ಶ್ರೀ ಪೋತುಲೂರು ವೀರಬ್ರಹ್ಮೇಂದ್ರಸ್ವಾಮಿ ಸಂಕ್ಷಿಪ್ತ ಚರಿತ್ರೆ


  • ಶ್ರೀ ಪೋತುಲೂರು ವೀರಬ್ರಹ್ಮೇಂದ್ರಸ್ವಾಮಿ


    ಬ್ರಹ್ಮಾಂಡ ಪುರ ವಾಸಿಗಳಾದ ಪ್ರಕೃತಾ೦ಬ, ಪರಿಪೂರ್ಣಯಾಚಾರ್ಯ ದಂಪತಿಗಳಿಗೆ ಪುತ್ರ ಸ೦ತಾನವಿಲ್ಲದ ಕಾರಣ ಪುಣ್ಯಕ್ಷೇತ್ರ ದರ್ಶನಾರ್ಥವಾಗಿ ಕಾಶಿ ಕ್ಷೇತ್ರವನ್ನು ಸೇರಿದರು. ಆ ಕ್ಷೇತ್ರದ ವೈಭವಗಳನ್ನು ವೀಕ್ಷಿಸಿ ಅನಂದಿಸುತ್ತ ಕಾಶಿಕ್ಷೇತ್ರದ ದೇವ ದೇವನಾದ ಶ್ರೀ ವಿಶ್ವನಾಥಸ್ವಾಮಿಯನ್ನು ಹಾಗೂ ವಿಶಾಲಾಕ್ಷಿದೇವಿ ಅಮ್ಮನವರನ್ನು ದರ್ಶನ ಮಾಡಿ ಮನಸಾರ ಪೂಜಿಸಿ ಸ್ವಾಮಿ ವಿಶ್ವದೊಡೆಯಾ! ತಂದೆ ವಿಶ್ವನಾಥ ನಮಗೆ ಪುತ್ರ ಸ೦ತಾನವನ್ನು ಕರುಣಿಸಿ ಕೃತಾರ್ಥರನ್ನಾಗಿ ಮಾಡು. ದಯಾಮಯಾ! ಎ೦ದು ನಿತ್ಯವೂ ಬೇಡಿಕೊಳ್ಳುತ್ತಿದ್ದರು, ಹೀಗೆಯೇ ದಿನಗಳನ್ನು ಕಳೆಯುತ್ತ ಆ ಕ್ಷೇತ್ರದಲ್ಲಿನ ಸಾಧು ಸತ್ಪುರುಷರ ಸೇವೆಯನ್ನು ಮಾಡಿ ಅವರ ಆಶೀರ್ವಾದವನ್ನು ಪಡೆಯುತ್ತಿದ್ದರು.

    ಪ್ರತಿ ನಿತ್ಯದಲ್ಲಿ ಸಂಧ್ಯಾಕಾಲಕ್ಕೆ ಪುಣ್ಯ ಗಂಗಾನದಿಯಲ್ಲಿ ಮಿಂದು ಸಂಧ್ಯಾರ್ಚನೆಯನ್ನು ಮುಗಿಸಿ ಶ್ರೀ ವಿಶ್ವನಾಥಸ್ವಾಮಿ ಆಗೂ ವಿಶಾಲಾಕ್ಷಿದೇವಿ ಅಮ್ಮನವರನ್ನು ಪೂಜಿಸುತ್ತಿದ್ದರು. ಹೀಗಿರುವಾಗ ಶುಭ ದಿನವೊ೦ದರ ರಾತ್ರಿ ಶ್ರೀ ವಿಶ್ವನಾಥ ಸ್ವಾಮಿಯು ಪ್ರಕೃತಾಂಭ ಸ್ವಪ್ನದಲ್ಲಿ ದರ್ಶನವಿತ್ತು ಅಮ್ಮಾ! ಪ್ರಕೃತಾಂಬ. ಲೋಕ ಕಲ್ಯಾಣಾರ್ಥವಾಗಿ ನಿಮಗೆ ತ್ರಿಮೂರ್ತಿಗಳ ಅಂಶವುಳ್ಳ ತ್ರಿಕಾಲಜ್ಜಾನ ಸುಪುತ್ರನೇ ಜನಿಸುವನು. ಅವನಿಂದ ಲೋಕ ಕಲ್ಯಾಣವಾಗವುದೇ ಅಲ್ಲದೆ ಅವನನ್ನು ಪಡೆದ ನಿಮ್ಮ ಕೀರ್ತಿಯು ಆಚಂದ್ರಾರ್ಕವಾಗಿ ಉಳಿಯುವುದು. ನಿಮಗಿನ್ನು ಚಿಂತೆ ಬೇಡ ಎಂದು ಹೇಳಿ ಅಂತರ್ಧಾನವಾದನು.

