
ಶ್ರೀ ಪೋತುಲೂರು ವೀರ ಬ್ರಹ್ಮೇಂದ್ರಸ್ವಾಮಿ ಸಂಕ್ಷಿಪ್ತ ಚರಿತ್ರೆ
-
ಶಿಷ್ಯರೊ೦ದಿಗೆ ಸಂಚಾರವನ್ನು ಕೈಗೊ೦ಡ' ಶ್ರೀ ವೀರಬ್ರಹ್ಮೇ೦ದ್ರಸ್ವಾಮಿಯವರು ಅಹೋಬಲ ನರಸಿಂಹಸ್ವಾಮಿ ಹಾಗೂ ಮಹಾನಂದಿ ಕ್ಷೇತ್ರಗಳನ್ನು ಸಂದರ್ಶಿಸಿ ನಂದ್ಯಾಲ ಗ್ರಾಮಕ್ಕೆ ಬ೦ದು ಬೀಡು. ಬಿಟ್ಟರು. ತಮ್ಮ ಜವಾನನಿಂದ ತಾವು ಬಂದಿರುವುದಾಗಿ ವಿಶ್ರಬ್ರಾಹ ಣರಿಗೆ ಸುದ್ದಿ ಕಳಿಸಿದರು. ಅಲ್ಲಿಗೆ ವಿಶ್ವಬ್ರಾಹ್ಮಣರೊಬ್ಬರಾದರೂ ಬರಲಿಲ್ಲ. ನಂದ್ವಾಲ ಗ್ರಾಮದ ಹಿರಿಯರೂ, ಭಕ್ತರು ಸೇರಿ ಸ್ವಾಮಿಯವರನ್ನು ಎದುರ್ಗೊಂಡು ವಸತಿಗಳನ್ಸೇರ್ಪಡಿಸಿ ಸ್ವಾಮಿಯವರಿ೦ದ ತೀರ್ಥ ಪ್ರಸಾದಗಳನ್ನು ಸ್ನೀಕರಿ” ದರು. ಎರಡು ಮೂರು ದಿನಗಳಾದರು ವಿ: ಹ್ಮಣರ್ಯಾರೊಬ್ಬರಾ ಅನ್ಯರೇ ಬಂದು ಅದ್ವೈತ ವಿಚಾರಗಳನ್ನು ಆಲಿಸುತ್ತಿದ್ದರು. ತೀರ್ಥ ಪ್ರಸಾದಗಳನ್ನು ಸ್ವೀಕರಿಸಿ ಆಶೀರ್ವಾದವನ್ನು ಪಡೆದು ಹೋಗುತ್ತಿದ್ದರು.
ಮರುದಿನ ಶ್ರೀ ವೀರಬ್ರಹ್ಮೇಂದ್ರ ಸ್ವಾಮಿಯವರೇ ಶಿಷ್ಯರೊಂದಿಗೆ ವಿಶ್ವಬ್ರಾಹ್ಮಣ ಹಿರಿಯರಲ್ಲಿ ಹೋಗಿ ವಿಶ್ವ ಬ್ರಾಹ್ಮಣೋತ್ತಮರೇ ನಾವು ನಿಮ್ಮ ಗಾಮಕ್ಕೆ ಬಂದಿರುವ ವಿಷಯ ಜವಾನರಿ೦ದ ತಿಳಿಸಿದೆವಾದರೂ ಯಾರೊಬ್ಬರೂ ಬರಲಿಲ್ಲ. ಅದಕ್ಕಾಗಿಯೇ ನಾವೇ ನಿಮ್ಮ ದರ್ಶನಕ್ಕಾಗಿ ಬರಬೇಕಾಯಿತು. ಎಂದರು. ಧನ ಮಧಾಂಧದಿಂದ ಗರ್ವಿಷ್ಟರಾದ ವಿಶ್ವ ಬ್ರಾಹ್ಮಣರು ಹಯ್ಯೋ ಸನ್ಯಾಸಿಗಳು, ಭಿಕ್ಷುಕರು ಊರೂರು ಅಲೆಯುತ್ತ ಎಷ್ಟೋ ಜನರು