ಶ್ರೀ ಪೋತುಲೂರು ವೀರಬ್ರಹ್ಮೇಂದ್ರಸ್ವಾಮಿ ಸಂಕ್ಷಿಪ್ತ ಚರಿತ್ರೆ
ಶ್ರೀಸ್ವಾಮಿಯವರ ಮಾತುಗಳೆಲ್ಲವನ್ನೂ ಆಲಿಸಿದನಾದರೂ ಬಹ್ಮ ರವರ ಸನ್ನಿಧಿಯನ್ನು ಬಿಡಲು ಮನಸ್ಸು ಒಪ್ಪದಾಯಿತು. ತಂದೆಯೇ! ನನಗೆ ಜ್ಞಾನ ಮಾರ್ಗವೊಂ೦ದಲ್ಲದೆ ಬೇರೆಯೇನೂ ಬೇಕಾಗಿಲ್ಲ. ನಿಮ್ಮನ್ನು ನಂಬಿ ಬಂದಿರುವ ನನಗೆ ನಿಮ್ಮ ಪಾದ ಸೇವೆಯ ಭಾಗ್ಯವನ್ನು ದಯಪಾಲಿಸಿ ಮೋಕ್ಷಮಾರ್ಗವನ್ನು ಉಪದೇಶಿಸಿ ಎಂದು ಬೇಡಿದನು. ಅಲ್ಲದೆ ನಿಮ್ಮ ಪಾದಸೇವೆಯಿ೦ದ ನನ್ನನ್ನು ದೂರ ಮಾಡಬೇಡಿ ಎಂದು ಸ್ವಾಮಿಯವರ ಪಾದಗಳನ್ನು ಬಿಡದಾದನು.
ಮುಸ್ಲಿಂ ಧರ್ಮದ ಬಾಲಕನೊಬ್ಬ ತಂದೆಯವರ ಬಳಿ ಬಂದಿರುವುದನ್ನು ತಿಳಿದ ಗೋವಿ೦ದಮಾ೦ಂಬ, ಗೋವಿಂದಯ್ಯಸ್ವಾಮಿ, ಪೋತುಲೂರಯ್ಯ ಸ್ವಾಮಿ, ತಮ್ಮಂದಿರು ಒಮ್ಮೆಗೆ ಬಂದು ಕೋಪದಿಂದ ಚಡಪಡಿಸುತ್ತ ನೀನು ಮುಸ್ಲೀಮನಾಗಿದ್ದು ನಮ್ಮ ಹಿ೦ದು ಮಠಕ್ಕೆ ಬಂದಿರುವುದು ಸರಿಯೇ? ಮೊದಲು ಇಲ್ಲಿಂದ ಹೊರಟು ಹೋಗು. ಇಲ್ಲವಾದಲ್ಲಿ ಪರಿಣಾಮ ನೆಟ್ಟಗಾಗದು. ಎ೦ದು ಗದರಿಸಿದರು. ಆಗ ಸೈಯದನು ವಿನಯಪೂರ್ವಕವಾಗಿ ಅಣ್ಣಂದಿರಾ! ಮೋಕ್ಷದಾಯಕ ಸದ್ಗುರುಗಳನ್ನು ನ೦ಬಿ ಬಂದಿರುವ ನನ್ನನ್ನು ಹೋಗೆನ್ನಬೇಡಿ. ನಿಮ್ಮಗಳಲ್ಲಿ ನಾನೂ ಒಬ್ಬನಾಗಿದ್ದು ಸದ್ಗುರು ದೇವರ ಪಾದ ಸೇವೆಯನ್ನು ಮಾಡಿಕೊಂಡಿರುತ್ತೇನೆ. ನನ್ನಲ್ಲಿ ದಯೆ ತೋರಿರೆ೦ದು ಬಹುವಿಧವಾಗಿ ಬೇಡಿಕೊಂಡನು.
ಬಾಲಕನ ಮಾತಿಗೆ ಮನಕರಗದ ಪೋತುಲೂರಯ್ಯಾ ಸ್ವಾಮಿ ಏನೋ ಸೈಯದ್ ನಿನ್ನ ಸಹವಾಸವೇ ನಮಗೆ ಬೇಕಾಗಿಲ್ಲ. ಆಹಿ೦ಸಾ ಧರ್ಮವೆನಿಸಿದ ನಮ್ಮ ಹಿ೦ದು ಧರ್ಮವೆಲ್ಲಿ? ಪ್ರಾಣಿವಧೆ ಮಾಡುವ ನಿಮ್ಮ ಮುಸ್ಲಿಂ ಧರ್ಮವೆಲ್ಲಿ? ಒಂದಕ್ಕೊಂದು ಸ೦ಬ೦ಂಧವೇ ಆಗದು. ಹೀಗಿರುವಾಗ ನೀನಿಲ್ಲಿರುವುದು ಸರಿಯಲ್ಲ. ಇನ್ನೊಂದು ಕ್ಷಣ ನೀನಿಲ್ಲಿದ್ದರೆ ನಾವೇ ಹೊರ ದೂಡಬೇಕಾಗುತ್ತದೆಯೆಂದು ಗುಡುಗಿದರು.
ಅದುವರೆಗೂ ಮೌನದಿಂದ ಕುಳಿತಿದ್ದ ಶ್ರೀ ಬ್ರಹ್ಮೇ೦ದ್ರಸ್ವಾಮಿಯವರು ಮಕ್ಕಳನ್ನು ಸಮಾಧಾನಗೊಳಿಸಿ ವಿಧಿ ನೇಮಕ್ಕೆ ಮಾನವರು ಸಾಟಿಯಾಗ ಬಲ್ಲರೇ ಮುಂದೇನಾಗುವುದೋ ಕಾದು ನೋಡೋಣವೆಂದು ಹೇಳಿ ಇನ್ನು ಮುಂದೆ ಈ ಬಾಲಕನನ್ನು ನಮ್ಮವರಲ್ಲೊಬ್ಬನೆ೦ದು ಭಾವಿಸಿರೆಂದು ದಳಿ ಎಲ್ಲರೂ ಭೋಜನಕ್ಕೆ ಒಳ ಹೋದರು. ಅಂದಿನಿಂದ ಬಾಲಕ ಸ್ಕೆಯ ದನನ್ನು ಶ್ರೀ ಸ್ವಾಮಿಯವರ ಪಾದ ಸೇವಕನಾಗಿ ಎಲ್ಲರ ಗೌರವಕ್ಕೆ ಪಾತ್ರನಾದನು. ಶುಭ ಮುಹೂರ್ತದಂದು ಸೈಯದನಿಗೆ ಬಹ್ಮಜ್ಞಾನೋಪದೇಶವನ್ನು ಮಾಡಿ ಸಿದಯ್ಯನೆ೦ಬ ಹೆಸರಿನಲ್ಲಿ ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿದರು.
ಮುದ್ದಿನಿಂದ ಸಾಕಿದ ಮಗನು ಕಾಣದಾದಾಗಿನಿಂದ ಆದ೦ಬಿ, ಪೀರು ಸಾಯಬು ಎಲ್ಲೆಲ್ಲಿಯೋ ಹುಡುಕಿದರು. ಯಾರ್ಯಾರನ್ನೋ ಕೇಳಿದರು. ಮಗನ ಸುಳಿವು ಸಿಕ್ಕಲಿಲ್ಲ. ಆದ೦ಬಿಯು ಮಗನನ್ನು ನೆನೆ ನೆನೆದು ಆಹಾರವನ್ನು ಸೇವಿಸದೆ ಹಾಸಿಗೆಯನ್ನು ಹಿಡಿದಳು. ಪೀರುಸಾಯಬು ಕಂಡ ಕ೦ಡವರನ್ನೆಲ್ಲಾ ವಿಚಾರಿಸುತ್ತಿದ್ದನು. ಆದಂಬಗೆ ಸಮಾದಾನವನ್ನು ಹೇಳುತ್ತಿದ್ದನು. ಆದರೂ ಆದ೦ಬಿ ಮಗನನ್ನು ನೆನೆಯುತ್ತ ಸೊರಗಿ ಮೇಲೇಳದಾದಳು. ಶ್ರೀ ವೀರಬ್ರಹ್ಮೇಂದಸ್ವಾಮಿಯವರ ದರ್ಶನವನ್ನು ಪಡೆದು ಹಿಂದಿರುಗುತ್ತಿದ್ದ ಸನ್ಯಾಸಿಗಳು ಮುಡುಮಾಲ ಮಾರ್ಗವಾಗಿ ಪ್ರಯಾಣಿಸುತ್ತಿದ್ದರು. ಮಾರ್ಗಾಯಾಸವನ್ನು ಕಳೆಯಲೆಂದು ಮುಡುಮಾಲ ಗ್ರಾಮದ ಒಂದು ಮರದಡಿಯಲ್ಲಿ ಕುಳಿತು ಬ್ರಹ್ಮೇಂದ್ರ ಸ್ವಾಮಿಯವರ ಮಹತ್ಪವನ್ನು ಕೊಂಡಾಡುತ್ತಿದ್ದರು. ಮಗನ ಚಿಂತೆಯಲ್ಲಿ ಅಲೆದಾಡುತ್ತಿದ್ದ ಪೀರು ಸಾಯಬು ಸನ್ಯಾಸಿಗಳ ಬಳಿಗೆ ಬ೦ದು ಸ್ವಾಮಿ! ನಮ್ಮ ಮಗ ಸೈಯದನು ಹಲವಾರು ದಿನಗಳಿಂದ ಕಾಣದಾಗಿದ್ದಾನೆ. ಅವನಿಗಿನ್ನು, ಹದಿನಾಲ್ಕುವರ್ಷ. ಮುದ್ದು ಮುದ್ದಾಗಿ ಮಾತನಾಡುತ್ತಾನೆ. ಹೆಚ್ಚು ಮಾತನಾಡುವುದಿಲ್ಲ. ನಿಮ್ಮ೦ಂತಹವರನ್ನು ಕ೦ಡರೆ ಅವನಿಗೆ ಅಚ್ಚುಮೆಚ್ಚು. ಸಂಚಾರಾರ್ದಿಗಳಾದ ನೀವುಗಳು ಎಲ್ಲಿಯಾದರೂ ಕಂಡಿರ ಎಂದು ಪ್ರಶ್ನಿಸಿದನು. ಆಗ ಆ ಸನ್ಯಾಸಿಗಳು ಆಯ್ಯಾ! ನೀನು ಹೇಳುವುದನ್ನು ಕೇಳಿದರೆ ಇಲ್ಲಿಗೆ ಏಳೆ೦ಟು ಮೈಲಿ ದೂರದಲ್ಲಿರುವ ಕ೦ದಿಮಲ್ಲಯ್ಯಪಲ್ಲಿ ಗ್ರಾಮದಲ್ಲಿ ಶ್ರೀ ಶ್ರೀ ಶ್ರೀ ಪೋತುಲೂರು ವೀರಬ್ರಹ್ಮೇ೦ದ್ರಸ್ವಾಮಿಯವರ ಬಳಿ ಒಬ್ಬ ಹುಡುಗನನ್ನು ನೋಡಿದೆವು. ಪರಬ್ರಹ್ಮ ಸ್ಟರೂಪಿಗಳಾದ ಬ್ರಹ್ಮ೦ ಸ್ವಾಮಿಯವರ ಸನ್ನಿಧಿಯಲ್ಲಿ ಕುಳಿತು ಸದಾ ಅವರ ಪಾದಸೇವೆಯಲ್ಲಿಯೇ ನಿರತನಾಗಿರುತ್ತಾನೆ. ಆವರು ಹೇಳುವ ಆಧ್ಯಾತ್ಮಿಕ ವಿಚಾರಗಳನ್ನು ಮನಗೊಟ್ಟು ಆಲಿಸುತ್ತಿರುತ್ತಾನೆ. ಅಎನ ಶ್ರದ್ಧಾ ಭಕ್ತಿಯ ಸೇವೆ ಮೆಚ್ಚುವಂಥದ್ದು. ಅವನನ್ನು ಎಲ್ಲರೂ ಸಿದ್ದಾ, ಸೈದಾ ನೆಂತಲೂ ಕರೆಯುತ್ತಾರೆ. ಅವನು ನಿಮ್ಮ ಮಗನೇನೋ ನೋಡಿಕೊಂಡು ಬಾ ಎಂದರು ಆ ಸನ್ಯಾಸಿಗಳು.
