
ಶ್ರೀ ಪೋತುಲೂರು ವೀರ ಬ್ರಹ್ಮೇಂದ್ರಸ್ವಾಮಿ ಸಂಕ್ಷಿಪ್ತ ಚರಿತ್ರೆ
-
ಶ್ರೀ ಪೋತುಲೂರು ವೀರಬ್ರಹ್ಮೇಂದ್ರಸ್ವಾಮಿ ಕಾಲಜ್ಞಾನ
ಮರು ದಿನ ಶಿಷ್ಯರೊಂದಿಗೆ ಹೊರಟು ದಕ್ಷಿಣಾಭಿಮುಖವಾಗಿ ಸಂಚಾರ ಮಾಡುತ್ತ ಬೆಜವಾಡದ ದುರ್ಗಾಂಬಾ ದೇವಿಯ ದರ್ಶನ ಮಾಡಿ ನಂತರ ತಿರುಪತಿಯಲ್ಲಿ ಬೀಡು ಬಿಟ್ಟರು ಆಲ್ಲಿನ ಆಲವೇಲು ಮಂಗಮ್ಮ, ಗೋವಿಂದ ಸ್ವಾಮಿ. ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಮಾಡಿದ ನಂತರ ಕಡಪ ಮಾರ್ಗವಾಗಿ ಪ್ರಯಾಣಿಸಿದರು. ಮಾರ್ಗ ಮಧ್ಯದಲ್ಲಿ ಸಿದ್ದಯ್ಯನನ್ನು ಕುರಿತು ಇತರೆ ಶಿಷ್ಯರೆಲ್ಲರೂ ಏನೇನೋ ಗೊಣಗುತ್ತಿದ್ದರು.
ಶ್ರೀ ವೀರಬ್ರಹ್ಮೇಂದ್ರಸ್ವಾಮಿಯವರು ನಿಜ ಶಿಷ್ಯತ್ವವೇನೆ೦ಬುದನ್ನು ತಿಳಿಯ ಪಡಿಸಲು ಶಿಷ್ಯರನ್ನು ಹತ್ತಿರ ಕರೆದು ನೀವೆಲ್ಲರೂ ನನ್ನ ಮಾತೊಂದನ್ನು ನಡೆಸಿಕೊಡುವಿರಾ ಎನಲು ಓ ಹೋ ಎಂದರು ಆ ಶಿಷ್ಯರೆಲ್ಲರೂ. ಸ್ವಲ್ಪ ಮುಂದೆ ಸಾಗುತ್ತಿದ್ದಂತೆ ಸತ್ತು ದುರ್ವಾಸನೆ ಬರುತ್ತಿದ್ದ ನಾಯಿಯೊಂದು ಬಿದ್ದಿತ್ತು. ನೀವು ಈ ನಾಯಿಯನ್ನು ತಿನ್ನಿ ಎಂದರು ಸ್ವಾಮಿಯವರು. ವಾಸನೆಯನ್ನು ತಾಳಲಾಗದ ಶಿಷ್ಯರೆಲ್ಲರೂ ದೂರ ಸರಿದು ನಿಂತರು. ಸಿದ್ದಯ್ಯನನ್ನು ಸಿದ್ಧಾ! ಎಂದರು ತಕ್ಷಣ ಗುರುದೇವರ ಪಾದಗಳಿಗೆ ನಮಸ್ಕರಿಸಿ ನಾಯಿಯನ್ನು ಕೈಗೆ ತೆಗೆದುಕೊಳ್ಳುತ್ತಲೆ ಅದೆಲ್ಲವೂ ಕಳೆಮಾಗಿದ ವಿವಿಧ ಫಲಗಳಾಗಿ ಮಾರ್ಪಟ್ಟಿದ್ದವು. ದೂರ ಸರಿದಿದ್ದ ಶಿಷ್ಯರೆಲ್ಲರೂ ನಡೆದದ್ದನ್ನು ನೋಡಿ ನಾಚಿ ಮತ್ತೆಂದೂ ಶಿದ್ದಯ್ಯನ ಬಗ್ಗೆ ಚಕಾರವಾಲಿಲ್ಲ.
