ಶ್ರೀ ಪೋತುಲೂರು ವೀರಬ್ರಹ್ಮೇಂದ್ರಸ್ವಾಮಿ ಸಂಕ್ಷಿಪ್ತ ಚರಿತ್ರೆ

  • ಮಗನ ಕಠಿಣ ಉತ್ತರವನ್ನು ಕೇಳಿದ ಪೀರು ಸಾಯಬು ಮಗಾ ಸೈಯದ್ ಏನು ಮಾತನಾಡುತ್ತಿರುವೆ? ನಿನ್ನನ್ನು ಹೆತ್ತ ತಾಯಿ, ತಂದೆಯ ಮನಸ್ಸನ್ನು ನೋಯಿಸುವುದೂ ಅಲ್ಲದೆ ನಮ್ಮ ಧರ್ಮ ಭ್ರಷ್ಟನಾಗಿ ಪರಧರ್ಮ ಗುರುಗಳ ಸೇವೆಯನ್ನು ಮಾಡುವುದರಿಂದ ನಮ್ಮ ಅಲ್ಲಾ ಮೆಚ್ಚುವನೆ? ನಮ್ಮ ಮುಸ್ಲಿ೦ ಗುರುಗಳೇ ಸಾಕಷ್ಟಿರುವಾಗ ಈ ಸನ್ಯಾಸಿಗಳ ಗೊಡವೆ ನಮಗೇಕೆ? ನಮ್ಮ ಧರ್ಮ ಗುರುಗಳ ಸೇವೆಯನ್ನು ಮಾಡುತ್ತ ನಮ್ಮ ಮುಂದೆಯೇ ಇದ್ದು ನಮ್ಮನ್ನು ಸ೦ತೋಷಗೊಳಿಸಿದರೆ ಆಗದೇ? ಬಾ ಮನೆಗೆ ಹೋಗೋಣವೆಂದನು ಪೀರುಸಾಯಬು. ತ೦ದೆಯ ಮಾತುಗಳನ್ನು ಕೇಳಿದ ಸಿದ್ದಯ್ಯ ಇರುವ ಒಬ್ಬ ದೈವವನ್ನು ನಮ್ಮ ಅಲ್ಲಾ ನಿಮ್ಮ ಶಿವಾ ಎ೦ಬ ಭೇದಗಳನ್ನು ಕಲ್ಪಿಸಿಕೊ೦ಡು ದೈವವನ್ನೇ ಹರಿದು ಹಂಚಿಕೊಂಡು ಮೇಲು ಕೀಳೆಂಬ ಭಾವನೆ ಗಳಲ್ಲಿನ ಪಾಪ ಕೂಪಗಳಲ್ಲಿ ಬಿದ್ದು ಹೊರಳಾಡುತ್ತಿರುವ ಅರ್ಥವಿಲ್ಲದ ಧರ್ಮಗಳು ಮೋಕ್ಷಮಾರ್ಗಕ್ಕೆ ಎಂದಿಗೂ ಕಾರಣವಾಗಲಾರವು. ಸ್ವಧರ್ಮಗಳ ಚಿಂತೆ ನನಗೆ ಬೇಕಾಗಿಲ್ಲ. ನೀವಿನ್ನು ಹೋಗ ಬಹುದು ಎಂದು ಉತ್ತರಿಸಿದನು ಸಿದ್ಧಯ್ಯ.