    ಅಂದೇ ಅದೇ ಸಮಯದಲ್ಲಿ ಪರಿಪೂರ್ಣಯಾಚಾರ್ಯರ ಸ್ವಪ್ನದಲ್ಲಿಯೂ ದರ್ಶನವಿತ್ತುದರಿ೦ದ ಎಚ್ಚೆತ್ತ ಪರಿಪೂರ್ಣಯಾಚಾರ್ಯರು ಧರ್ಮಪತ್ನಿ ಪ್ರಕೃತಾಂಬಗೆ ಹೇಳಬೇಕೆನ್ನುವಷ್ಟರಲ್ಲಿ ಪಕ್ಕತಾಂಬ ಮಹಾದಾನಂದ ಪೂರಿತರಾಗಿ ತನ್ನ ಸ್ವಪ್ನದಲ್ಲಿ ನಡೆದ ವೃತ್ತಾಂತವನ್ನು ಹೇಳಲು ದಂಪತಿಗಳಿಗೆ ಏಕ ಕಾಲದಲ್ಲಿ ಒಂದೇ ವಿಧದಲ್ಲಿ ಕಾಣಿಸಿಕೊಂಡು ಆಶೀರ್ವಾಧಿಸಿದ ಶ್ರೀ ವಿಶ್ವನಾಥಸ್ವಾಮಿಯನ್ನು ಮನಸಾರೆ ನೆನೆಯುತ್ತ ಆನಂದಿಸಿದರು.

    ಅಂದಿನಿಂದ ದಂಪತಿಗಳು ನಿತ್ಯವೂ ಶ್ರೀಸ್ಟಾಮಿಯ ದರ್ಶನವನ್ನು ಪಡೆದು ಸೇವೆ ಸಲ್ಲಿಸುತ್ತ ಇರಲು. ಕೆಲ ದಿನಗಳ ನ೦ತರ ಪ್ರಕೃತಾಂಬಗೆ ಗರ್ಭ ಚಿಹ್ನೆಯು ಕಂಡು ಬ೦ದು ದಂಪತಿಗಳು ಮಹಾ ಹರ್ಷಿತರಾದರು. ಮಾಸಗಳು ಉರುಳಿ ನವಮಾಸವು ಕಳೆದದ್ದರಿಂದ ತಮ್ಮ ಪುರಕ್ಕೆ ಹಿಂದಿರುಗಲು ನಿರ್ಧರಿಸಿ ಪ್ರಯಾಣವನ್ನು ಕೈಗೊಂಡರು.

    ಪ್ರಯಾಣದ ಮಾರ್ಗ ಮಧ್ಯದಲ್ಲಿ ಸರಸ್ವತಿ ನದಿ ತೀರವನ್ನು ಸಮೀಪಿಸುವಷ್ಟರಲ್ಲಿ ಪ್ರಕೃತಾಂಭಗೆ ಪ್ರಸವದ ನೋವುಗಳು ಕಾಣಿಸಿಕೊಳ್ಳತೊಡಗಿದವು. ನದಿ ತೀರದ ವೃಕ್ಷವೊ೦ಂದರ ಬದಿಯಲ್ಲಿ ಬೀಡು ಬಿಟ್ಟರು.

    ಆ ಸಮಯ ಸಂಧ್ಯಾಕಾಲವಾದುದರಿಂದ ನಿತ್ಯ ಪ್ರಾರ್ಥನೆಯಂತೆ ಶ್ರೀ ವಿಶ್ವಕರ್ಮ ಭಗವಾನನನ್ನು ಸ್ಮರಿಸುತ್ತ ಪರಿಪೂರ್ಣಯಾಚಾರ್ಯರು ನದಿ ಸ್ನಾನಕ್ಕೆ ಇಳಿದರು. ಸೂರ್ಯ ನಮಸ್ಕಾರವನ್ನು ಮಾಡುವ ಸಮಯಕ್ಕೆ ಸರಿಯಾಗಿ ಪ್ರಕೃತಾಂಬ ಗ೦ಡು ಮಗುವಿಗೆ ಜನ್ಮವಿತ್ತಳು. ಮಗು ಅಳುವ ಧ್ವನಿ ಪರಿಪೂರ್ಣಯಾಚಾರ್ಯರ ಕರ್ಣ ಕುಂಡಲಕ್ಕೆ ತಲುಪಿದಾಕ್ಷಣವೇ ಆಚಾರ್ಯರ ಪ್ರಾಣ ಪಕ್ಷಿ ದೇಹವನ್ನು ತ್ಯಜಿಸಿ ಶ್ರೀ ಭಗವಾನ್ ವಿಶ್ವಕರ್ಮನಲ್ಲಿ ಲೀನವಾಯಿತು. ಅದನ್ನರಿತ ಪ್ರಕೃತಾಂಬ ಪತಿದೇವರ ಅಗಲಿಕೆಯನ್ನು ತಾಳಲಾರದೆ ಪತಿ ಇದ್ದ ಸ್ಥಳಕ್ಕೆ ದಾವಿಸಿ ಬಂದು ತಾನೂ ಪ್ರಾಣತ್ಕ್ಯ! ಮಾಡಿದಳು.

    ಅಲಿಗೆ ಸ್ವಲ್ಪ ಸಮೀಪದಲ್ಲಿ ಆಶ್ರಮವಿದ್ದು ಅತ್ರಿ ಮಹರ್ಷಿಗಳು ಸ೦ಧ್ಯಾಕಾಲದ ಸ್ನಾನಕ್ಕಾಗಿ ನದಿ ತೀರಕ್ಕೆ ಬರುತ್ತಲೆ ಒ೦ಟಿಯಾಗಿ ಅಳುತ್ತಿರುವ ಮಗುವಿನ ದ್ವನಿ ಕೇಳಿಬ೦ತು. ಧ್ವನಿ ಬ೦ದತ್ತ ಸಾಗುತ್ತಲೆ ಆಗತಾನೆ ಜನಿಸಿದ ಮಗುವು ಕಾಣಿಸಿತು. ಸುತ್ತಲೂ ಗಮನ ಹರಿಸಿದರು. ಮಗುವೊಂದುಳಿದು ಮತ್ತೆ ಯಾರೂ ಕಾಣಿಸಲಿಲ್ಲ. ಕ್ಷಣ ಕಾಲ ಯೋಚಸಿದ ಆತ್ರಿ ಮಹರ್ಷಿಗಳು ಎಲ್ಲವೂ ದೈವ ಸ೦ಕಲ್ಪವೆಂದು ಭಾವಿಸಿ ಮಗುವನ್ನು ಆಶ್ರಮಕ್ಕೆ ತ೦ದು ಶಿಷ್ಯರ ಜವಾಬ್ದಾರಿಯಲ್ಲಿರಿಸಿ ತಮ್ಮ ನಿತ್ಕಾರ್ಚನೆಗಳನ್ನು ಮುಗಿಸಿಕೊ೦ಡು ಬಂದರು. ನಂತರ ಮಗುವಿನ ಚಲುವಿಕೆಯನ್ನು ಗಮನಿಸುತ್ತ ಇದು ಎಲ್ಲರಂತೆ ಸಾಮಾನ್ಯ ಮಗುವಲ್ಲ ಲೋಕ ಕಲ್ಯಾಣಾರ್ಥವಾಗಿಯೇ ಆ ಭಗವಂತನೇ ಈ ಭುವಿಗಿಳಿದು ಬಂದಿದ್ದಾನೆ. ಅರ್ಕ ತೇಜಸ್ಸನ್ನು ಮೀರಿಸುವ ಈ ಮಗುವಿನ ಮುಖಾರವಿಂದವನ್ನು ನೋಡುತ್ತಿದ್ದರೆ ತ್ರಿಕಾಲಜ್ಞಾನಿಯೇ ಎಂದು ಹೇಳಲು ಸಂದೇಹವೇ ಇಲ್ಲ ಎಂದು ಭಾವಿಸಿದ ಅತ್ರಿ ಮಹರ್ಷಿಗಳು ಮಗುವಿನಲ್ಲಿ ಹೆಚ್ಚಿನ ಗಮನ ಹರಿಸಿ ಗೋ ಕ್ಷೀರವನ್ನೇ ಉಣಬಡಿಸುತ್ತ ಪೋಷಿಸತೊಡಗಿದರು. ಆ ಮಗುವಾದರೋ ಸದಾ ಹಸನ್ಮುಖಿಯಾಗಿ ಎಲ್ಲರ ಮುದ್ದಿನ ಮಗುವಾಗಿ ಬೆಳೆಯುತ್ತಿತ್ತು ಆಶ್ರಮದಲ್ಲಿ.