ಮುಂದೆ ಪಯಣಿಸಿದ ಆ ವೃಂದವು ಮಾರ್ಗಯಾಸವನ್ನು ಕಳೆಯಲು ಒಂದು ಆಲದ ಮರದಡಿಯಲ್ಲಿ ಕುಳಿತರು. ಸಿದ್ದಯ್ಯಾ ಸ್ವಾಮಿಯವರ ಪಾದವನ್ನೊತ್ತುತ್ತ ಕುಳಿತಿದ್ದ. ಉಳಿದ ಶಿಷ್ಕರು ಅಲ್ಲಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದರು. ಆಗ ಸಿದ್ಧಯ್ಯ ಗುರುದೇವಾ! ನನಗೆ ಸಾ೦ಖ್ಯ ಯೋಗವನ್ನು ಬೋಧಿಸಿರೆನಲು ಆದಕ್ಕೆ ಇದು ಸಮಯವಲ್ಲವಂದು ಸಿದ್ಧಾ! ಈಗ ಇಲ್ಲೊಂದು ಅದ್ಭುತ ಕಾರ್ಯ ನಡೆಯುತ್ತದೆ ಅದನ್ನು ವೀಕ್ಷಿಸು ಎಂದರು ಸ್ವಾಮಿಯವರು.
ಶ್ರೀ ಸ್ವಾಮಿಯವರು ಕುಳಿತಿದ್ದ ಮರದ ಇನ್ನೊಂದು ಪಕ್ಕದಿ೦ದ ವಿಪರೀತ ದುಃಖದ ಆರ್ತನಾದವು ಕೇಳಿಬಂತು. ಸಿದ್ಧಯ್ಯನಿಗೆ ನೋಡಲು ಹೇಳಿದರು. ನೋಡಿ ಬಂದ ಸಿದ್ದಯ್ಯ ತಂದೆಯೇ! ಯಾರೋ ದಂಪತಿಗಳು ಕುಷ್ಟರೋಗದಿ೦ದ ಬಳಲುತ್ತಿದ್ದಾರೆ೦ದನು. ಸ್ವಾಮಿಯವರು ಅವರ ಬಳಿ ಬರುತಲೆ ಪತಿಯ ಸೇವೆಯಲ್ಲಿದ್ದ ಸಾಧ್ವಿ ಎದ್ದು ಬಂದು ಮಹಾ ಮಹಿಮಾ! ಇವರು ನನ್ನ ಪತಿ ದೇವರು. ಕುಷ್ಟರೋಗದಿ೦ದ ಬಹುದಿನಗಳಿಂದಲೂ ಬಳಲುತಿದಾರೆ ಎಂದು ಹೇಳಿದಳು. ಅಮ್ಮಾ! ಸಾಧ್ವೀ ಮಣಿ ನಿಮ್ಮ ಸಂಕಷ್ಟಗಳೆಲ್ಲವೂ ಐಂದಿಗೆ ಕೊನೆಯಾದವು. ಎಂದು ತಮ್ಮ ಕಮಂಡಲದಲ್ಲಿದ್ದ ಉದಕವನ್ನು ಆಬಿಮಂತ್ರಿಸಿ ರೋಗಿಯ ಮೇಲೆ ಪ್ರೋಕ್ಷಿಸಲು ರೋಗಿಯಾಗಿದ್ದ ಬ್ರಾಹ್ಮಣನು ಸದೃಢಕಾಯನಂತೆ ಎದ್ದು ಕುಳಿತನು. ಅದನ್ನು ಕಂಡ ಸತಿ ಸಾದ್ವಿಗೆ ಹೇಳತೀರದಷ್ಟು ಸಂತೋಷವಾಯಿತು. ತಕ್ಷಣ ದಂಪತಿಗಳಿಬ್ಬರು ಸ್ವಾಮಿಯವರಿಗೆ ಸಾಷ್ಟಾಂಗವನ್ನು ಮಾಡಿ ಮಹಾ ಮಹಿಮಾ! ನಮ್ಮನ್ನು ನಿಮ್ಮ ಶಿಷ್ಯರನ್ನಾಗಿ ಸ್ವೀಕರಿಸಿ ಎ೦ದು ಬೇಡಿದರು. ಸಾಧ್ವೀಮಣೀ! ದಂಪತಿಗಳಾದ ನಿಮ್ಮ ಜೀವನದಲ್ಲಿ ಆಧಿಕ ಪ್ರಶಂಸೆಯನ್ನು ಕಾಣುವುದಿದೆ. ನೀವೀಗ ನಿಮ್ಮ ಸ್ಪಸ್ಥಾನಕ್ಕೆ ಹಿ೦ದಿರಗಿ. ಈಗ ನಿಮಗೊ೦ದು ಮಹಾಮಂತವನ್ನು ಬೋಧಿಸುತ್ತೇನೆ ಅದನ್ನು ಸದಾ ಸ್ಮರಿಸುತ್ತ ಸುಖವಾಗಿ ಅ ಎಂದು “'ಓ೦- ಹ್ರೀ೦ -ಕ್ಹೀಂ-ಶ್ರೀಂ-ಶಿವಾಯ ಬ್ರಹ್ಮಣೇ ನಮಃ" ಎಂದು ಬೋಧಿಸಿ ಆಶೀರ್ವಧಿಸಿದರು. ಅವತಾರ ಪುರುಷಾ! ಮತ್ತೆ ನಮಗೆ ನಿಮ್ಮ ದರ್ಶನ ಭಾಗ್ಯವೆನಲು ಆಮ್ಮಾ! ಅದಕ್ಕೂ ಸಮಯ ಬರುತ್ತದೆ ಎಂದು ಹೇಳಿ ಅಲಿಂದ ಪ್ರಯಾಣ ಮಾಡಿದ ಸ್ವಾಮಿಯವರು ಅಲ್ಲಾಡಪಲ್ಲಿ ವೀರ ಭದ್ರಸ್ವಾಮಿಯ ದೇವಾಲಯಕ್ಕೆ ಬ೦ದು ಅಲ್ಲಿಯೇ ಉಳಿದರು. ಮರುದಿನ ಬೆಳಗ್ಗೆಯೇ ಎದ್ದು ಕುಮುದ್ದತಿ ನದಿಯಲ್ಲಿ ಮಿಂದು ದೇವಾಲಯದಲ್ಲಿ ಶ್ರೀ ವೀರಭದಸ್ಥಾಮಿಯನ್ನು ಅಮ್ಮನವರನ್ನು ಶಿವಲಿಂಗೇಶ್ವರರನ್ನು ಪೂಜಿಸಿ ತ ಅಲ್ಲಿಯೇ ಉಳಿದು ಶಿಷ್ಯರಿಗೆ ಅನೇಕ ಅದ್ವೈತ ವಿಚಾರಗಳನ್ನು ಬೋಧಿಸಿ ಅಂದು ರಾತ್ರಿ ಕಳೆದು ಬೆಳಗಿನ ಜಾವದಲ್ಲಿ ಎದ್ದು ಕಂದಿಮಲ್ಲಯ್ಯಪಲ್ಲಿಗೆ ಬಂದರು.
