ಶ್ರೀ ಪೋತುಲೂರು ವೀರಬ್ರಹ್ಮೇಂದ್ರಸ್ವಾಮಿ ಸಂಕ್ಷಿಪ್ತ ಚರಿತ್ರೆ
ಸ್ವಲ್ಪ ಸಮಯದ ನಂತರ ವೀರಂಬಟ್ಟಯ್ಯ ಬಹಿರ್ಮುಖವಾಗುತ್ತಲೆ ರಾಜಕುಮಾರನಾದ ಆನಂದ ಭೈರವ ತಕ್ಷಣ ಎದ್ದು ನಿ೦ತವನೆ ಭಕ್ತಿಯ ಶ್ರದ್ಧಾಸಕ್ತಿಯಿ೦ದ ನಿಂತಲ್ಲಿಂದಲೆ ದೀರ್ಗಾದಂಡ ನಮಸ್ಕಾರವನ್ನು ಮಾಡಿದನು. ಶುಭ೦ ಎ೦ದ ವೀರ೦ಬಟ್ಟಯ್ಯ ಅಯ್ಯಾ! ನೀನು ಯಾರು ಎಂದು ಪ್ರಶ್ನಿಸಲು ಮಹಾನುಭಾಷಾ! ನಾನು ಕಾಶಿದೇಶದ ರಾಜಕುಮಾರ. ನನ್ನ ಹೆಸರು. ಆನಂದ ಭೈರವ. ಒಮ್ಮೆ ವನ ವಿಹಾರಾರ್ಥವಾಗಿ ಕಾಡಿಗೆ ಹೋದಾಗ ಹಸುವನ್ನು ಕೊಲ್ಲಲು ಹುಲಿಯೊಂದು ಹಾರುವುದನ್ನು ಕಂಡು ಹುಲಿಯನ್ನು ಕೊಲ್ಲಲು ಪ್ರಯೋಗಿಸಿದ ಬಾಣವು ಹಸುವನ್ನು ಬಲಿತೆಗೆದುಕೊಂಡಿತು. ಆ ಹಸು ಅಂಬಾ ಎಂದು ಪ್ರಾಣವನ್ನು ಬಿಟ್ಟಿತು. ಆಗೋ ಹತ್ಯದ ದೋಷ ಪರಿಹಾರಕ್ಕಾಗಿ ಪುಣ್ಯ ಕ್ಷೇತ್ರ ಸ೦ಚಾರಾರ್ದಿಯಾಗಿ ಬಂದಿದ್ದೇನೆ. ತಾವು ನನ್ನ ಪಾಪ ದೋಷ ಪರಿಹಾರವಾಗುವ ಮಾರ್ಗವನ್ನು ತೋರಿ ದೋಷ ಮುಕ್ತನಾಗಿ ಮಾಡಿರೆಂದು ಬೇಡಿದನು.
