನವರು ನಮಸ್ಕರಿಸಿ ವಿನಯ ವಿಧೇಯತೆಯಿಂದ ಸ್ವಾಮಿ! ಸತ್ಪುರುಷಾ! ನನಗೆ ಬ್ರಹ್ಮಜ್ಞಾನೋಪದೇಶವನ್ನು ಮಾಡಿ ತಮ್ಮ ಶಿಷ್ಯಕನ್ನಾಗಿ ಸ್ವೀಕರಿಸಿ ಕೃತಾರ್ಥಳನ್ನಾಗಿಸು ತಂದೆಯೇ ಎ೦ದು ಬೇಡಿದಳು. ಶ್ರೀ ಸ್ವಾಮಿಯವರು ಅಮ್ಮಾ! ಸಾದ್ವಿ! ಸುಗುಣಮತಿಯಾದ ನಿಮಗೆ ಇಲ್ಲವೆನ್ನಲಾದೀತೆ. ಒಂದು ಶುಭ ಮುಹೂರ್ತದಲ್ಲಿ ತಪ್ಪದೆ ಉಪದೇಶಿಸುವೆ. ಎನಲು ಅಚ್ಚಮ್ಮನವರಿಗೆ ಮಹದಾನಂ೦ದವಾಯ್ತು.

    ಯಾಗಂಟಿ ಕ್ಷೇತ್ರ ಮಹತ್ತರವಾದ ಸುಂದರ ತಾಣ, ಅದು ತಪಸ್ವಿಗಳಿಗೂ, ಸಾಧು ಸಂ೦ತರಿಗೂ, ಬ್ರಹ್ಮಜ್ಞಾನಿಗಳಿಗೂ ತವರು ಮನೆಯಂತಿತ್ತು. ಯಾಗಂಟೇಶ್ವರನ ನೆಲೆ, ಪುಷ್ಕರಿಣಿ, ಭವ್ಯ ಗುಹೆಗಳು, ಸುತ್ತಲಿನ ಗಿರಿಧಾಮ, ಅದರಲ್ಲಿನ ಜಲಧಾರೆ ಎಲ್ಲವೂ ಮನೋರಮ್ಯ

    ಅಚ್ಚಮ್ಮನವರಿಗೆ ಶ್ರೀಕ್ಷೇತ್ರ ಯಾಗ೦ಟಿಯಲ್ಲಿ ಬ್ರಹ್ಮಜ್ಞಾನೋಪದೇಶವನ್ನು ಶುಭ ಮುಹೂರ್ತವೊಂದರಲ್ಲಿ ಮಾಡಿದರು. ಅಂದು ಮಹಾ ಶುಭದಿನ. ಆಚ್ಚಮ್ಮನವರಿಗೆ ಸ್ಪರ್ಗವೇ ಧರೆಗಿಳಿದು ಬ೦ದಂತಾಗಿತ್ತು. ಅವರ ಆನಂದಕ್ಕೆ ಪಾರವಿಲ್ಲವಾಗಿತ್ತು. ದಿನಗಳು ಕಳೆಯುತ್ತಿದ್ದವು. ಶ್ರೀ ವೀರಪ್ಪಯ್ಯಾ ಸ್ವಾಮಿಯವರ ಮಹತ್ವ ಕರ್ನೂಲ್ ನವಾಬರಿಗೂ ತಿಳಿಯಿತು. ವೀರಪ್ಪಯ್ಯನವರನ್ನು ಪರೀಕ್ಷಿಸಲು ಹೋದ ನವಾಬರಿಗೆ ಅನೇಕ ಪವಾಡಗಳೇ ಮುಂದಾದವು. ನವಾಬರೇ ಅಲ್ಲದೆ ಅನೇಕ ಮುಸಲ್ಮಾನರು ಭಕ್ತರಾದರು. ಭಕ್ತರಾದವರಿಗೆ ವರ್ಣ ಭೇದಗಳೆ ಇಲ್ಲದಾದವು.