    ಮಗನು ತನ್ನೊಂದಿಗೆ ಬರಲು ತಿರಸ್ಕರಿಸಿದ್ದನ್ನು ಆರಿತ ಪೀರು ಸಾಯಬು ಆರೇ ಬ್ರಹ್ಮ೦ ನಿಮಗೂ ಹೆ೦ಡತೀ ಮಕ್ಕಳು ಇರುವರಲ್ಲ? ಹಾಗೆಯೇ ನಮಗೂ ಇರುವುದು ಬೇಡವೆ? ನಮ್ಮಿ೦ದ ನಮ್ಮ ಮಗನನ್ನು ದೂರ ಮಾಡುವುದು ನಿಮ್ಮ ಧರ್ಮಒಪ್ಪುವುದೇ? ನಮ್ಮ ಸೈದಾ ಇನ್ನೂ ಚಿಕ್ಕವನು ಅವನಿಗೆ ಬುದ್ದಿಹೇಳದೆ ನಿಮ್ಮ ಪಾದ ಸೇವೆ ಮಾಡಿಸಿಕೊ೦ಡಿರುವಿರಲ್ಲಾ? ಇದು ನಿಮಗೆ ಸರಿಯೆನಿಸುವುದೆ? ಎಂದು ನಾನಾ ಪ್ರಶ್ನೆಗಳನ್ನು ಹಾಕಿದನು ಪೀರು ಸಾಯಬ. ಅದುವರೆಗೂ ಸುಮ್ಮನೆ ಕುಳಿತಿದ್ದ ಶ್ರೀ ಸ್ವಾಮಿಯವರು ಆಯ್ಯಾ! ನಮ್ಮ ಮಕ್ಕಳು ನಿಮ್ಮ ಮಕ್ಕಳು ಎ೦ಬ ಭಾವನೆ ಇಲ್ಲಿಲ್ಲ. ಇಲ್ಲಿ ಎಲ್ಲಾ ಮಕ್ಕಳು ಆ ಜಗತ್ ಸೃಷ್ಟಿಕರ್ತನಾದ ಪರಬ್ರಹ್ಮವಿನ ಮಕ್ಕಳೆ. ಬಾ ಎಂದು ಕರೆಯಲು, ಹೋಗು ಎಂದು ಕಳಿಸಿಕೊಡಲು ಯಾರೂ ಕಾರಣರಲ್ಲ. ಈ ಮಠದ ಬಾಗಿಲು ಸದಾ ತೆರೆದೇ ಇರುತ್ತದೆ. ಎನಿತೆನಿತೋ ಜನರು ಬರುತ್ತಾರೆ. ಹೋಗುತ್ತಾರೆ. ನಿಮ್ಮ ಮಗನನ್ನು ಬಾ ಯೆನ್ನಲು. ಹೋಗು ಎನ್ನಲು ನಾವು ಕಾರಣರಲ್ಲ. ಬ೦ದರೆ ಕರೆದಕೊ೦ಡು ಹೋಗು ಎಂದರು.

    ಸಿದ್ದಯ್ಯನ ಕಠಿಣ ಉತ್ತರಗಳು ಹಾಗೂ ಶ್ರೀ ಬ್ರಹ್ಮೇ೦ದ್ರಸ್ವಾಮಿಯವರ ಮಾತುಗಳು ಪೀರು ಸಾಯಬುಗೆ ಸಮಾಧಾನವನ್ನು ಕೊಡಲಿಲ್ಲ. ತನ್ನ ಮಗನ, ಆಗಲಿಕೆ ಸಂಕಟವನ್ನು ತಂದಿತ್ತಲ್ಲದೆ ಕೋಪವು ಉಮ್ಮಳಿಸಿ ಸಿಟ್ಟನ್ನು ತಡೆಯಲಾಗಲಿಲ್ಲ. ಅರೇ ಸನ್ಯಾಸಿ ಬ್ರಹ್ಮ೦ಲ ನಮ್ಮ ಮಗನನ್ನು ನಿಮ್ಮ ಧರ್ಮಕ್ಕೆ ಸೇರಿಸಿಕೊ೦ಡು ನಮ್ಮ ಧರ್ಮ ಬ್ರಷ್ಠನನ್ನಾಗಿ ಮಾಡಿದ್ದಕ್ಕೆ ನಮ್ಮ ಧರ್ಮ ಗುರುಗಳಿಗೂ, ನವಾಬರಿಗೂ ಹೇಳಿ ನಿಮಗೆ ತಕ್ಕ ಶಾಸ್ತಿಯನ್ನು ಮಾಡಿಸುತ್ತೇನೆಂದು ಆರ್ಭಟಿಸಿ ಹೊರಟು ಹೋದನು. ಆಗ ಬ್ರಹ್ಮಂರವರು ಕೇಳಿದೆಯಾ ಸಿದ್ಧಾ ನಿಮ್ಮ ತಂದೆ ಆಡಿದ ಮಾತುಗಳನ್ನು ಮುಂದಿನ ಪರಿಣಾಮ ಏನಾಗಬಹುದೆ೦ದು ಊಹಿಸಬಲ್ಲೆಯಾ? ಎಂದರು. ತಂದೆಯೇ! ಆ ಸಮಯ ಬಂದಾಗ ಅವರಿಗೆ ತಕ್ಕ ಸಮಾಧಾನವನ್ನು ನಾನೇ ಹೇಳುತ್ತೇನೆ. ನನಗೆ ನಿಮ್ಮ ಪಾದಸೇವೆ, ಕೃಪಾಶೀರ್ವಾದಗಳೊಂದಿದ್ದರೆ ಸಾಕು. ಎಂದು ಹೇಳಿದ ಸಿದ್ಧಯ್ಯ ಗುರು ಪಾದಸೇವೆಯಲ್ಲಿ ನಿರತನಾದನು.