ರಾಜಕುಮಾರನ ವಿಷಯವನ್ನು ಕೇಳಿದ ವೀರ೦ಭಟ್ಟಯ್ಯ ಅನಂದ ಬೈರವನನ್ನು ಒಮ್ಮೆ ನೋಡಿ ಆಯ್ಯನ್ಯಾ! ನೀನು ವರಾನವ
ದೇಹಧಾರಿಯಾಗಿರುವುದರಿ೦ದ ನಿನ್ನ ನಿಜ ಸ್ಪರೂಪವನ್ನು ಆರಿಯದಾಗಿರುವೆ. ಕಲಿಯುಗದಲ್ಲಿ ಮಾನವರು ಮಾಡುವ ಪಾಪ ಕೂಪಗಳ ಭಾರವನ್ನು ಹೊರಲಾಗದ ಭೂದೇವಿಯ ಮೊರೆಯನ್ನು ಆಲಿಸಿದ ತ್ರಿಮೂರ್ತಿಗಳಾದ ಸಾವುಗಳು ಮಾನವ ದೇಹಧಾರಿಗಳಾಗಿ ಭೂ ಲೋಕಕ್ಕೆ ಬರಬೇಕಾಯಿತು. ನೀನು ಶಂಕರನು. ನಾನೇ ಮಹಾವಿಷ್ಣುವು, ಬ್ರಹ್ಮದೇವನು ಅನ್ನಾಜಯ್ಯಾ ಎಂಬ ಹೆಸರಿನಲ್ಲಿ ಮಾನವನಾಗಿ ಲೋಕ ಸಂಚಾರವನ್ನು ಮಾಡುತ್ತ ಪಾಪಾತ್ಮರನ್ನು ಪಾವನರನ್ನಾಗಿ ಮಾರ್ಪಡಿಸುತ್ತಿದ್ದಾನೆ. ತ್ರಿಮೂರ್ತಿಗಳಾದ ನಾವುಗಳು ಮಾನವ ದೇಹವನ್ನು ಧರಿಸಿದ್ದರು ಸಹ ಒಂದೆಡೆ ಸೇರುವ ಸಮಯ ಮುಂದೆ ಬರುತ್ತದೆ. ಈ ಜನ್ಮದಲ್ಲಿ ನಿನಗೆ ಗೋಹತ್ಯ ದೋಷವು ಪರಿಹಾರವಾಗದು. ಮುಂದಿನ ಮುಸಲ್ಮಾನ ಜನ್ಮದಲ್ಲಿ ನೀನು ಸಿದ್ಧಯ್ಯನೆಂಬ ಹೆಸರಿನಲ್ಲಿ ವೀರಬ್ರಹ್ಮೇಂದ್ರ ಸ್ವಾಮಿಯಾದ ನನ್ನ ಶಿಷ್ಯನಾಗಿದ್ದು ಮುಕ್ತಿಯನ್ನು ಪಡೆಯುವೆ. ಬನಗಾನಪಲ್ಲಿ ಗ್ರಾಮದಲ್ಲಿ ಬಹ್ಮನು ಆನ್ನಾಜಯ್ಯನಾಗಿ, ಮುಡುಮಾಲ ಗ್ರಾಮದಲ್ಲಿ ನೀನು ಸಿದ್ದಯ್ಯನಾಗಿ ನಾನು ಕ೦ದಿಮಲ್ಲಯ್ಯಪಲ್ಲಿ ಗ್ರಾಮದಲ್ಲಿ ನಾನು ವೀರ ಬ್ರಹ್ಮೇಂದ್ರ ಸ್ವಾಮಿಯಾಗಿ ನೆಲೆಸುತ್ತೇನೆ. ಅಜ್ಞಾನದಲ್ಲಿ ಮೈಮರೆತಿರುವ ಮಾನವರಿಗೆ ಜ್ಞಾನ ಬೋಧೆಯನ್ನು ಮಾಡುತ್ತ ಸುಜ್ಜಾನಿಗಳನ್ನಾಗಿ ಪರಿವರ್ತಿಸಬೇಕಾಗಿದೆ. ಅಂದಿನ ಸಮಯ ಬರುವವರೆಗೆ ನಾನು ಉಪದೇಶಿಸುವ ಮಹಾ ಮಂತ್ರವನ್ನು ಜಪಿಸುತ್ತ ಮಾನವರಿಗೆ ಸದ್ದೋಧನೆಯನ್ನು ಮಾಡುತ್ತ ಕೃತಾರ್ಥರನ್ನಾಗಿ ಮಾಡುತ್ತಿರು. ಈ ಜನ್ಮದಲ್ಲಿ ಮಾಡಿದ ಗೋ ಹತ್ಯ ದೋಷವು ಮುಂದಿನ ಜನ್ಮದಲ್ಲಿ ಸಿದ್ದಯ್ಯನೆಂಬ ಹೆಸರಿನಲ್ಲಿ ಪರಿಹಾರವಾಗಲು ನಾ೦ದಿಯಾಗುವುದು. ಎಂದು ಹೇಳಿದ ವೀರಂಬಟ್ಟಯ್ಯ ರಾಜಕುಮಾರನಿಗೆ ಹೇಳಿ ದ್ವಾದಶಾಕ್ಷರ ಮಹಾ ಮಂತ್ರವನ್ನು, ಉಪದೇಶಿಸಿದರು. ಓಂ - ಹ್ರೀ೦ -ಕ್ಷೀಂ-ಶ್ರೀ೦ ಶಿವಾಯ ಬ್ರಹ್ಮಣೇ ನಮಃ ' ಈ ಮಹಾ ಮಂತ್ರವನ್ನು ಉಪದೇಶವನ್ನು ಪಡೆದ ರಾಜಕುಮಾರ ಆನಂದ ಭೈರವ ಕಾಶಿ ಪಟ್ಟಣಕ್ಕೆ ಹಿ೦ದಿರಿಗಿದನು.