ಬರುತ್ತಾರೆ, ಹೋಗುತ್ತಾರೆ ಅವರ್ನು ಕರೆದು ಆಧರಿಸಲಾದೀತೆ? ಎಂದು ಉತ್ತರಿಸಿದರು. ಅಷ್ಟರಲ್ಲಿ ಇನ್ನು ಕೆಲವರು ಅಲ್ಲಿಗೆ ಬ೦ದರು. ಎಲ್ಲರೂ ಧನ ಮಧಾಂಧದಿ೦ದ ಗರ್ವಿಷ್ಟರೇ ಆಗಿದ್ದರು. ಅಯ್ಯಾ! ಧನವ೦ತರೇ ಅವರವರ ಕರ್ಮಾನುಸಾರ ಅವರು ಬದುಕುತಾರೆ ಅನ್ಯರ ವಿಷಯ ನಮಗೆ ಬೇಡ. ನೀವುಗಳು ನಮ್ಮ ಕುಲ ಬಾಂಧವರೆಂದು ನಾವು ನಿಮ್ಮಲ್ಲಿಗೆ ಬರಬೇಕಾಯಿತು. ಎನಲು ಅವರಲ್ಲಿ ಕೆಲವರು ನೀವು ನಮ್ಮ ವಿಶ್ವಕರ್ಮವಂಶಿಕರಾಗಿ ಸನ್ಯಾಸಿಗಳ೦ತೆ ವೇಷವನ್ನು ಧರಿಸಿ, ಅಲೆಮಾರಿಗಳಾಗಿ ಜೀವನಕ್ಕಾಗಿ ಊರೂರು ತಿರುಗುವ ಬದಲು ನಮ್ಮಂತೆ ದುಡಿದು ಧನಾರ್ಜನೆ ಮಾಡಿ ಇದ್ದಲ್ಲಿಯೇ ಸುಖಿಸಬಾರದೇಕೆ? ಏನೋ ಬಂದಿರುವಿರಿ ಇಂದಿನ ಆತಿಥ್ಯಕ್ಕೆ ಎಷ್ಟು ಅನ್ನವನ್ನು ಮಾಡಿಸಬೇಕು ಹೇಳಿ ಅಂದರು ಮದ್ದಾಂಧತೆಯಿ೦ದ. ವಿಶ್ವ ಬ್ರಾಹ್ಮಣೋತ್ತಮರು, ದಯಾ ಪರ ಧನವಂತರು ನಿಮಗೇನು 'ಕೊರೆತೆಯಿರದು. ನಿಮ್ಮಿಂದೆಷ್ಟು ಸಾಧ್ಯವೋ ಆಪ್ಟನ್ನೂ ಮಾಡಿಸಿ ನಾವು ಅನುಷ್ಠಾನವನ್ನು ಮುಗಿಸಿ ಬರುತ್ತೇವೆ. ಎಂದು ಹೇಳಿ ಹೋದರು ಶ್ರೀ ಸ್ವಾಮಿಯವರು.
ನಂದ್ಯಾಲದ ವಿಶ್ವಬ್ರಾಹ್ಮಣರೆಲ್ಲರೂ ಒಂದುಗೂಡಿ ತಮ್ಮ ಶ್ರೀಮಂತಿಕೆಯ ದರ್ಪವನ್ನು ತೋರಿಸಿಕೊಳ್ಳುವ ಸಲುವಾಗಿ ಒ೦ದು ಖಂಡಗ ಅಕ್ಕಿಯನ್ನು ಸೇರಿಸಿ ಆನ್ಸವನ್ನು ಮಾಡಿಸಿದರು. ಅನುಷ್ಠಾನವನ್ನು ಮುಗಿಸಿ ಬ೦ದ ಶ್ರೀ ಸ್ವಾಮಿಯವರ ಶಿಷ್ಯವೃಂದವು ಅನ್ನದ ರಾಶಿಯನ್ನು ನೋಡಿ ಆಶ್ಚರ್ಯ ಪಡುತ್ತ ಒಬ್ಬರ ಮುಖವನ್ನೊಬ್ಬರು ನೋಡಿಕೊಳ್ಳುತ್ತಿದ್ದರು. ಅನ್ನದ ರಾಶಿಯ ಬಳಿನಿಂತು ಸಿದ್ಧಾ! ಎ೦ದರು ಶ್ರೀಸ್ವಾಮಿಯವರು. ಗುರುದೇವಾ ಎಂದು ಕ್ಶೈ ಜೋಡಿಸಿ ನಿಂತ ಸಿದ್ದಯ್ಯ ಧನವ೦ತರು ಅಪಾರ ಅನ್ನವನ್ನೆ ಮಾಡಿಸಿದ್ದಾರೆಂದು ಅನ್ನದ ರಾಶಿಯಲ್ಲಿ ಒ೦ದು ಹಿಡಿಯಷ್ಟು ಕೈಲಿಡಿದು ಮೊದಲು ನಿನ್ನ ಹಸಿವನ್ನು ತೀರಿಸಿಕೋ. ನಂತರ ಉಳಿದವರದು ಎ೦ದು ತಮ್ಮ ಕೈಲಿದ್ದ ಅನ್ನಕ್ಕೆ ಕಮ೦ಡಲೋದಕವನ್ನು ಪ್ರೋಕ್ಷಿಸಿ ಸಿದ್ಧಯ್ಯನಿಗೆ ಅಪ್ಪಣೆ ಕೊಟ್ಟರು. ಗುರುದೇವರ ಪಾದಗಳಿಗೆ ನಮಸ್ಕರಿಸಿ ಟೈ! ಸದ್ಗುರು ವೀರಬ್ರಹ್ಮೇಂದ್ರಸ್ವಾಮಿ ಎಂಧು ರಾಶಿಯ ಮುಂದೆ ಕುಳಿತು ಬಾಯಿಯನ್ನು ತೆಗೆಯುತ್ತಲೇ ಅನ್ನದ ರಾಶಿಯು ಕರ್ಪೂರದಂತೆ ಕರಗಿ ಬರಿದಾಯಿತು. ಸಿದ್ಧಯ್ಯನ ಆರ್ಭಟ ಹೇಳತೀರದಾಯಿತು. ಆಗ ಶ್ರೀ ವೀರಬ್ರಹ್ಮೇಂದ್ರಸ್ವಾಮಿಗಳು ಧನವ೦ತರಾದ ವಿಶ್ವ ಬ್ರಾಹ್ಮಣ ಕುಲ ಬಂಧುಗಳೇ! ನಮ್ಮ ಸಿದ್ಧನಿಗೆ ಅಸಿವು ತೀರದಾಗಿದೆ. ತಾವುಗಳು ದಯೆ ತೋರಬೇಕಾಗಿದೆಯೆಂದರು.
ಸಿದ್ಧಯ್ಯನ ಅಸಿವಿನ ಆರ್ಭಟವನ್ನು ಕಂಡು ಧನ ಮಧಾಂಧಿತರಾದ ವಿಶ್ವಬ್ರಾಹ್ಮಣರ ಮುಖಗಳು ಬಾಡಿ ಮುದುಡಿದ ತರಗೆಲೆಯಂತಾದವು. ಎಲ್ಲರಿಗೂ ನಮಗೆ ಉಳಿಗಾಲವಿಲ್ಲವೆ೦ಬುದು ಭಾಸವಾಯಿತು. ನಿಂತ ನಿಂತಲ್ಲಿಂದಲೇ ದೇಹೀ ದೇಹೀ ಪಾಹಿಮಾಂ ಪಾಹಿಮಾ೦ ಎಂದು ಸಾಷ್ಟಾಂಗವನ್ನು ಹಾಕಿದರು. ಕೆಲವರಂತೂ ಶ್ರೀ ಸ್ವಾಮಿಯವರ ಪಾದಗಳನ್ನು ಬಿಡದಾದರು. ಯಾಕೆ? ಯಾಕೆ ಧನವ೦ತರೇ ಅನ್ನುವುದನ್ನು ಕೇಳುತ್ತಲೆ ಮಹಾನು ಭವಾ! ನಮ್ಮ ಅವಿವೇಕತನವನ್ನು ಮನ್ನಿಸಿ ಕೃಪೆ ತೋರುವವರೆಗೂ ನಿಮ್ಮ ಪಾದಗಳನ್ನು ಬಿಡಲೋಲ್ಲೆವು ನಿಮ್ಮ ಮಹಿಮೆಯನ್ನು ತಿಳಿದಿದ್ದರೂ ಸಹಾ ಧನ ಮಧಾಂಧತೆಯಿ೦ದ ಮುಚ್ಚಿದ ಒಳಗಣ್ಣನ್ನು ತೆರೆಸಿದಿರಿ. ನಮ್ಮ ಸರ್ವಾಪರಾಧಗಳನ್ನು ಕ್ಷಮಿಸಿ ಕ್ರಮಾಭಿಕ್ಷೆಯನ್ನು ನೀಡಬೇಕೆಂದು ಪಾದಗಳನ್ನು ಬಿಡದಾದರು. ನಿಗರ್ವಿತರಾದ ವಿಶ್ವಬ್ರಾಹ್ಮಣರಲ್ಲಿ ಕರುಣೆ ತೋರಿದ ಸ್ವಾಮಿಯವರು ತಮ್ಮ ಕೈಲಿದ್ದ ಅನ್ನವನ್ನು ಸಿದ್ದಯ್ಯನ ಬಾಯಿಯೊಳಗೆ ಹಾಕಿದರು. ತಕ್ಷಣ ಶಾ೦ತ ಚಿತ್ತನಾದ ಸಿದ್ದಯ್ಯರು ಸಾಷ್ಟಾಂಗ ಹಾಕಿದವರೆಲ್ಲರ ಒಬ್ಬೊಬ್ಬರಾಗಿ ಎದ್ದು ತಲೆಬಾಗಿ ನಿಂತರು. ಎಂಶಹ ಧನವ೦ತರಾದರೂ ದರಿದ್ರರನ್ನು ಮಾನವೀಯತೆಯಿಂದ ಕಾಣುವುದೇ ನಿಜ ಧರ್ಮ. ಎಂದು ಅನೇಕ ನೀತಿ ಮಾತುಗಳನ್ನು ಹೇಳಿದರುಸ್ವಾಮಿಯವರು.
ಅ೦ದು ಶಿಷ್ಯರೊಂದಿಗೆ ಶ್ರೀ ವೀರಬ್ರಹ್ಮೇಂದ್ರಸ್ವಾಮಿಯವರನ್ನು ಏಶೇಷವಾಗಿ ಸ್ವಾಗತಿಸಿ ಸ್ವಾಮಿಯವರಿಂದ ಅದ್ವೈತ, ಭೂತ, ಭವಿಷ್ಯತ್, ವರ್ತಮಾನ, ಕಾಲಜ್ಜಾನವನ್ನು ಕೇಳಿದ ವಿಶ್ವಬ್ರಾಹ್ಮಣರೂ, ಊರ ಪ್ರಮುಖರೂ, ಎಲ್ಲಾ ಭಕ್ತಾದಿಗಳು ತೀರ್ಥ ಪಸಾದಗಳನ್ನು ಸ್ವೀಕರಿಸಿ ಸ೦ತುಷ್ಣರಾದರು. ಮರುದಿನ ವಿಶ್ವಬ್ರಾಹ್ಮಣ ತತ್ನಾ ಎಬೌರಗಳು ಹೇಗಿರಬೇಕೆಂದು ಬೋಧಿಸದರು ಶ್ರೀ ಸ್ವಾಮಿಯವರು. ನಂದ್ಯಾಲದ ಪುರಜನ ಭಕ್ತರೆಲ್ಲರೂ ಒಗ್ಗೂಡಿ ಸ್ವಾಮಿಯ ಸಮೂಹವನ್ನು ಬೀಳ್ಕೊಟ್ಟರು.
ಬ್ರಹ್ಮ ರಾಕ್ಷಸಿಗೆ ಆಗ್ಗೆ ಮಾಡಿದ್ದು
ನಂದ್ಯಾಲದಿ೦ದ ಪ್ರಯಾಣಿಸಿದ ಸ್ವಾಮಿಯವರು ಮಾರ್ಗಮಧ್ಯದಲ್ಲಿ ವಿಶ್ರಾಂತಿಗಾಗಿ ದಟ್ಟವಾಗಿ ಬೆಳೆದಿದ್ದ ವೃಕ್ತದಡಿಯಲ್ಲಿ ತಂಗಿ ಅಂದಿನ ರಾತ್ರಿಯನ್ನು ಕಳೆಯಲು ನಿರ್ಧರಿಸಿದರು. ಆ ವೃಕ್ಷದಲ್ಲಿ ವಾಸವಾಗಿದ್ದ ಬ್ರಹ್ಮರಾಕ್ಷಸಿ ದಾರಿ ಹೋಕರನ್ನು ಗಾಬರಿಗೊಳಿಸಿ ಹಿಂಸಿಸುತ್ತಿತ್ತು. ಸಿದ್ದಯ್ಯ ಸ್ವಾಮಿಯವರ ಪಾದ ಸೇವೆಯಲ್ಲಿ ನಿರುತನಾಗಿದ್ದು ಗುರುದೇವರು ಬೋಧಿಸುವ ವಿಷಯಗಳನ್ನು ಮನಸಾರೆ ಆಲಿಸುತ್ತಿದ್ದ. ಕೆಲ ಶಿಷ್ಯರು ಮಾರ್ಗಯಾಸದಿ೦ದ ಮಲಗಿದ್ದರು. ಕೆಲವರು ವಿಶ್ರಾಂತಿಯನ್ನು ಪಡೆಯುತ್ತ ಆ ವೃಕ್ಷದ ವಿಶಾಲತೆಯನ್ನು ವೀಕ್ಷಿಸತ್ತಿದ್ದರು. ಆದರಲ್ಲಿ ವಾಸವಾಗಿದ್ದ ಬ್ರಹ್ಮರಾಕ್ಷಸಿ ವಿಕಾರ ರೂಪವನ್ನು ತಾಳಿ. ಬೃಹದಾಕಾರವಾಗಿ ಕಾಣಿಸಿತು. ಅದನ್ನು ನೋಡಿದ ಶಿಷ್ಕರು ಗಾಬರಿಗೊಂಡು ವಿಷಯವನ್ನು ಗುರುಗಳಿಗೆ ತಿಳಿಸಿದರು. ಬ್ರಹ್ಮರಾಕ್ಷಸಿಯ ಮೂಲವನ್ನು ಅರಿತಿದ್ದ ಬ್ರಹ್ಮೇಂದ್ರಸ್ವಾಮಿಯವರು ಸಿದ್ಧಯ್ಯನ ಕೈಲಿ ಬೆತ್ತವನ್ನು ಕೊಟ್ಟು ಆ ರಾಕ್ಷಸಿಯ ಮುಂದಲೆಯನ್ನು ಹಿಡಿದು ಎಳೆದು ತರುವಂತೆ ಹೇಳಿದರು. ಮರವನ್ನೇರಿದ ಸಿದ್ಧಯ್ಯನನ್ನು ಎದುರಿಸಲು ಪ್ರಯತ್ನಸಿದ ರಾಕ್ಷಸಿಯ ಮುಂದಲೆಯನ್ನಿಡಿದು ತಂದು ಗುರುಗಳ ಬಳಿ ಬಿಟ್ಟನು. ಹಿ೦ದಿನ ಜನ್ಮದಲ್ಲಿ ಶಾಪಗ್ರಸ್ತಳಾಗಿ ಬಹ್ಮರಾಕ್ಷಸಿಯಾಗಿದ್ದು ಶಾಪ ವಿಮುಕ್ತಳನ್ನಾಗಿ ಮಾಡಿರೆ೦ದು ಸ್ವಾಮಿಯವರಲ್ಲಿ ಮೊರೆಯಿಟ್ಟಿತು. ಆ ಸಮಯ ಮುಂದೆ ಬರಲಿದೆ. ನನ್ನ ಮೊಮ್ಮಗಳು ಈಶ್ವರಿ ದೇವಿಯಿ೦ದ ಶಾಪಮುಕ್ತಳಾಗವೆ ಎಂದು ಹೇಳಿ ಅಲ್ಲಿಯವರೆಗೂ ಯಾರನ್ನು ಹಿಂ೦ಸಿಸದೆ ಒಂದು ಬ೦ಡೆಯಂತೆ ಬಿದ್ದಿರು ಎಂದು ಆಜ್ಞಾಪಿಸಿದರು. ಅಂದು ರಾತ್ರಿ ಅಲ್ಲಿಯೇ ಕಳೆದು ಬೆಳಗಾಗುತ್ತಲೆ ಪ್ರಯಾಣವನ್ನು ಬೆಳೆಸಿದರು.

