
ಶ್ರೀ ಪೋತುಲೂರು ವೀರಬ್ರಹ್ಮೇಂದ್ರಸ್ವಾಮಿ ಸಂಕ್ಷಿಪ್ತ ಚರಿತ್ರೆ
-
ಸಿದ್ದಯ್ಯನ ದುಃಖ ಹೇಳ ತೀರದಾಯಿತು. ಗುರುವೇ ಎಂದು ಬಿದ್ದು ಬಿಗು ಅತ್ತ. ಕೈಗಳಲ್ಲಿ ಪುಷ್ಪಗಳು ಚೆಲ್ಲಾಡಿದವು. ಆತುರನಾಗಿ ಬಾಚಿ ಜೋಳಿಗೆಗೆ ಸಾಕಿ ಕೊಂಡ ಸಿದ್ಧಯ್ಯ ಎದ್ದು ಬಿದ್ದೇನೆ೦ಬ ಅರಿವಿಲ್ಲದೆ ಓಡೋಡಿ ಬಂದ. ಗುರುಗಳ ಸಮಾಧಿಯನ್ನು ಕಂಡು ಗುರುಟಿದಾ ಎಂದು ಪ್ರಜ್ಞಾ ಹೀನನಾಗಿ ಬಿದ್ದು ಬಿಟ್ಟ. ಎಚ್ಚೆತ್ತವನೆ ಸಮಾಧಿಗೆ ತಲೆಯನ್ನು ಚಚ್ಚಿಕೊಳ್ಳುತ್ತ ಗೊಳೋ ಎಂದು ಆಳುತ್ತ ಕಣ್ಣೀರನ್ನು ಸುರಿಸಿದ ಆ ಸಮಯಕ್ಕೆ ಗೋವಿ೦ದಮಾಂಬರು ಅಲ್ಲಿಗೆ ಬಂದರು. ಅಮ್ಮನವರ ಪಾದಗಳನ್ನಿಡಿದು ಕಣ್ಣೀರಧಾರೆಯನ್ನೇ ಹರಿಸಿದ ಸಿದ್ಧಯ್ಯನ ಪಲಾಪವನ್ನ ಕಂಡು ಸಮಾದಾನನಾಗು ಸಿ 'ವರು. ಅಂ ನ್ನ ನ ಸಿದ್ಧಾ ಎಂದರು ಅಮ್ಮನವರು. ಅಮ್ಮಾ! ನನ್ನ ಜ್ಞಾನದೇವರು ಇಲ್ಲದ ಸಮಾಧಾನ ಇನ್ನೆಲ್ಲಿಯದು? ಈ ಸಿದನಿದೂ ಪ್ರಯೋಜನವೇನು. ಅಮ್ಮಾ! ಗುರುಗಳಿಲ್ಲದ ಈಜೀವ ವ್ಯರ್ಥ. ನನ್ನ ಗುರುದೆವರನ್ನಾಗಲಿ ನಾನು ಜೀವಿಸಲಾರೆ ಎಂದು ಸಮಾಧಿಗೆ ತಲೆಯನ್ನು, ಚಚ್ಚಿಕೊಳ್ಳಲೋಗುವ ಸಿದ್ದನನ್ನು ತಡೆದ ಗೋವಿಂದಮಾಂಬರು. ಆತ್ಮ ಹತ್ಯ ಮಹಾಪಾಪವಲ್ಲವೆ? ನೀನು ಹೀಗೆ ಮಾಡುವುದರಿಂದ ನಿನ ಗುರುಗಳಿಗೆ ಆತ್ಮ ಶಾಂತಿಯಾಗುವುದೆ? ವಿಧಿಯ ಸಂಕಲ್ಪಕ್ಕೆ ಎದುರಾದವರು ಯಾರಾದರು ಇರುವರೆ? ಎಲ್ಲವೂ ದೈವ ಸ೦ಕಲ್ಪದಂತೆಯೇ ಸಡಯತ್ತದೆಯಲ್ಟದ ನಾವು ಮಾಡುವುದು ಏನೊಂದೂ ಇಲವಲ ಸಮಾಧಾನನಾಗು ಸಿದ್ಧಾ. ನಾವೆಲ್ಲರೂ ಸಮಾಧಾನವಾಗಿಲ್ಲವೆ? ಎಂದು ಹೇಳಿದರೂ ಮತ್ತೆ ದುಃಖಿತನಾದ ಸಿದ್ಧಯ್ಯ ತಲೆಯನ್ನು ಚಚ್ಚಿಕೊಳ್ಳ ಪ್ರಯತ್ನಿಸುತ್ತಿದ್ದಂತೆ ಸ ದ್ದ! ಗ. ಪಯತ್ನಿಸುತ್ತಿದ್ದಂತೆ ಸಮಾಧಿಯಿ೦ದ ಸಿದ್ದಾ! ಎ೦ಬ ಶಬ್ದ ಕೇಳಿ ಬಂತು ಸ ಸಮಾಥಾನಗೊಂಡ ಸಿದ್ಧಯ್ಯ ಮತ್ತೆ ಮನಗೊಟ್ಟು ಆಲಿಸಿದ. ಮತ್ತೆ ಹ ಸಿದ್ದಾ! ಎಂದು ಕೇಳಿಸಿತು. ಗುರುವೇ ಅನ್ನುವಷ್ಟರಲ್ಲಿ ಸಮಾಧಿಯಮೇಲೆ ಕುಳಿತಿದ್ದರು ಶ್ರೀ ಗುರು ವೀರಬ್ರಹ್ಮೇಂದ್ರಸ್ವಾಮಿಯವರು. ಗುರುದೇವಾ! ಎಂದು ಪಾದಗಳನ್ನು ಬಿಗಿದಪ್ಪಿದ ಅವನ ಸ೦ತೋಷಕ್ತೆ ಪಾರವಿಲ್ಲದಾಯಿತು. ಶ್ರೀ ಸ್ವಾಮಿಯವರು ತಮ್ಮ ಅಭಯ ಹಸ್ತವನ್ನು ಸಿದ್ದಯ್ಯನ ಶಿರದಮೇಲೆ ಐರಿಸುತ್ತಲೆ ಸಿದ್ಧಯ್ಯನ ಉಭಯ ಸಂಕಟಗಳಲ್ಲವೂ ಮಾಯವಾಗಿ ಮನ, ಮೈ ಎರಡು ಹೂವಿನಷ್ಟು ಹಗುರವಾದವು. ಗುರುತ೦ದೆಯೇ! ನಿಮ್ಮನ್ನಗಲಿ ನಾನು ಜೀವಿಸಲಾರೆ ನಿಮ್ಮಲ್ಲಿಯೇ ನನ್ನನ್ನು ಸೇರಿಕೊಳ್ಳಿ ಎಂದು ಬೇಡಿದನು'
ಶ್ರೀ ಸ್ವಾಮಿಯವರು ಸಿದ್ದಯ್ಯನನ್ನು ಸಮಾಧಾನ ಪಡಸುತ್ಕಾ ಸಿದ್ದಾ! ಆ ಕ ದ. ನಿನ್ನ ಮನೋಬಿಷ್ಠವನ್ನು ನಾನು ಬಲ್ಲೆನಲ್ಲ ಹನ್ಗೆರಡು ನಷಗಳು ನನ್ನ ಸೀವಾ ವೃತ್ತಿಯಲ್ಲಿದ್ದು ಪಣ ಶಸ್ಕ್ಥಿಗಳೆ ಪ್ರಯತ್ನಿಸುತ್ತಿರುವೆಯಾ? ಇದುವರೆಗೂ ಅರಿತುದಾದರೂ ಏನು ಹುಟು ಸಾವುಗಳಿಗೆ ಯಾರೂ ಕಾರಣರಲ್ಲ. ಎಲ್ಲವೂ ಸೃಷ್ಟಿ ಕರ್ತನಾದ ಭಗವಾನ್ ಪರಬ್ರಹ್ಮವಿನ ಸ೦ಕಲ್ಪವು. ದೇವತೆಗಳಾದಿಯಾಗಿ ಭುವಿಗೆ ಬಂದ ಜೀವ ರಾಶಿಗಳೆಲ್ಲವೂ ಅವನ ಸೂತ್ರದ ಬೊಂಬೆಗಳು. ಅವನಾಡಿಸಿದಂತೆ ಆಡಲೇಬೇಕು . ಸಿದ್ಧ! ನೀನಿನ್ನು ಈ ಬಾಹ್ಯ ಪ್ರಪಂಚದಲ್ಲಿದ್ದೂ ಇಲ್ಲದವನಾಗಿ ಇಹಪರ ಸುಖವನ್ನು ಅನುಭವಿಸಬೇಕಾಗಿದೆ. ಯೋಗಗಳಲ್ಲಿ ರಾಜಯೋಗಷೇ ಶ್ರೇಷ್ಠ. ನೀನು ಸಯಾರಿಯಾಗಿ ನಿಮ್ಮ ತಾಯಿ ತಂದೆ ಹೆಂಡತಿ ಮಕ್ಕಳೆಲ್ಲರನ್ನು ಸಂತುಷ್ಟ ಪಡಿಸುತ್ತ ಸಂಸಾರಿಯೋಗಿಯಾಗಿ ನನ್ನಂತೆ ನಿನ್ನಲ್ಲಿಗೆ ಬರುವ ಭಕ್ತರ ಸ೦ಕಷ್ಟಗಳನ್ನೆ ಪರಿಹರಿಸು. ನಿನ್ನ ಕೀರ್ತಿಯನ್ನು ಬೆಳಗುವ ಸುಪುತ್ರರು ಜನಿಸುತ್ತಾರೆ. ಕೊನೆಗೆ ನನ್ನಂತೆಯೇ ಸಮಾಧಿ ನಿಷ್ಠೆಯನ್ನು ವಹಿಸು. ನಿನ್ನಂತೆಯೇ ನಿನ್ನ ಹಿರಿಯ ಸುಪುತ್ರ ಪೆದ್ದ ಪೀರಯ್ಯನೆಂಬ ಹೆಸರಿನಲ್ಲಿ ಸಮಾಧಿನಿಷ್ಠನಾಗುತ್ತಾನೆ. ನಿಮ್ಮ ಕೀರ್ತಿ ಲೋಕ ಪ್ರ ಪ್ರಸಿದ್ಧವಾಗುತ್ತದೆ. ಎ೦ದು ಹೇಳಿದ ಶ್ರೀ ಸ್ವಾಮಿಯವರು ಸಿದ್ದಾ! ಈಗ ಸ್ಥಿತ ಪ್ರಜ್ಞನಾಗಿ ನನ್ನನ್ನೇ ನೋಡುತ್ತಿರು ಎ೦ದು ಹೇಳಿ ತಮ್ಮ ಹಸ್ತದ ಹೆಬ್ಬಿಟ್ಟಿನಿಂದ ಭ್ರೂಮಧ್ಯದ ಸ್ಥಾನವನ್ನು ಒತ್ತಿದರು.
ಸಿದ್ಧಯ್ಯನಿಗೆ ಬಾಹ್ಯಾಪಪಂಚದ ಅರಿವೆ ಇಲ್ಲವಾಯಿತು. ಶ್ರೀವೀರಬ್ರಹ್ಮೇಂದಸ್ವಾಮಿಯವರು ವಿಶ್ವವ್ಯಾಪಿಯಾಗಿ ಜೀವ ರಾಶಿಗಳಾದಿಯಾಗಿ ಕಾಡು ಮೇಡುಗಳು, ನದಿ ನಗ೦ಗಳು, ಬೆಟ್ಟ ಗುಡ್ಡಗಳು ಏನೆಲ್ಲವೂ ಕ್ಷಣಿಕವಾಗಿ ಹುಟ್ಟಿ ಆಳಿಯುತ್ತಿದ್ದವು. ಸೂರ್ಯ ಚಂದ್ರಾದಿ ತಾರೆಗಳು ಮಿಣುಕು ಉಳುವನಂತೆ ಮಿನುಗುತ್ತಿದ್ದವು. ತನ್ನ ಗುರುವಿನಲ್ಲಿಯೇ ವಿಶ್ವರೂಪವನ್ನು ನೋಡಿದ ಸಿದ್ಧಯ್ಯನಿಗೆ ಒಮ್ಮೆ ಏನೆಂದೂ ಇಲ್ಲವಾಗಿ ಒಮ್ಮೆ ಏನೆಲ್ಲವೂ ಇರುವುದಾಗಿ ಗೋಚರಿಸುತ್ತಿತ್ತು. ಹೆಚ್ಚುಕಾಲ ನೋಡಲಾಗದ ಸಿದ್ಧಯ್ಯ ತ೦ದೆಯೇ ನಿಮ್ಮ ವಿಶ್ವರೂಪವನ್ನು ನೋಡಲಾರೆ. ಮೊದಲಿನಂತೆಯೇ ದರ್ಶನವನ್ನಿತ್ತು ಹರಿಸಿ ಆಶೀರ್ವಧಿಸು ತಂದೆಯೇ ಎಂದು ಬೇಡಿದನು. ಶ್ರೀ ವೀರಬಹ್ಮೇ೦ದ್ರ ಸ್ವಾಮಿಯವರು ನಸುನಗುತ್ತ ಸಿದ್ದಾ! ನಿನ್ನ ಈ ಜನ್ಮ ಪವಿತ್ರ, ಎಂದು ಆಶೀರ್ವಧಿಸಿದರು. ಬಾಹ್ಯಾ ಪ್ರಪಂಚದ ಆಡ೦ಬರದ ಜೀವನವನ್ನು ಮಾಡುವವರಿಗೂ, ಗುರುವಿನ ಅರಿವಿಲ್ಲದವರಿಗೂ ಏನೊಂದೂ ಅರಿವಾಗದು. ಸಿದ್ದಾ! ಇದೋ ಈ ಯೋಗ ದಂಡ, ಬೆತ್ತ, ಮುದಿಕೆ, ಪಾದುಕೆಗಳು ನಿನ್ನ ಸೇವೆಯ ಪ್ರತಿಫಲ. ಇವುಗಳನ್ನು ಸದಾ ಪೂಜಿಸುತ್ತ ನನ್ನ ಸ್ಮರಣೆಯಲ್ಲಿ ಸ್ಟಿರಚಿತ್ರನಾಗ ಗಿರು. ಒಮ್ಮ ತಾಯಿ ತಂದೆಯ ೪ 2ಜ್ಲೆಯಂಕ ನಡದು ನಿನ್ನ ಕರ್ತವ್ಯ ನಿಷ್ಠತೆಯಲ್ಲಿ ಮಗ್ನನಾಗು. ಎಂದು ಮತ್ತೊಮ್ಮೆ ಹರಿಸಿ ಸಮಾಧಿ ನಿಷ್ಠರಾದರು. ಸಿದ್ದಯ್ಯ ಭಕ್ತಿಯಿಂದ ಗುರು ಸ್ಮರಣೆ ಹ ಸಮಾಧಿಯನ್ನು ಪ್ರದಕ್ಷಣೆ ಮಾಡಿ ಸ್ವಾಮಿಯವರು ಕೊಟ್ಟ ಸ್ಥಿರ ತ್ತುಗಳನ್ನು ತೆಗೆದುಕೊ೦ಡು ಗೋವಿಂದಮಾಂಬರ ಪಾದ ಕಮಲ ದಲ್ಲಿ ಕತಮ್ನಟ್ಟು ಸಾಷ್ಟಾಂಗ ನಮಸ್ಥಾರಗಳನ್ನು ಸಲ್ಲಿಸಿ. ಗೋವಿಂದಯ್ಯಾ ಚಾಯ: ಸ್ವಾಮಿಯವರಾದಿಯಾಗಿ ಎಲ್ಲರ ಅಪ್ಪಣೆಯನ್ನು ಪಡೆದು ಜೈ! ಸದುರು ಶ್ರೀ ವೀರಬ್ರಹೆ ಸಂದ್ರ ಸ್ವಾಮಿ ಜೈ! ಗೋವಿಂದಮಾಂಬಾ ಜೈ! ಎಂದು ಜಯಕಾರವನ್ನು. ಮಾಡಿ ಗುರುಸ `ರಣೆಯನ್ನು ಮಾಡುತ್ತ ಮಡುಮಾಲಗ್ರಾಮಕ್ಕೆ ಬಂದನು. ಶ್ರೀ ಗುರುವಿನಾಜ್ಞೆಯಂತೆ ತಾಯಿ ತಂದೆಯ ಒಪ್ಪಿಗೆಯಂತ ಸುಗುಣವತಿಯಾದ ಕನ್ಯಾರತ್ಸವನ್ನು ಲಗ್ನವಾಗಿ ತನ್ನಲ್ಲಿಗೆ ಬರುವ ಭಕ್ತರ ಸಂಕಷ್ಟಗಳನ್ನು ಪರಿಹರಿಸುತ್ತ ಶ್ರೀ ಸ್ವಾಮಿಯವರು ಕೊಟ್ಟ ವಸ್ತುಗಳಿಗೆ ಒಂದು ಪ್ರತ್ಯೇಕ ಗದ್ದುಗೆಯನ್ನು ಮಾಡಿಟ್ಟು ನಿತ್ಯಪೂಜೆಯನ್ನು ಮಾಡುತ್ತ ಗುರುಸ್ಮರಣೆಯಲ್ಲಿ ಸ್ಥಿತಪ್ರಜ್ಞನಾಗಿದ್ದು ಸಮಾಧಿನಿಷ್ಠನಾದನು. |
ಮಾತೃಶ್ರೀ ಗೋವಿ೦ಂದಮಾಂ ಬಾ ಸಮೇತ ಶ್ರೀ ಶ್ರೀ ಶ್ರೀ ಪೋತಲೂರು ವೀರಬ್ರಹ್ಮೇ೦ದ್ರ ಸದ್ಗುರು ಸ್ವಾಮಿಯವರಿಗೆ ಜೈ! ಜೈ! ಜೈ!
ಶ್ರೀ ಪೋತುಲೂರು ವೀರಬ್ರಹ್ಮೇಂದ್ರಸ್ವಾಮಿಯವರ ಸಂಕ್ಷಿಪ್ತ ಚರಿತ್ರೆ ಸಂಪೂರ್ಣಂ