ಹೀಗೆ ತಪವನ್ನಾಚರಿಸುತ್ತಿದ್ದು ವೀರ೦ಭಟ್ಟಯ್ಯ ಹಲವಾರು ದಿನಗಳು ತಮ್ಮ ಬಳಿಗೆ ಬರುವವರಿಗೆ ಜ್ಞಾನವನ್ನು ಬೋಧಿಸಿ ಆಧ್ಯಾತ್ಮಿಕ ವಿಷಯಗಳನ್ನು ತಿಳಿಸಿ ಅವರ ಸಂಕಷ್ಟಗಳನ್ನು ಪರಿಹರಿಸುತ್ತಿದ್ದರು. ಹರಿಹರಪುರದವರನೇಕರು ಶಿಷ್ಯರಾಗಿದ್ದು ಸ್ವಾಮಿ ವೀರಪ್ಪಯ್ಯ ಎ೦ದು ಸಂಬೋಧಿಸುತ್ತ ಸೇವ ಮಾಡುತ್ತಿದ್ದರು. ಹೀಗೆಯೇ ಕೆಲ ವರ್ಷಗಳು ಕಳೆದ ನ೦ತರ ವೀರಂಭಟ್ಟಯ್ಯ ಸ೦ಚಾರಾರ್ದಿಯಾಗಿ ಮಾರ್ಗದಲ್ಲಿ ಸಿಗುತ್ತಿರುವ ದೇವಾಲಯಗಳನ್ನು ವೀಕ್ಷಿಸಿ ದೈವ ದರ್ಶನವನ್ನು ಮಾಡುತ್ತ ಬನಗಾನಪಲ್ಲಿ ಗ್ರಾಮಕ್ಕೆ ಬ೦ದರು.
ಬನಗಾನಪಲ್ಲಿ ಗ್ರಾಮದಲ್ಲಿ ಸಾದ್ವಿ ಶಿರೋಮಣಿಯಾದ ಗರಿಮಿರೆಡ್ಡಿ ಆಚ್ಚಮ್ಮ ದೈವ ಭಕ್ತಳು, ಹಿತ ಚಿ೦ತಕಳು ಆಗಿದ್ದು ಅಪಾರ ಹಸುಮಂದೆಯನ್ನೇ ಪಡೆದಿದಳು. ಬನಗಾನಪಲ್ಲಿಗೆ' ಬ೦ದ ವೀರ೦ಬಟ್ಟಯ್ಯ ಅಚ್ಚಮ್ಮನವರ ಮನೆಯ. ಮುಂದಿನ ಕಟ್ಟೆಯ ಮೇಲೆ ಕುಳಿತು-ಧ್ಯಾನಾಸಕ್ತರಾಗಿದ್ದರು. ಅಂದಿನ ಬೆಳಗಿನ ಸಮಯ ಅಚ್ಚಮ್ಮ ಹೊರ ಬಂದಾಗ ಧ್ಯಾನಾಸಕ್ತರಾಗಿದ್ದ ವೀರ೦ಭಟ್ಟಿಯ್ಯನನ್ನು ಕಂಡಳು. ಎಂದೂ ಇಲ್ಲದ ಆಶ್ಚರ್ಯ ಅಚ್ಚಮ್ಮನನ್ನು ಆವರಿಸಿತ್ತು. ದೈವ ಕಳೆ, ಸೂರ್ಯಕಾ೦ತಿಯನ್ನೊಂದಿದ್ದ ವೀರ೦ಬಟ್ಟಯ್ಯನನ್ನು ಕ್ಷಣಕಾಲ ನೋಡುತ್ತಾ ನಿಂತಳು. ಈತನು ಹುಚ್ಚನೋ? ದೈವಾಂಶ ಸಂಭೂತನೋ? ಎಂದು ಯೋಚಿಸಿದಳು. ಸ್ವಲ್ಪ ಹತ್ತಿರ ಬ೦ದು ವಿನಯದಿಂದ ಅಯ್ಯಾ! ನೀನು ಯಾರು? ರಾತ್ರಿಯಿ೦ದಲೂ ಹೀಗೆಯೇ ಅರೆ ನಿದ್ರೆಯಲ್ಲಿ ಕುಳಿತಿರುವೆ. ನೀನೇನು ನಿರ್ಗತಿಕನೇ? ಅರೆ ಹುಚ್ಚನೇ? ನಿನ್ನ ಊರಾದರೂ ಯಾವುದು? ಎಂದು ಪ್ರಶ್ನಿಸಿದಳು. ಕಣ್ಣುಗಳನ್ನು ತೆರೆದ ವೀರಂಬಟ್ಟಯ್ಯ ಅಮ್ಮಾ! ನಾನು ಉಚ್ಚರಲ್ಲಿ ಉಚ್ಚನೂ ಹೌದು! ಹುಚ್ಚರ ಹುಚ್ಚನ್ನು ಬಿಡಿಸುವವನೂ ಹೌದು, ನನಗೆ ಎಲ್ಲರೂ ಇದ್ದು ಯಾರೂ ಇಲ್ಲದವನೂ ಹೌದು. ನನಗೆ ಏನೆಲ್ಲವೂ ಇದ್ದು ಏನೊಂದು ಇಲ್ಲದವನೂ ಹೌದು, ಎಂದು ಉತ್ತರಿಸಿದನು. ಅಚ್ಚಮ್ಮಗೆ ಇನ್ನೂ ಆಶ್ಚರ್ಯವೆನಿಸಿತು. ನಿನ್ನ ಊರು ಎಂದು ಮತ್ತೊಮ್ಮೆ ಕೇಳಿದಳು. ಅಮ್ಮಾ! ನನಗೆ ನಾನಿದ್ದುದೇ ಊರು. ಆಶ್ರಯದಾತರೇ ನನ್ನವರು ಎಂದರು.
ವೀರ೦ಬಟ್ಟಯ್ಯನ ಮಾತನ್ನು ಕೇಳಿ ಇನ್ನೂ ಆಶ್ಚರ್ಯಗೊಂಡ ಅಚ್ಚಮ್ಮ ಅಯ್ಯಾ! ನಿನ್ನ ಹೆಸರಾದರು ಏನು? ಮತ್ತೆ ಕೇಳಿದಳು. ವೀರಪ್ಪಯ್ಯ ಎ೦ದರು. ನಿನ್ನ ಪಯಣವಾದರೂ ಎಲ್ಲಿಗೆ? ಎನಲು ವೀರಂಬಟ್ಟಯ್ಯ ಅಮ್ಮಾ! ನೀವು ಆಶ್ರಯವನ್ನಿತ್ತರೆ ಇಲ್ಲಿಯೇ ಇರುವೆ. ನೀವೇನೂ ನನಗೆ ಕೊಡಬೇಕಾಗಿಲ್ಲ. ಸ್ವಲ್ಪ ಗೋ ಕ್ಷೀರವೇ ಸಾಕು. ಪ್ರತಿ ಉತ್ತರವನ್ನು ಕೇಳಿದ ಅಚ್ಚಮ್ಮ ಇಲ್ಲಿದ್ದು ನೀನು ಮಾಡುವುದಾದರೂ ಏನು? ಮರು ಪಸ್ಟೆಮಾಡಿದಳು. ಅಮ್ಮಾ! ನಿಮ್ಮ ಮನೆಯಲ್ಲಿನ ಗೋಪಾಲಕನಾಗಿರುವೆ. ಏನೋನಪ್ಪ ನಿನ್ನ ಮಾತುಗಳೆಲ್ಲ ನನ್ನನ್ನು ಆಶ್ಚರ್ಯಗೊಳಿಸುತ್ತಿವೆ. ಮತ್ತೆ ಪಶ್ಚಿಸಲಿಲ್ಲ ಆಚ್ಚಮ್ಮ. ಒಳಗೆ ಹೋಗಿ ಹಾಲನ್ನು ತಂದುಕೊಟ್ಟಳು. ಹಾಲನ್ನು ಕುಡಿದ ವೀರಂಭಟ್ಟಯ್ಯ ಅಮ್ಮಾ! ಈಗಿಂದೀಗಲೆ ನಾನು 5ರ್ತವ್ಯವನ್ನು ಮಾಡಲಿಚ್ಚಸುತ್ತೇನೆ. ಅಪ್ಪಣೆಯೋ? ಎಂದ ವೀರಪ್ಪಯ್ಯನ ಮಾತಿಗೆ ಏನೊ೦ದು ಉತ್ತರ ಕೊಡಲಾಗಲಿಲ್ಲ ಅಚ್ಚಮ್ಮಗೆ ವೀರಪ್ಪಯ್ಯ ಒಮ್ಮೆ ಅರೆ ಹುಚ್ಚನಂತೆ ಕಂಡರೆ ಮತ್ತೊಮ್ಮೆ ಸಾಕ್ವಾತ್ ದೈವ ದರ್ಶನವನ್ನೇ ಪಡೆದಷ್ಟು ಅನುಭವ ಆಗುತ್ತಿತ್ತು ಅವರ ಆತ್ಮಕ್ಕೆ ಕ್ಷಣ ಕಾಲ ಮೌನವಾಗಿ ನಿಂತಳು ಅಚ್ಚಮ್ಮ. ಅಮ್ಮಾ! ಮೌನವೇಕೆ? ವೀರಪ್ಪಯ್ಯನೇ ಪ್ರಶ್ನಿಸಿದನು. ಅಯ್ಯಾ! ನಿನ್ನ ಮಾತುಗಳು ನನಗೆ ಬೇಕು, ಬೇಡಗಳೆರಡೂ ತಲ್ಲಣಗೊಳಿಸುತ್ತಿವೆ. ಏನೋ! ಎಲ್ಲವೂ ದೈವಿಚ್ಚೆಯಂತೆನಡೆಯುತ್ತಿದೆಯಲ್ಲವೇ? ಅಯ್ಯಾ! ನಿನ್ನಿಚ್ಚೆಯಂತೆಯೇ ಆಗಲಿ. ಹಸುಗಳನ್ನು ಕಾಡಿನೊಳಗೆ ಹೋಗಗೊಡದೆ ಜಾಗ್ರತೆ ವಹಿಸು. ದಟ್ಟವಾದ ಅಡವಿ, ಗುಡ್ಡಗಾಡುಗಳಲ್ಲಿ ಕ್ರೂರ ಮೃಗಗಳ ಕಾಟವಿದೆ. ಹೊರ ವಲಯದಲ್ಲೇ ಸುತ್ತಾಡಿಸಿಕೊಂಡಿರು. ಎಂದು ಹೇಳಿದ ಅಚ್ಚಮ್ಮ ಒಳಗೆ ಹೋಗಿ ಮಧ್ಯಾಹ್ನದ ಊಟಕ್ಕೆಂದು ರಾಗಿಮುದ್ದೆಯ ಬುತ್ತಿಯನ್ನು ತಂದುಕೊಟ್ಟಳು. ಬುತ್ತಿಯನ್ನು ತೆಗೆದು ಕೊಂಡ ವೀರಪ್ಪಯ್ಯ ಹಸುಗಳೊಂದಿಗೆ ಅಡವಿಗೆ ಹೋದ.