ಶ್ರೀ ಪೋತುಲೂರು ವೀರಬ್ರಹ್ಮೇಂದ್ರಸ್ವಾಮಿ ಸಂಕ್ಷಿಪ್ತ ಚರಿತ್ರೆ
ಮಗನಿಗೆ ವೀರಂಭಟ್ಟಯ್ಯ ಎಂದು ನಾಮಕರಣ ಮಾಡಿದ್ದರು. ಭಗವದಂ೦ಶದಿ೦ದ ಜನಿಸಿದ್ದ ವೀರಂಬಟ್ಟಯ್ಯಗೆ ಎಲ್ಲಾ ವಿದ್ಯೆಗಳು ಕರಗತವಾಗಿದ್ದವು. ಬ್ರಹ್ಮ ತೇಜಸ್ಸು, ಸೂರ್ಯಕಾಂತಿಯನ್ನೊಂದಿದ್ದ ವೀರಂಬಟ್ಟಯ್ಯಗೆ ಹನ್ನೆರಡನೆ ವಯಸ್ಸು ತುಂಬುತ್ತಾ ಬಂದಿತು. ಅಂತರ್ಮುಖನಾಗಿಯೇ ಹೆಚ್ಚುಕಾಲ ಕಳೆಯುತ್ತಿದ್ದ ವೀರಂಬಟ್ಟಯ್ಯ ಒಮ್ಮೆ ತಾಯಿಯನ್ನು ತನ್ನ ಬಳಿ ಕೂಡಿಸಿಕೊಂಡು ವಿನಯ ಪೂರ್ವಕವಾಗಿ "ಅಮ್ಮಾ! ನಾನು ಇನ್ನು ಲೋಕ ಸಂಚಾರವನ್ನು ಮಾಡಬೇಕಾಗಿದೆ ಆಶೀರ್ವಧಿಸಿ ಆಪ್ಟ್ಪಣೆಯನ್ನು ಕೊಡಮ್ಮ ಎ೦ದು ಬೇಡದನು. ವೀರಂಬಟ್ಟಯ್ಯನ ಮಾತನ್ನು ಕೇಳಿದ ವೀರಪಾಪಮಾಂಬಗೆ ಕ್ಷಣ ಕಾಲ ಮಾತುಗಳನಾಡಲಾಗಲಿಲ್ಲ. ಸ್ಥಬ್ಧವಾಗಿ ನಿ೦ತು ಚೇತರಿಸಿಕೊಂಡ ನ೦ತರ ಅತಿ ದುಃಖಿತಳಾಗಿ ಮಗನೇ! ವೀರಂಬಟ್ಟಯ್ಯಾ! ನಿನಗಾಗಿ ನಾನು ನೂರಾರು ಕನಸುಗಳನ್ನು ಕಾಣುತ್ತಿದ್ದೇನೆ, ನಾನು ಜೀವ೦ತವಾಗಿರುವುದಾದರೂ ನಿನ್ನ ಶ್ರೇಯಸ್ಸಿಗಾಗಿಯೇ! ನೀನೇ ಇಲ್ಲದ ಈ ಮಠ ನನಗೇಕೆ? ಪೀಠಾಧಿಪತ್ಯದ ಅಂಬಲವಾದರೂ ಏಕೆ? ಈ ಚಿಕ್ಕ ವಯಸ್ಸಿನಲ್ಲಿ ನಿನಗೆ ಲೋಕ ಸ೦ಚಾರದ ಮಾತೇಕೆ? ನಿನ್ನನ್ನು ಬಿಟ್ಟು ಈ .ಇಳಿವಸ್ಸಿನಲ್ಲಿ ನಾನು ಬದುಕಿರ ಬಲ್ಲನೇ? ಸ೦ಚಾರದ ವಿಷಯ ಈಗಲೆ ಬೇಡ ಮಗನೆ, ನೀನು ಈ ಮಠದ ಪೀಠಾಧಿಪತಿಯಾಗಿ ಸುಖ ಸ೦ತೋಷಗಳನ್ನು ಅನುಭವಿಸುತ್ತ ನನ್ನ ಕಣ್ಣೆದುರಿನಲ್ಲಿಯೇ ಇರು ಎಂದು ಬಹುವಾಗಿ ಪ್ರಲಾಪಿಸಿದರು. ವೀರಪಾಪಮಾಂಬ.
