ಶ್ರೀ ಪೋತುಲೂರು ವೀರಬ್ರಹ್ಮೇಂದ್ರಸ್ವಾಮಿ ಸಂಕ್ಷಿಪ್ತ ಚರಿತ್ರೆ

  • ಬ್ರಹ್ಮ೦ ರೊಂದಿಗೆ ಶಿವಕೋಟಯ್ಯಾಚಾರ್ಯರು ಮನೆಯನ್ನು ಸಮೀಪಿಸುತ್ತಿದ್ದಂತೆ ಅತಿಥಿಗಳನ್ನು ಆಹ್ವಾನಿಸಲು ನೀರನ್ನು ಹಿಡಿದು ಬಾಗಿಲಲ್ಲಿಯೇ ನಿಂತಿದ್ದರು ಧರ್ಮಪತ್ನಿಯವರು. ಕಾಲುಗಳನ್ನು ತೊಳೆದುಕೊಂಡು ಒಳಗೆ ಹೋಗುತ್ತಲೆ ಭೋಜನಕ್ಕೆ ಆಣಿಯಾಗಿದೆಯೆಂದು ಆಹ್ವಾನದ ಕರೆ ಬಂತು. ಭೋಜನಕ್ಕೆ ಕುಳಿತ ಶಿವಕೋಟಯನ್ಯಾಚಾರ್ಯರು ಅತಿದಿಗಳನ್ನು ನಿಮಗೆ ವಿವಾಹವಾಗಿದೆಯೇ? ಎಂದು ಪ್ರಶ್ನಿಸಿದರು. ಇಲ್ಲವೆಂದು ಉತ್ತರಿಸಿದರು ಬ್ರಹ್ಮಂ. ನಾಚುತ್ತ ಬಂದು ಎಲೆಗೆ ಬಡಸಿ ಹೋದಳು ಗೋವಿಂದಮ್ಮ. ನಮ್ಮ ಏಕೈಕ ಪುತ್ರಿ ಗೋವಿ೦ದಮ್ಮನನ್ನು ನೋಡಿದಿರ? ಮತ್ತೆ ಪ್ರಶ್ನಿಸಿದರು ಆಚಾರ್ಯರು. ನಾನಾಗಲೆ ಗಮನಿಸಿದ್ದೇನೆ೦ದರು ಬ್ರಹ್ಮ೦. ಹಾಗಾದರೆ ನಮಗೆ ಅಳಿಯನಾಗಲು ತಮಗೆ ಒಪ್ಪಿಗೆಯೇ? ಮತ್ತೊಮ್ಮೆ ಪಶ್ನಿಸಿದರು. ನಿಮ್ಮ ಒಪ್ಪಿಗೆಯಿದ್ದರೆ ನನ್ನದೇನು ಅಭ್ಯ೦ತರವಿಲ್ಲವೆ೦ದರು ಸ್ವಾಮಿಯವರು. ಊಟ ಮುಗಿದನ೦ತರ ಅನೇಕ ವಿಷಯಗಳೊಂದಿಗೆ ಕ್ಷೇಮ ಸಮಾಚಾರಗಳು ನಡೆದವು. ಹಿರಿಯರೊಂದಿಗೆ ಗ್ರಾಮಸ್ಥರೆಲ್ಲರೂ ಸೇರಿ ಗೋವಿಂದಮ್ಮ, ಶ್ರೀ ವೀರಬ್ರಹ್ಮೇ೦ದ್ರಸ್ವಾಮಿಯವರ ವಿವಾಹ ಮಹಾ ವೈಭವದಿ೦ದ ನಡೆದು ಮೃಷ್ಟಾನ್ನ ಭೋಜನವನ್ನು ಮಾಡಿ ಎಲ್ಲರೂ ಸ೦ತೋಷಿಸಿದರು.

    ಕೆಲತಿಂಗಳು ಶಿವಕೋಟಯ್ಯಾಚಾರ್ಯರ ಮನೆಯಲ್ಲಿಯೇ ಉಳಿದು ಆಲ್ಲಿನ ಗ್ರಾಮಸ್ತರಿಗೆ ಅದ್ವೈತ, ಕಾಲಜ್ಞಾನ, ಭೂತ, ಭವಿಷ್ಯತ್ಗಳನ್ನು ಬೋಧಿಸಿದರು. ನಂತರ ಅತ್ತೆ, ಮಾಮರ ಅಪ್ಪಣೆಯನ್ನು ಪಡೆದು ಗೋವಿ೦ದಮ್ಮನವರೊಂದಿಗೆ ಪ್ರಯಾಣವನ್ನು ಕೈಗೊಂಡು ಆನೇಕ ಪುಣ್ಯಕ್ಷೇತ್ರಗಳ ದರ್ಶನವನ್ನು ಮಾಡಿ ಕಂದಿಮಲ್ಲಯ್ಯಪಲ್ಲಿ ಗ್ರಾಮದಲ್ಲಿ ಗೃಹಸ್ತಾಶ್ರಮಿಗಳಾಗಿ ತಮ್ಮ ಬಳಿಗೆ ಬರುವ ಭಕ್ತಾದಿಗಳನ್ನು ತಮ್ಮ ಮಕ್ಕಳಂತೆ ಆದಧರಿಸುತ್ತ ಜ್ಞಾನ ಮಾರ್ಗವನ್ನು ಬೋಧಿಸುತ್ತಿದ್ದರು. ದಿನಗಳು ಕಳೆದಂತೆ ಭಕ್ತರ ಆಗಮನಗಳು ಹೆಚ್ಚುತ್ತಾ ಬಂತು. ಬಂದಂತ ಭಕ್ತರಿಗೆ ಅದ್ವೈತ ಬೋಧನೆಯನ್ನು ಮಾಡಲು ಮಠವೂ ತಯಾರಾಯಿತು. ಗೋವಿ೦ಂದಮಾಂಬರಿಗೆ ಗರ್ಭ ಚಿನ್ನೆಗಳು ಕಾಣಿಸಿಕೊಂಡು ನವಮಾಸಗಳು ಕಳೆದು ಗಂಡು ಮಗುವಿಗೆ ಜನ್ಮವಿತ್ತರು. ಆ ಮಗುವಿಗೆ ಸಿದ್ದಲಿ೦ಗಯ್ಯಾಚಾರ್ಯನೆ೦ದು ನಾಮಕರಣ ಮಾಡಿ ಪೇದ ಕೊಮೆರ್ಲದ ಶಿವಕೋಟಯ್ಯಾಚಾರ್ಯರ ಕುಟುಂಬಕ್ಕೆ ದತ್ತು ಪುತ್ರನನ್ನಾಗಿ ಕೊಟ್ಟರು. ಮತ್ತೆ ಕ್ರಮವಾಗಿ ಗೋವಿ೦ದಯ್ಯಾಚಾರ್ಯ, ಪೋತುಲೂರಂರ್ಯಾಚಾಂರ್ನು, ಓಂಕಾರ ಂರರ್ಯಾಚಾರ್ಯ, ಶಿವಶ೦ಕರಯ್ಯಾಚಾರ್ಯ ಎಂಬ ಗ೦ಡು ಮಕ್ಕಳಿಗೂ ವೀರನಾರಾಯಣಮ್ಮ ಎಂಬ ಮಗಳಿಗೂ, ಜನ್ಮವಿತ್ತು ಪ್ರಾಪ್ತ ವಯಸ್ಸಿಗೆ ತಕ್ಕಂತೆ ಕುಮಾರರಿಗೆ ಕನ್ಯಾಮಣಿಗಳನ್ನು ತ೦ದು ವಿವಾಹವನ್ನು ವರಾಡಿದರು. ವೀರನಾರಾಯಣಮ್ಮನನ್ನು ತಿರುಮಲಾಚಾರ್ಯ ಎ೦ಬ ಉತ್ತಮ ವರ ಶ್ರೇಷ್ಠನಿಗೆ ಕೊಟ್ಟು ವಿವಾಹವನ್ನು ಮಾಡಿದರು.

    ಮಠಕ್ಕೆ ಬರುವ ಭಕ್ತರಲ್ಲಿ ಜಾತಿ ಮತವೆ೦ಬ ಭೇದ ಭಾವನೆಗಳಿಲ್ಲ. ಅಲ್ಲಿ ಎಲ್ಲರೂ ಒಂದೆ ತಾಯಿಯ ಮಕ್ಕಳಂತೆ, ಶ್ರೀಸ್ಟಾಮಿಯವರಿಂದ ಅದ್ವೈತ ಬೋಧನೆಗಳನ್ನು ಕೇಳಿ ಶಿಷ್ಯರಾಗತ್ತಿದ್ದರು. ತಮ್ಮ ಸಂಕಷ್ಟಗಳನ್ನು ನಿವಾರಿಸಿಕೊಂಡ ಭಕ್ತರು ಸ್ವಾಮಿಯವರ ಸೇವಾಕಾರ್ಯವನ್ನು ಮಾಡುತ್ತಿದ್ದರು. ಕೆಲವರು ಅಲ್ಲಿಯೇ ಉಳಿದು ಸೇವೆ ಸಲ್ಲಿಸುತ್ತಿದ್ದರು. ಶ್ರೀ ಸ್ವಾಮಿಯವರ ದರ್ಶನಕ್ಕಾಗಿ ಮಠಕ್ಕೆ ಬರುವ ಸಾಧು, ಸಂತ, ಸನ್ಯಾಸಿಗಳಿಗೇನು ಕಡಿಮೆ ಇರಲಿಲ್ಲ, ಜ್ಞಾನಿಗಳು ದರ್ಶನಕ್ಕಾಗಿ ಬಂದು ಹೋಗುತ್ತಿದ್ದರು.

    ಕ೦ದಿ ಮಲ್ಲಯ್ಯಾಪಲ್ಲಿ ಗ್ರಾಮಕ್ಕೆ ಒಳ ಹಾದಿಯಲ್ಲಿ ನಡೆದರೆ ಏಳು ಮೈಲಿ ದೂರದಲ್ಲಿ ಮುಡುಮಾಲ ಎಂಬ ಗ್ರಾಮದಲ್ಲಿ ಪೀರುಸಾಯಬು, ಆದಂಬಿ ಎಂಬ ದೂದೇಕುಲ ದಂಪತಿಗಳಿದ್ದು ಅವರಿಗೆ ಬಹಳ ದಿವಸಕ್ಕೆ ಅಪರೂಪವಾದ ಮಗನು ಜನಿಸಿದ್ದನು. ಅವನಿಗೆ ಸೈಯದ್ ಎಂದು ಹೆಸರಿಟ್ಟು ಬಹು ಮುದ್ದಿನಿ೦ದ ಸಾಕುತ್ತಿದ್ದರು. ಆ ಮಗನಾದರೂ ತುಂಟ ಮಕ್ಕಳೊಂದಿಗೆ ಸೇರದೆ ಸದಾ ದೈವ ಸ್ಮರಯಲ್ಲಿರುತ್ತಿದ್ದನಲ್ಲದೆ ಸಾಧು, ಸಂತ, ಪಕೀರರೇನಾದರೂ ಮನೆಗೆ ಬಂದರೆ ತಾಯಿ, ತಂದೆಯೊಂದಿಗೆ ಕೂಡಿ ಅವರನ್ನು ಆಧರಿಸುತ್ತಿದ್ದನು. ಅದ್ವೈತ ವಿಚಾರಗಳನ್ನು ಮನಗೊಟ್ಟು ಆಲಿಸುತ್ತಿದ್ದನು. ಒಮ್ಮೊಮ್ಮೆ ತಾನೇ ತಾನೆ೦ಬ೦ತೆ ಮೈಮರೆತು ಕುಳಿತು ಬಿಡುತ್ತಿದ್ದನು. ಶ್ರೀ ವೀರಬ್ರಹ್ಮೇ೦ದ್ರಸ್ವಾಮಿಯವರ ದರ್ಶನಕ್ಕಾಗಿ ಬಂದು ಹೋಗುವ ಸಾಧು ಸಂತರು ಶ್ರೀಸ್ವಾಮಿಯವರು ಸಾಕ್ಷಾತ್ ಪರಬ್ರಹ್ಮಸ್ತರೂಪಿಗಳು, ಅವರ೦ತಹ ಗುರುಗಳೇ ಇಲ್ಲವೆಂದು ಮಾತನಾಡಿಕೊಳ್ಳುವುದನ್ನು ಕೇಳುತ್ತಿದ್ದನು ಸೈಯದ್.

    ಸೈಯದ್ದನಿಗೆ ಶ್ರೀ ವೀರಬ್ರಹ್ಮೇ೦ದ್ರಸ್ವಾಮಿಯವರ ದರ್ಶನ ಮಾಡುವಹಂಬಲವು೦ಟಾಯಿತು. ಸ್ವಾಮಿಯ-ರ ದರ್ಶನಕ್ಕಾಗಿ ಬರುವ ಸಾಧುಗಳೊಂದಿಗೆ ಸೇರಿ ತಾಯಿ, ತಂದೆಗೆ ಹೇಳದೆ ಕ೦ದಿಮಲ್ಲಯ್ಯಸಲ್ಲಿ ಗ್ರಾಮಕ್ಕೆ ಬಂದುಬಿಟ್ಟನು. ಅ೦ದು ರಾತ್ರಿ ಸಾಧುಗಳೊಂದಿಗೆ ಕಳೆದು ಮರುದಿನ ಸಮೀಪದಲ್ಲಿದ್ದ ನದಿಯಲ್ಲಿ ಸ್ನಾನಮಾಡಿ ಮಠಕ್ಕೆ ಬಂದನು. ಶ್ರೀ ಸ್ವಾಮಿಯವರು ನಿತ್ಯಾನುಷ್ಠಾನಗಳನ್ನು ತೀರಿಸಿಕೊಂಡು ಮಠದ ಆಸ್ಥಾನದಲ್ಲಿ ಕುಳಿತರು. ಸೈಯದನು ಆ ತಕ್ಷಣ ಶ್ರೀ ಸ್ವಾಮಿಯವರ ಪಾದಗಳನ್ನಿಡಿದು ಸಾಷ್ಟಾಂಗ ಪ್ರಮಣಾಮವನ್ನು ಮಾಡಲು ಶ್ರೀಸ್ಟಾಮಿಯವರು ಆಶೀರ್ವಧಿಸುತ್ತ ಏಳು ಮಗೂ ನೀನು ಯಾರು ಎಂದು ಕೇಳಿದರು. ತಂದೆಯೇ! ಮುಡುಮಾಲ ವಾಸಿಗಳಾದ ಆದ೦ಂಬಿ ಪೀರುಸಾಯಬು ದಂಪತಿಗಳ ಮಗನು ನನ್ನನ್ನು ಸೈಯದ್ ಎಂದು ಕರೆಯುತ್ತಾರೆ ಎಂದನು. ಮಗೂ! ನೀನು ಮುಸ್ಲಿಂ ಧರ್ಮಕ್ಕೆ ಸೇರಿದವನು ನಮ್ಮಲ್ಲಿಗೆ ಬಂದಿರುವೆಯಲ್ಲ? ಎಂದರು ಸ್ವಾಮಿಯವರು. ಆಗ ಸೈಯದನು ತಂದೆಯೇ! ಕುಲಮತಧರ್ಮಗಳ ಗೊಡವೆ ನನಗೆ ಬೇಕಾಗಿಲ್ಲ! ನಾನು ಮೋಕ್ಷದಾಯಕ ಗುರುಗಳನ್ನು ಹರಸಿ ಬಂದಿದ್ದೇನೆ ಎ೦ದನು ಸೈಯದನು. ಸೈಯದನ ಮಾತನ್ನು ಕೇಳಿದ ಶ್ರೀ ಸ್ವಾಮಿಯವರು ಕ್ಷಣಕಾಲ ಮೌನವನ್ನು ವಹಿಸಿದ್ದು ಈ ಚಿಕ್ಕವಯಸ್ಸಿನಲ್ಲಿ ಮತಭೇದಗಳನ್ನು ತೊರೆದು ವೈರಾಗ್ಯವನ್ನು ಬಯಸಿ ಬ೦ದಿದ್ದಾನಲ್ಲ ಎಂದು ಅ೦ತರ್ಮುಖಿಗಳಾಗಿ ನೋಡಲು ಶ೦ಕರನೇ ಇವನೆಂದು ಅರಿತರಾದರೂ ಮುಸ್ಲಿಂ ಧರ್ಮದಲ್ಲಿರುವುದರಿಂದ ಮಗೂ! ನೀನಿನ್ನು ಚಿಕ್ಕವನು ಈವಯಸ್ಸಿನಲ್ಲೇಕೆ ನಿನಗೆ ವೈರಾಗ್ಯದ ಬಯಕೆ? ನೀನು ಪ್ರಾಪ್ತವಯಸ್ಕನಾಗಿ ಸ೦ಸಾರಿಯಾಗಿದ್ದು ತಾಯಿ ತಂದೆಯ ಸೇವೆಯನ್ನು ಮಾಡುತ್ತಾ ನಿಮ್ಮ ಧರ್ಮಪಾಲನೆ ಮಾಡುವುದು ಧರ್ಮವಲ್ಲವೇ? ಅಲ್ಲದೆ ನಿಮ್ಮ ಧರ್ಮ ಗುರುಗಳಲ್ಲಿ ಶಿಷ್ಯನಾಗಿರಲಾಗದೇ? ನೀನು ನಮ್ಮಲ್ಲಿದ್ದರೆ ' ನಿಮ್ಮ ಧರ್ಮಗುರುಗಳು, ನವಾಬರು ಸುಮ್ಮನಿರಬಲ್ಲರೆ? ಮಗೂ! ನೀನು ನಮ್ಮಲ್ಲಿರುವುದನ್ನು ತಿಳಿದ ನಿಮ್ಮ ತಾಯಿತಂದೆ ಸ್ವಧರ್ಮ ಭ್ರಷ್ಟನಾದನೆಂದು ನೊಂದು ಕೊಳ್ಳುವುದಿಲ್ಲವೆ? ಹೆತ್ತವರನ್ನು ನೋಯಿಸುವುದು ಅಧರ್ಮವಲ್ಲವೆ? ಹೀಗಿರುವಾಗ ಮೋಕ್ಷವಿನ್ಗೆಲ್ಲಿ, ದೊರೆತೀತು? ಎ೦ದು ಆನೇಕ ವಿಷಯಗಳ ತಿಳಿಯ ಹೇಳಿದರು.