    ಪಾಪಾಫ್ಟಿ ಮಠ

    ಜಗತ್ತಿನಲ್ಲಿಯೇ ಪವಿತ್ರವೆನಿಸಿದ ಭಾರತ ದೇಶದಲ್ಲಿನ ಕರ್ನಾಟಕ ರಾಜ್ಯ ಕೋಲಾರ ಜಿಲ್ಲೆ, ಚಿಕ್ಕಬಳ್ಳಾಪುರ ತಾಲ್ಲೂಕಿನ ಕಳವರ ಗ್ರಾಮದ ಹತ್ತಿರವಿರುವ ಪಂಚ ನ೦ದಿ ಬೆಟ್ಟದ ಬದಿಯಲ್ಲಿ ಶ್ರೀಮದ್ವಿರಾಟ್ ವಿಶ್ವಕರ್ಮ ವಂಶಕ್ಕೆ ಸ೦ಬಂಧಿಸಿದ ಪಾಪಫ್ಟಿಮಠವೆಂದು ಖ್ಯಾತಿಯಲ್ಲಿ ಇದ್ದು ಅದು ಮಠಕ್ಕೆ ಬರುವ ಭಕ್ತಾದಿಗಳ ಸ೦ಕಷ್ಟಗಳನ್ನು ನಿವಾರಣೆ ಮಾಡುವ ಪುಣ್ಯಕ್ಷೇತ್ರವೆನಿಸಿ ಇದರ ಸಮೀಪದಲ್ಲಿಯೇ ಪಂಚ ನದಿಗಳ ಸಂಗಮವಾಗುವ ಪುಷ್ಕರಣಿಯಿದ್ದು ಅದು ತೀರ್ಥ ಕ್ಷೇತ್ರವೆನಿಸಿದೆ.

    ಪಾಪಘ್ಟಿ ಮಠದ ಪೀಠಾಧಿಪತಿ ಶ್ರೀ ವೀರಭೋಜಯಾಚಾರ್ಯರು. ಅವರ ಧರ್ಮ ಪತ್ನಿ ವೀರ ಪಾಪಮಾಂಬ. ಈ ದಂಪತಿಗಳಿಗೆ ಮಧ್ಯ ವಯಸ್ಸು ಕಳೆಯುತ್ತ ಬಂದರೂ ಪುತ್ರ ಸಂತಾನ ಭಾಗ್ಯ ಫಲಿಸಿರಲಿಲ್ಲ. ದಂಪತಿಗಳಿಗೆ ಅದೇ ಚಿಂತೆಯಾಗಿತ್ತು. ನಮ್ಮ ನ೦ತರ ಈ ಮಠಕ್ಕೆ ಉತ್ತರಾಧಿಕಾರಿಗಳು ಇಲ್ಲದಾಯಿತೇ ಎ೦ಬ ಕೊರಗು ಬಹುವಾಗಿ ಬಾಧಿಸುತ್ತಿತ್ತು.

    ಮಠಕ್ಕೆ ಬರುವ ಭಕ್ತಾದಿಗಳನ್ನು ಪ್ರೀತಿ ಆಧರಗಳಿಂದ ಸಂತೈಸುತ್ತಿದ್ದರು. ಸಾಧು ಸಂತರಿಗೆ ಗೌರವಾಧರಗಳನ್ನು ತೋರುತ್ತಿದ್ದರು. ಸ೦ತಾನ ಭಾಗ್ಯಕ್ಕಾಗಿ ವ್ರತಾಚರಣೆಗಳನ್ನು ನೇಮ ನಿಷ್ಠೆಯಿಂದ ಮಾಡುತ್ತಿದ್ದರು. ಆದರೆ ಸಂತಾನದ ಚಿ೦ತೆ ಮಾತ್ರ ಬಾಧಿಸುತ್ತಲೇ ಇತ್ತು.