ದುಃಖ ತಪ್ಪಳಾಗಿರುವ ತಾಯಿಯನ್ನು ಸಂತೈಸುತ್ತ ಅಮ್ಮಾ! ನಾನು, ನನ್ನದು, ಮಗ, ಪೀಠಾಧಿಪತ್ಯ, ಸುಖ, ಸಂತೋಷಗಳೆ೦ಬ ಭ್ರಮಾ ಲೋಕಕ್ಕೆ ಸಾಮಾನ್ಯರಂತೆ ಮರುಳಾಗುವುದು ಸರಿಯೇ? ಕ್ಷಣೆಕದ ಭ್ರಮಾ ಲೋಕದಿಂದ ಒಮ್ಮೆ ಹೊರ ಬಂದು ನನ್ನನ್ನು ಕ್ಷಣಕಾಲ ನೋಡು ಎಂದು ಹೇಳಿದ ವೀರಂಬಟ್ಟಯ್ಯಾ ಮೌನವನ್ನು ತಾಳಿ ನಿಂತನು. ಚರಾಚರ ಸಮಸ್ತ ಭುವನ ಬ್ರಹ್ಮಾಂಡವೆಲ್ಲವನ್ನು ಮಗ ವಿರಂಭಟ್ಟಯ್ಯನಲ್ಲಿಯೇ ಹುಟ್ಟಿ ಅಳಿಯುವುದನ್ನು ಕಂಡ ವೀರಪಾಪವತಾಂಬ ಸ್ಥ೦ಬೀ ಜಭೂತಳಾಗಿ ಭಗವಾನ್ ಸೃಷ್ಟಿಕರ್ತನೊಬ್ಬನಲ್ಲದೆ ಉಳಿದೆಲ್ಲವೂ ತೃಣಮಾತ್ರವಲ್ಲದ ಶೂನ್ಯವೆಂದು ಭ್ರಮಾ ಲೋಕದಿಂದ ಮುಕ್ತಳಾಗಿ. ಭಕ್ತಿಯಿಂದ ಕೈಗಳನ್ನು ಜೋಡಿಸಿಕೊಂಡು ನಿಂತು, ವಿಶ್ವರೂಪಾ! ನಿನ್ನನ್ನು ಸಮಾನ್ಯನೆಂದು ತಿಳಿದ ನಾನೆಷ್ಟರವಳು. ಲೋಕೋದ್ದಾರಕನಾದ ನಿನಗೆ ನಾನು ಅಪ್ಪಣೆಯನ್ನು ಕೊಡುವುದೆ೦ದರೇನು? ಮಹಾ ಮಹಿಮಾ! ನಿನ್ನ ದರ್ಶನವನ್ನು ಪಡೆದ ನಾನೇ ಧನ್ಯಳು, ನನ್ನ ಜನ್ಮ ಪಾವನವಾಯಿತು, ವಿಶ್ವವ್ಯಾಪೀ! ನಿನ್ನಿಚ್ಚೆಯನ್ನು ತಡೆಯಲು ಸಾಧ್ಯವಾದೀತೆ ತಂದೆಯೆ! ನಿನಗೆ ನನ್ನ ಅನಂಶಾನಂತ ನಮನಗಳು ಎಂದು ತಲೆಬಾಗಿ ನಮಿಸಿದಳು. ತಾಯಿಯನ್ನು ಮತ್ತೊಮ್ಮೆ ಸಂತೈಸಿದ ವೀರಂಭಟ್ಟಯ್ಯ ತಾಯಿಗೆ ಅನೇಕ ವೇದಾ೦ತ ಪೂರ್ಣ ಅದ್ವೈತ ಬೋಧೆಯನ್ನು ವಿವರಿಸಿ ಮುಕ್ತಿ ಮಾರ್ಗವನ್ನು ತಿಳಿಸಿದನಂತರ ಅಮ್ಮಾ! ಹೋಗಲಫ್ಪಣೆಯೇ ಎಂದನು ವೀರಂಭಟ್ಟಯ್ಯ. ತಂದೆಯೇ ಎಂದು ಮತ್ತೊಮ್ಮೆ ನಮಿಸಿದಳು ವೀರಪಾಪಮಾಂಬ ಸಂಚಾರಾರ್ಥವಾಗಿ ಪಾಪಷ್ಟಿ ಮಠದಿಂದ ಹೊರಟು ಎಲ್ಲಾ ಪುಣ್ಯ ಕ್ಷೇತ್ರಗಳನ್ನು ದರ್ಶನ ಮಾಡಿ ಅಲ್ಲಲ್ಲಿನ ಅನೇಕರಿಗೆ ಅದ್ವೈತ ಜ್ಞಾನ ಬೋಧೆಯನ್ನು ಮಾಡುತ್ತ ಹರಿಹರ ಪುರಕ್ಕೆ ಬ೦ದು ಪ್ರಶಾ೦ತ ಸ್ಥಳವೊಂದರಲ್ಲಿ ಕುಳಿತು ತಪವನ್ನಾಚರಸುತ್ತಿದ್ದನು ವೀರಂಭಟ್ಟಯ್ಯ
ವಿಶ್ವ ವಿಖ್ಯಾಶಿಯನ್ನೊಂದಿರುವ ಕಾಶಿ ದೇಶದ ರಾಜಕುಮಾರನಾದ ಆನ೦ದ ಭೈರವ ವನ ವಿಹಾರಾರ್ಥವಾಗಿ ತಮ್ಮ ಗೆಳೆಯರೊಂದಿಗೆ ಬೇಟೆಯಾಡಲೆಂದು ಅಡವಿಗೆ ಹೋದನು ದಟ್ಟವಾಗಿ ಬೆಳೆದಿದ್ದ ಮರ ಗಿಡಗಳ ಮಧ್ಯೆ ತಂಪಾದ ಗಾಳಿಯನ್ನು ಸವಿಯುತ್ತ ವಿಹರಿಸುತ್ತಿರುವಾಗ ಹಸುವೊ೦ದು ಸಮೀಪದಲ್ಲಿದ್ದ ಕೊಳದಲ್ಲಿ ನೀರನ್ನು ಕುಡಿಯುತ್ತಿತ್ತು. ಅದೇ ಸಮಯದಲ್ಲಿ ತನ್ನ ಆಹಾರಕ್ಕಾಗಿ ಕಾದು ಕುಳಿತ ಹೆಬ್ಬುಲಿಯು ಇದ್ದಕ್ಕಿದ್ದಹಾಗೆ ಹಸುವನ್ನು ತಿನ್ನಲೆ೦ದು ಚಂಗನೆ ಹಾರುವುದನ್ನು ಕಂಡ ಆನ೦ದ ಭೈರವ ತಕ್ಷಣ ತನ್ನ ಕೈಲಿದ್ದ ಬಿಲ್ಲಿನಿಂದ ಹುಲಿಗೆ ಬಾಣ ಪ್ರಯೋಗವನ್ನು ಮಾಡಿದ. ಶರವೇಗದಲ್ಲಿ ಹೋದ ಬಾಣ ಹುಲಿಯ ಗುರಿತಪ್ಪಿ ಹಸುವಿನ ದೇಹವನ್ನು ಹೊಕ್ಕಿತು. ಬಾಣ ಪ್ರಯೋಗದ ಪೆಟ್ಟನ್ನು ತಾಳಲಾಗದ ಹಸು ಅಂಬಾ 'ಎ೦ದು ಅರಚಿ ಪ್ರಾಣವನ್ನು ಬಿಟ್ಟಿತು. ಹುಲಿಯು ಗಿಡ ಮರಗಳ ಮಧ್ಯೆ ಕಾಣದಾಯಿತು. ತನ್ನ ಬಾಣ ಪ್ರಯೋಗದಿಂದ ಹಸು ಅಂಬಾ ಎಂದು ಅರಚಿ. ಪ್ರಾಣ ಬಿಟ್ಟದ್ದನ್ನು ಕ೦ಡ ಆನಂದ ಬೈರವ ದಿಗ್ಜಾಂತನಾಗಿ ಹುಲಿಯನ್ನು ಕೊಲ್ಲಲು ಹೋಗಿ ಹಸುವನ್ನು ಕೊಂದು ಗೋ ಹತ್ಯ ಪಾಪದೋಷಕ್ಕೆ ಬಲಿಯಾದೆನಲ್ಲಾ! ಅಯ್ಯೋ ವಿಧಿಯೇ ಈ ಪಾಪ ದೋಷವನ್ನು ಹೇಗೆ ಬಗೆಹರಿಸಿಕೊಳ್ಳಲೀ ಇದಕ್ಕೆ ಮಾರ್ಗವನ್ನು ತೋರುವವರು ಯಾರು? ಎಂದು ಬಹು ವಿಧವಾಗಿ ದುಃಖಿಸುತ್ತ ಈಗಿ೦ದೀಗಲೇ ಪುಣ್ಯ ಕ್ಷೇತ್ರಗಳ ದರ್ಶನವನ್ನು ಮಾಡುವುದೇ ಸೂಕ್ತವೆಂದು ತಿಳಿದು ಕ್ಷೇತ್ರಾರ್ದಿಯಾಗಿ ಹೊರಟನು.
ಆನ೦ದ ಭೈರವ ಅನೇಕ ಪುಣ್ಯ ಕ್ಷೇತ್ರಗಳ ಪುಷ್ಥರಣಿಗಳಲ್ಲಿ ಮಿಂದು ದೇವದರ್ಶನವನ್ನು ಪಡೆದು ಸಾಧು ಸತ್ಪುರುಷರ ಸೇವೆಯನ್ನು ಮಾಡುತ್ತ ಅಲ್ಲಲ್ಲಿನ ಪ್ರಕೃತಿಯ ಸೊಬಗನ್ನು ನೋಡಿ ಆನಂದಿಸುತ್ತ ಪ್ರಯಾಣಿಸುತ್ತಿದ್ದನು. ಎಲ್ಲಿಯೂ ಗೋಹತ್ಯ ದೋಷ ಪರಿಹಾರವನ್ನು ಕಾಣದ ಆನಂದ ಭೈರವ ಹರಿಹರ ಪುರಕ್ಕೆ ಬ೦ದು ಅಲ್ಲಿನ ಅನೇಕ ದೇವಾಲಯಗಳ ಸೌಂದರ್ಯವನ್ನು ವೀಕ್ಷಿಸುತ್ತ ದೈವ ದರ್ಶನವನ್ನು ಪಡದು ವಿಶಾಂತಿಗಾಗಿ ಸ್ಥಳವನ್ನು ಹರಸುತ್ತ ವೀರಂಭಟ್ಲಯ್ಯ ಸೂರ್ಯೋ ಪಾಸಕರಾಗಿ ಕುಳಿತಿದ್ದ ಸ್ಥಳಕ್ಕೆ ಬಂದನು. ಅಲ್ಲಿಗೆ ಸ್ವಲ್ಪದೂರದಲ್ಲಿ ಸೂರ್ಯೋಪಾಸಕರಾಗಿ ಕುಳಿತಿದ್ದ ವೀರ೦ಬಟ್ಟಯ್ಯನ ಕಡೆ ತನ್ನ ಗಮನವರಿಯುತ್ತಲೆ ತನ್ನಲ್ಲಿನ ಮಾರ್ಗಾಯಾಸವೆಲ್ಲ ಕ್ಷಣಾರ್ಧದಲ್ಲಿ ಮಾಯವಾಯಿತು. ತನ್ನ ದೇಹವೆಲ್ಲ ಮಲ್ಲಿಗೆ ಹೂವಿನಷ್ಟು ಹಗುರವಾಯಿತು. ತನ್ನಲ್ಲಿ ಯಾವುದೋ ಒಂದು ಹೊಸ ಚೇತನ ಮೂಡಿ ಬ೦ತು. ಎಂದೂ ಎಲ್ಲಿಯೂ ಕಾಣದ ಅನುಭವವಾಯಿತು. ಆನ೦ದ ಭೈರವಗೆ ಆಶ್ಚರ್ಯದೊಂದಿಗೆ ಆತ್ಮಾನ೦ದವು ಉಮ್ಮಡಿಗೊಳ್ಳುತ್ತಿತ್ತು. ಅದರಲ್ಲಿಯೇ ಕೆಲವೊತ್ತು ಸಮಯವನ್ನು ಕಳೆದ ಆನ೦ದ ಭೈರವ. ಇದು ಯಾವ ದಿವ್ಯ ಪುರುಷರು ನೆಲೆಸಿದ ಪುಣ್ಯ ಭೂಮಿಯೋ ಎಂದು ಯೋಚಿಸಿದ. ನಂತರ ಸೂರ್ಯೋಪಾಸಕರಾಗಿ ಕುಳಿತಿದ್ದ ವೀರಂಬಟ್ಟಯ್ಯನ ಕಡೆ ಮತ್ತೆ ಗಮನ ಹರಿಸಿದ. ಅವರನ್ನು ಸಮೀಪದಲ್ಲಿ ಓಡುವ ಹ೦ಬಲವುಂಟಾಯಿತು. ವೀರಂಭಟ್ಟಯ್ಯ ಕುಳಿತಿದ್ದ ಬಲ ಭಾಗದ ಸ್ವಲ್ಪ ದೂರದಲ್ಲಿಯೇ ನಿಂತು ವೀಕ್ಷಿಸಿದ. ವೀರ೦ಭಟ್ಟಯ್ಯನ ದರ್ಶನದಿಂದ ಎಂದೂ ಕಂಡರಿಯದ ಪ್ರಕಾಶವೊ೦ದು ಪ್ರಜ್ವಲಿಸಿದಂತಯಿತು. ತನಗಾದ ಅನುಭವದಲ್ಲಿ ಇವರೇ ನನ್ನ ಗೋ ಹತ್ಯ ದೋಷವನ್ನು ಪರಿಹಾರ ಮಾಡುವ ದಿವ್ಯ ಪುರುಷರು ಎಂದು ತನ್ನ ಮನಸ್ಸು ಹೇಳುತ್ತಿತ್ತು. ಹಾಗಾಗಿ ಈ ಮಹಾಮಹಿಮರು ಬಹಿರ್ಮುಖರಾಗುವವರೆಗೂ ಕಾದು ಕುಳಿತು ಕೊಳ್ಳುವುದೇ ಸರಿಯೆಂದು ಸ್ವಲ್ಪ ದೂರದಲ್ಲಿಯೇ ಕುಳಿತು ಬಿಟ್ಟನು ಆನ೦ದ ಭೈರವ.