    ಶ್ರೀ ಸ್ವಾಮಿಯವರ ಮಹಿಮಾ ಕೀರ್ತಿಗಳು ವಿಸ್ತಾರವಾಗುತ್ತಿದ್ದವು. ಭಕ್ತರ ಸಂಖ್ಯೆ ಬೆಳೆಯುತ್ತಿತ್ತು. ಶಿಷ್ಯರನ್ನು ಕರೆದು ಶ್ರೀ ಸ್ವಾಮಿಯವರು ಸ೦ಚಾರಾರ್ದಿಗಳಾಗಿ ಉತ್ತರದ ದೇಶದ ಕಡೆಗೆ ಹೋಗುವುದಾಗಿ ತಿಳಿಸಿ ಸಿದ್ಧಾ! ನೀನೂ ಸಂಧ್ಯಾಕಾಲಕ್ಕೆ ಸ್ನಾನಾದಿಗಳನ್ನು ಮುಗಿಸಿ ಪ್ರಯಾಣಕ್ಕೆ ಸಿದ್ಧನಾಗು ಎಂದು ಹೇಳಿದರು. ಮರುದಿನವೇ ಹೊರಟು ಮಾರ್ಗಮಧ್ಯದಲ್ಲಿನ ಹಳ್ಳಿ ಪಟ್ಟಣಗಳ ವೈಭವವನ್ನು ವೀಕ್ಷಿಸುತ್ತ ಅಲ್ಲಲ್ಲಿನ ದೇವಾಲಯಗಳಲ್ಲಿ ತಂಗಿ ಪೂಜೆಗಳನ್ನು ಸಲ್ಲಿಸುತ್ತ ಅಲ್ಲಿನ ಭಕ್ತ ಜನರಿಗೆ ಅದತ ಜ್ಞಾನ ಬೋಧಿಸುತ್ತ ಹೈದರಾಬಾದ್ ನಗರವನ್ನು ತಲುಪಿದರು. ಶ್ರೀ ಸ್ವಾಮಿಯವರ ಬರುವಿಕೆಯನ್ನು ಶಿಷ್ಕರಿ೦ದತಿಳಿದ ವಿಶ್ವಬ್ರಾಹ್ಮಣರೆಲ್ಲರೂ ಒಂದು ಗೂಡಿ ವೈಭವದ ಸ೦ಭ್ರಮದಲ್ಲಿ ಮ೦ಗಳವಾದ್ಯಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಉತ್ಸವ ಪೂರ್ವಕವಾಗಿ ಆಹ್ವಾನಿಸಿ ಪಂಡಿತ ವಿಶ್ವಬ್ರಾಹ್ಮಣನ ಮನೆಯಲ್ಲಿ ವಸತಿ ಮಾಡಿಸಿದರು. ಅಂದಿನ ರಾತ್ರಿ ವಿಶ್ರಾಂತಿ ಭೋಜನಾನ೦ತರ ಪಂಡಿತ ವಿಶ್ವಬ್ರಾಹ್ಮಣನು ತಂದೆಯೇ! ನನ್ನದೊಂದು ಕೋರಿಕೆಯೆನುವಷ್ಟರಲ್ಲಿ ಶ್ರೀ ಸ್ವಾಮಿಯವರು ಅಯ್ಯಾ! ನಿನ್ನ ಕೋರಿಕೆಯನ್ನು ನಾನು ಬಲ್ಲೆ. ತಾರಕ ಯೋಗಾಭ್ಯಾನಿಗಳಿಗೆ ಅವರು ಆಚರಿಸುವ ಲಕ್ಷ್ಮತ್ರಯವು ಆವರಿಗೆ ಅವಸರವು. ಆದುದರಿಂದ ಅವುಗಳನ್ನು ನೋಡುವ ವಿಧಾನವನ್ನು ತಿಳಿಸುವೆನು. ಎಂದು ಹೇಳಿ ಸಿದ್ದಾ! ನಿನ್ನ ಲಕ್ಷ್ಯವು ಇತ್ತ ಇರಲಿ ಎಂದು ಬಾಹ್ಯ, ಮಧ್ಯ, ಅ೦ತರ್ಲಕ್ಷ್ಯಗಳನ್ನು ವಿವರಿಸಿ ಹೇಳಿದರು. ಆ ರಾತ್ರಿ ಕೆಲವರು ಅಲ್ಲಿಯೇ ತ೦ಗಿದರು.