ಸನ್ಯಾಸಿಗಳ ಮಾತುಗಳನ್ನು ಕೇಳಿದ ಪೀರುಸಾಯಬುಗೆ ನಿ೦ತ ಉಸಿರು ಮರುಕಳಿಸಿದಂತಾಯ್ತು. ಆತುರದಿ೦ದ ಮನೆಗೆ ಹೋದವನೆ ಆದಂಬೀ ನಮ್ಮ ಸೈದನು ಕಂದಿಮಲ್ಲಯ್ಯ ಪಲ್ಲಿಯಲ್ಲಿ ಬ್ರಹ್ಮ೦ ಸ್ವಾಮಿ ಬಳಿ ಇರುವುದಾಗಿ ಸನ್ಯಾಸಿಗಳು ಹೇಳಿದರು. ನಾನೀಗಲೇ ಹೋಗಿ ಅವನು ನಮ್ಮ ಮಗನಾಗಿದ್ದರೆ ತಕ್ಷಣ ಕರೆದುಕೊ೦ಡು ಬರುತ್ತೇನೆ. ನಿನ್ನ ಚಿಂತೆಯನ್ನು ಬಿಡು ಎಂದು ಹೇಳಿದವನೆ ಪ್ರಯಾಣ ಮಾಡಿದನು.
ಮಠದೊಳಗ ಶ್ರೀ ಸ್ವಾಮಿಯವರ ಪಾದ ಸೇವೆಯಲ್ಲಿ ನಿರತನಾಗಿದ್ದ ಮಗನನ್ನು ನೋಡಿದ ಪೀರು ಸಾಯಬು ಸ೦ತೋಷಿಸಿದನಾದರೂ ಹಿಂದು ಧರ್ಮದ ಗುರಗಳ ಸೇವೆ ಮಾಡುವುದನ್ನು ಸಹಿಸದಾದನು. ಹತ್ತಿರ ಬ೦ದವನೆ ಅರೇ ಬೇಟಾ ಸೈಯದ್ ನೀನೇನು ಮಾಡುತ್ತಿರುವೆ? ನಮಗ್ಯಾರಿಗೂ ಹೇಳದೆಬಂದು ಈ ಸನ್ಯಾಸಿಯ ಸೇವೆ ಮಾಡುತ್ತಿರುವೆಯಲ್ಲಾ? ನಮ್ಮ ಮುಸ್ಲಿಂ ಧರ್ಮ ಹೇಳುವುದನ್ನು ನೀನು ಕೇಳಿಲ್ಲವೆ? ನಮ್ಮ ಧರ್ಮ ಗುರುಗಳಿಗೂ, ನವಾಬು ದೊರೆಗಳಿಗೂ ತಿಳಿದರೆ ನಮ್ಮನ್ನು ಸುಮ್ಮನೆ ಬಿಟ್ಟಾರೆಯೇ? ಏಳು ಬೇಟಾ ನಿಮ್ಮ ತಾಯಿ ನೀನು ಕಾಣದಾದಾಗಿನಿ೦ದ ಆಹಾರವನ್ನು ತೊರೆದು ಕೊರಗುತ್ತಿದ್ದಾಳೆ. ನಮ್ಮ ಮನೆಗೆ ಹೋಗೋಣ ಏಳು ಎಂದು ಕೈ ಹಿಡಿಯಲು ಸಿದ್ಧಯ್ಯ ಕೈ ಬಿಡಿಸಿಕೊಂಡು ಇನ್ನೂ ಸ್ವಾಮಿಯವರ ಹತ್ತಿರ ಸರಿದು ತಂದೆಯೇ! ನನಗೆ ಈ ಭೇದ ಭಾವನೆ ತುಂಬಿದ ಕುಲ ಮತ ಧರ್ಮಗಳು ನನಗೆ ಬೇಕಾಗಿಲ್ಲ. ಸನಾತನ ಧರ್ಮವೆನಿಸಿದ ಮನುಕುಲ ಧರ್ಮವೇ ನನಗೆ ಸಾಕು. ನಾನಿಲ್ಲಿಗೆ ಮೋಕ್ಷಾದಾಯಕ ಗುರುಗಳನ್ನು ಹರಸಿ ಬಂದಿದ್ದೇನೆ. ಸಾಕ್ಷಾತ್ ಭಗವತ್ಸ್ವರೂಪಿಗಳಾದ ಈ ಗುರುಗಳಲ್ಲದೆ ಬೇರೆ ಏನೊಂದೂ ನನಗೆ ಬೇಕಾಗಿಲ್ಲ. ಈ ನನ್ನ ಗುರುಗಳ ಸನ್ನಿಧಿಯನ್ನು ತೊರೆದು ನಾನಿನ್ನೆಲ್ಲಿಗೂ ಬರಲಾರೆ ಎಂದು ಖಡಾ ಖಂಡಿತವಾಗಿ ಉತ್ತರಿಸಿದನು.