ಎಂದಿನಂತೆ ಮಠದಲ್ಲಿ ಭಜನೆ, ಆಧ್ಯಾತ್ಮ ವಿಚಾರಗಳು ಕಡ ಯುತ್ತಿದ್ದವು. ಭಕ್ತರು. ಆಸ೦ಂಖ್ಯಾಶ ಜನರು ನೆರೆದಿದ್ದರು. ಆ ಸಮಯದಲ್ಲಿ ಕಡಪ ನವಾಬರ ಜವಾನನೊಬ್ಬ ಬಂದು ಪತ್ರವೊಂದನ್ನು ಶ್ರೀ ಸ್ವುಮಿಯವರಿಗೆ ತಲುಪಿಸಿದನು. ಪತ್ರವನ್ನು ಓದಿದ ಶ್ರೀ ಸ್ವಾಮಿಯವರು ನೋಡಿದೆಯಾ ಸಿದ್ಧಾ ನಿಮ್ಮ ತಂದೆಯು ಕಡಪ ನವಾಬರಿಗೆ ದೂರು ಕೊಟ್ಟಿದ್ದಾರೆ. ನಾವು ನಿನ್ನನ್ನು ಜಾತಿ ಭ್ರಷ್ಟನನ್ನಾಗಿ ಮಾಡಿ ಶಿಷ್ಯನನ್ನಾಗಿರಿಸಿಕೊ೦ಡಿರುವುದಾಗಿಯೂ, ಪುತ್ರ ಶೋಕವನ್ನು ಕಲ್ಪಿಸಿರುವುದಾಗಿಯೂ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ನಾವೇ ಹೋಗಿ ಅವರ ಪಶ್ನೆಗಳಿಗೆ ಉತ್ತರಿಸಿ ನಿನ್ನನ್ನು ಒಪ್ಪಿಸಬೇಕಂತೆ. ಇಲ್ಲವಾದಲ್ಲಿ ನೀವು, ನಿಮ್ಮ ಮಠವು ಯಾವುದೂ ಉಳಿಯದೆಂದು ತಿಳಿಸಿದ್ದಾರೆ. ಈ ಕಾರಣಕ್ಕಾಗಿಯೇ ಆಂದು ನಾವುಗಳು ಹೇಳಿದ್ದು.
ನವಾಬರಿ೦ದ ಬ೦ದ ವಿಷಯವನ್ನು ಕೇಳಿದ ಸಿದ್ದಯ್ಯ ಗುರುತ೦ದೆಯೇ! ಈ ಅಲ್ಬ ಕಾರ್ಯಕ್ಕೆ ನೀವು ಹೋಗಬೇಕಾಗಿಲ್ಲ. ನನ್ನನ್ನು ಆಶೀರ್ವದಿಸಿ ಅಪ್ಪಣೆಯನ್ನು ಕೊಡಿ ನಾನೇ ಹೋಗಿ ಅವರ ಪಶ್ಚೆಗಳಿಗೆ ಉತ್ತರಿಸಿ ಬರುತ್ತೇನೆಂ: ಸ್ವಾಮಿಯವರ ಪಾದಕಮಲದಲ್ಲಿ ಶಿರವನ್ನಿಟ್ಟು ನಮಸ್ಕರಿಸಿದನು. ಮನೋಭಿಪ ಸಿದ್ದಿರಸ್ತು ಎಂದು ಆಶೀರ್ವಧಿಸಿದರು. ಶ್ರೀ ವೀರಬ್ರಹ್ಮೇ೦ದ್ರಸ್ವಾಮಿಯವರು
ಗುರುಗಳ ಆಶೀರ್ವಾದಗಳನ್ನು ಪಡೆದು ಹೊರಟ ಸಿದ್ದಯ್ಯ ಕಡಪ ನವಾಬರ ರಾಜಾಸ್ಥಾನಕ್ಕೆ ಬ೦ದನು. ಆಸ್ಥಾನದಲ್ಲಿ ರಾಜ ಸಭೆ ಸೇರಿತ್ತು. ಎಲ್ಲಾ ಅಧಿಕಾರಿಗಳು ತ೦ತಮ್ಮ ಸ್ಥಾನಗಳಲ್ಲಿ ಕುಳಿತಿದ್ದರು. ಪೀರುಸಾಯಬು ಬಂದಿದ್ದನು. ನವಾಬರು ಆಸ್ಥಾನಕ್ಕೆ ಬ೦ದ ಕೂಡಲೆ ಎಲ್ಲರೂ ಎದ್ದು ರಾಜ ಮರ್ಯಾದೆಯ ಸಲಾಮನ್ನು