    ಮರುದಿನ ಶ್ರೀ ಸ್ವಾಮಿಯವರು ಬಂದಿರುವುದನ್ನು ಭಕ್ತರು ನಗರದಲ್ಲೆಲ್ಲಾ ಬಿತ್ತರಿಸಿದರು. ವಿಷಯವನ್ನು ತಿಳಿದು ಜನಸಾಗರವೇ ಬ೦ದುಸೇರಿತು. ಶ್ರೀ ಸ್ವಾಮಿಯವರಿಂದ ತೀರ್ಥ ಪ್ರಸಾದಗಳನ್ನು ಸ್ವೀಕರಿಸಿದ ರೋಗ ಪೀಡಿತರು ಆಗಿ೦ದಾಗಲೇ ನಿವಾರಣೆಯನ್ನು ಪಡೆಯುತ್ತಿದ್ದರು. ತಮ್ಮ ತಮ್ಮ ಸಂಕಷ್ಟಗಳನ್ನು ಪರಿಹರಿಸಿಕೊಳ್ಳುತ್ತಿದ್ದರು. ವಿಷಯವು ಹೈದರಾಬಾದಿನ ನವಾಬರಿಗೂ ತಿಳಿದು ರಾಜ ಸಭಾಂಗಣವನ್ನು ಅಲ೦ಕರಿಸಿ ರಾಜ ವೈಭವದಿಂದ ಶ್ರೀ ಸ್ವಾಮಿಯವರನ್ನು ಮಂಗಳ ವಾದ್ಯಗಳೊಂದಿಗೆ ಪಲ್ಲಕ್ಕಿಯಲ್ಲಿ ಬರಮಾಡಿಕೊ೦ಡರು.

    ಶ್ರೀ ವೀರಬ್ರಹ್ಮೇ೦ದ್ರ ಸ್ವಾಮಿಯವರ ಬಳಿ ಕುಳಿತ ನವಾಬರು ಸ್ವಾಮೀಜೀ! ತಾವುಗಳು ನಮ್ಮ ನಗರಕ್ಕೆ ಆಗಮಿಸಿ ನಮ್ಮನ್ನೆಲ್ಲ ಪಾವನ ಮಾಡಿದಿರಿ. ತಮ್ಮ ಆಗಮನದಿಂದ ನಮ್ಮ ರಾಜ್ಯಭಾರವು ಸುಗಮವಾಗಿ ನಡೆಯುತ್ತಿದೆ. ತಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಬೇಕು. ಎನಲು ರಾಜನ್! ಸರ್ವವೂ ಬ್ರಹ್ಮ ಮಯವಲ್ಲವೆ! ಎಲ್ಲರೂ ಒಂದೇಯೆಂದು ಭಾವಿಸುವ ಜೀವನು ಜಗತ್ತಿನೆಲ್ಲೆಡೆಯೆಲ್ಲಿಯೂ ತುಂಬಿದ್ದು ಅವನೇ ಬ್ರಹ್ಮವೆನಿಸಿದ್ದಾನೆ. ಸರ್ವರನ್ನು ಸಮತೋ ಭಾವನೆಯಿಂದ ಕಾಣುವ ರಾಜನು ಬ್ರಹ್ಮಸ್ವರೂಪಿಯೇ ಆಗಿರುತ್ತಾನೆ. ಎಂದು ಹೇಳಿದರು ಬ್ರಹ್ಮ೦ರವರು. ನವಾಬರ ಅಂತರಾತ್ಮ ಏನನ್ನೋ. ಯೋಚಿಸುತ್ತಿತ್ತು. ಅದನ್ನರಿತ ಶ್ರೀ ವೀರಬ್ರಹ್ಮ೦ರವರು ನವಾಬರ ಜವಾನರಿಂದ ಪ್ರಣತಿ, ಬತ್ತಿ, ನೀರನ್ನು ತರಿಸಿ. ರಾಜನ್! ಪ್ರಣತಿಯಲ್ಲಿ ಬತ್ತಿ, ನೀರನ್ನು ಹಾಕಿ ಅಗ್ನಿ ಸ್ಪರ್ಶವನ್ನು ಮಾಡಿರೆ೦ದು ಕೇಳಿದರು. ನವಾಬರು ಹಾಗೆಯೇ ಮಾಡಲು ಪ್ರಣಶಿಯಲ್ಲಿನ ಜ್ಯೋತಿ ದಿವ್ಯ ಪ್ರಕಾಶಮಾನವಾಗಿ ಪ್ರಜ್ವಲಿಸಿತು. ನವಾಬರಿಗೆ ಮಹದಾನ೦ದವಾಯಿತು. ನಂತರ ಸ್ವಾಮೀಜೀ! ತಾವುಗಳು ಕಾಲಜ್ಜಾನವನ್ನು ರಚಿಸಿರುವುದಾಗಿ ತಿಳಿಯಿತು. ನಮಗೂ ತಿಳಿಯ ಹೇಳಿ ಕೃತಾರ್ಥರನ್ನಾಗಿ ಮಾಡಿರೆ೦ಂದರು. ಸಮ್ಮತಿಸಿದ ಸ್ವಾಮಿಯವರು ಕಾಲಜ್ಜಾನವನ್ನು ಎಲ್ಲರೂ ತಿಳಿಯುವಂತೆ ಹೇಳಿದರು.