ಸಲ್ಲಿಸಿದರು. ನವಾಬರು ಆಸ್ತಾನದಲ್ಲಿ ಕುಳಿತನ೦ತರ ಎಲ್ಲರೂ ಕುಳಿತರು. ಸಿದ್ಧಯ್ಯನು ನಿ೦ತಲ್ಲಿಯೇ ಅಲುಗಾಡದೆ ಮೌನವಾಗಿ ಗುರು ಸ್ಮರಣೆಯಲ್ಲಿಯೇ ಮೈಮರೆತಿದ್ದನು. ಆಸ್ಗಾನದ ಧರ್ಮಗುರುಗಳು ಒಬ್ಬರು ಎದ್ದುನಿ೦ತು ಹುಜೂರ್ ಲವನು ಮುಡುಮಾಲದ ಪೀರು ಸಾಯಬನ ಒಬ್ಬನೇ ಮಗನು. ಇವನ ಹೆಸರು ಸ್ಕೆಯದ್, ಇವನು ಹಿಂದು ಗುರುವಿನಲ್ಲಿ ಸೇರಿ ತಾನೂ ಕೆಟ್ಟದ್ದಲ್ಲದೆ ನಮ್ಮ ಧರ್ಮದವರಿಗೆ ಹಿಂದು ಧರ್ಮವನ್ನು ತಿಳಿಸುತ್ತಿದ್ದಾನೆ. ಅಲ್ಲದೆ ಇಲ್ಲಿನ ಆಸ್ಥಾನಕ್ಕೆ ಬೆಲೆಕೊಡದೆ ನಿಮಗೂ ಗೌರವಯುತವಾಗಿ ಸಲಾಮನ್ನು ಮಾಡದೆ ನಿಂತಿದ್ದಾನೆ. ಇಂಥಾ ಜಾತಿ ಬಭ್ರಷ್ಟನಿಗೆ ಶಕ್ಕ ಪಾಠವನ್ನು ಕಲಿಸಬೇಕಲ್ಲದೆ ಇವನ ಗುರುವಿಗೂ ಸರಿಯಾದ ದಂಡವನ್ನು ವಿಧಿಸಬೇಕು ಎ೦ದು ಹೇಳಿ ಕುಳಿತರು. ಸಿದ್ದಯ್ಯ ಏನನ್ನೂ ಮಾತನಾಡಲಿಲ್ಲ. ನವಾಬರು ಸಿದ್ಧಯ್ಯನನ್ನು ನೋಡುತ್ತ ಇವನನ್ನು ನಾನು ಬಂದಾಗಿನಿಂದಲೂ ಗಮನಿಸುತ್ತಿದ್ದೇನೆ. ಇದು ರಾಜ ಆಸ್ಥಾನ, ಇಲ್ಲಿರುವವರೆಲ್ಲರೂ ಯಾರು ಎನ್ನುವುದನ್ನೇ ಆರಿಯದವನಾಗಿದ್ದಾನೆ. ಅದಕ್ಕಾಗಿಯೇ ಹಿಂದು ಗುರುವಿನಲ್ಲಿ ಸೇರಿ ಅನ್ಯ ಧರ್ಮವನ್ನು ಪಾಲನೆ ಮಾಡುತ್ತಿದ್ದಾನೆ. ಇವನಿಗೆ ಅಂತರವೇ ತಿಳಿದಂತಿಲ್ಲ. ಎ೦ದು ಸ್ವಲ್ಪ ಗಂಭೀರವಾಗಿಯೇ ಏನೋ ಸೈಯದ್ ಈ ಆಸ್ಥಾನ ಯಾವುದು? ಇಲ್ಲರುವವರು ಯಾರು? ಅದನ್ನಾದರೂ ಬಲ್ಜೆಯ ಎಂದರು ನವಾಬರು. ಆ ನಮ್ಮ ಹ ದಯೆಯಿಂದ ಎಲ್ಲವನ್ನು ಬಲ್ಲೆ ಎಂದನು ವಿನಯದಿಂದ ಸಿದ್ಧಯ್ಯ ಓ ಹೋ ಎಲ್ಲವನ್ನೂ ಬಲ್ಲವನಾದರೆ ಈ ರಾಜಾಸ್ಥಾನಕ್ಕೂ ಬೆಲೆಕೊಡದೆ" ನಮಗೂ ಸಲಾಮನ್ನು ಲಿಸದೆ ಮಂದ ಮತಿಯಂತೆ ನಿಂತಿರುವಯಲ್ಲ? ನೀನೇನು ಎಲ್ಲ ಏನೂ ಅರಿಯದ ಮಂದಮತಿಯೋ? ಎನಲು ಆ ಎರಡೂ ನಾನಲ್ಲ.

