ಶ್ರೀ ಪೋತುಲೂರು ವೀರಬ್ರಹ್ಮೇಂದ್ರಸ್ವಾಮಿ ಸಂಕ್ಷಿಪ್ತ ಚರಿತ್ರೆ
ಒಂದು ದಿನ ಬಹ್ಮತೇಜಸ್ಸುಳ್ಳ ವೃದ್ಧ ಸನ್ಯಾಸಿಯೊಬ್ಬರು ಮಠಕ್ಕೆ ಬಂದರು. ಅವರು ನೋಡಲು ತ್ರಿಕಾಲಜ್ಜಾನಿಯಂತೆ ಕಾಣುತ್ತಿದ್ದರು. ಅವರ ನಡುಕ ದ್ವನಿಯಲ್ಲಿ ಹೇಳುವ ಮಾತುಗಳು ಬ್ರಹ್ಮವಾಣಿಯಂತೆ ಗೋಚರಿಸುತ್ತಿದ್ದವು. ಸನ್ಯಾಸಿ ವೃದ್ಧರಾಗಿದ್ದರೂ ದೃಢಕಾಯವಾಗಿತ್ತು ಅವರ ದೇಹ. ಆ ವೃದ್ಧರನ್ನು ಕಂಡ ಶ್ರೀ ವೀರಭೋಜಯಾಚಾರ್ಯ, ವೀರಪಾಪಮಾಂಭರು. ವೃದ್ಧರನ್ನು ಒಳಗೆ ಬರಮಾಡಿಕೊ೦ಡು ಉಚಿತ ಪೀಠದಲ್ಲಿ ಆಸೀನರನ್ನಾಗಿಸಿ ಬಹುವಾಗಿ ಆದರಿಸಿದರು. ದಂಪತಿಗಳು ತಮಗೆ ಪುತ್ರ ಸ೦ತಾನವಿಲ್ಲದಿರುವುದನ್ನು ವಿವರಿಸಿ... ನಮಗೆ ' ಮಗುವೊಂದನ್ನು ಕರುಣಿಸಲಿಲ್ಲ. ಆ ಭಗವಾನ್ ವಿಶ್ವಕರ್ಮ ಪರಬ್ರಹ್ಮ ಪ್ರಭುದೇವನು. ಎಂದು ಬಹುವಾಗಿ ಹೇಳಿಕೊಂಡರು.
ದಂಪತಿಗಳ ಆದರಾತಿಥ್ಯವನ್ನು ಮೆಚ್ಚಿದ ವೃದ್ದರು ಮಕ್ಕಳೇ ನಿಮ್ಮ ಚಿಂತೆಯು ದೂರವಾಗುವ ಕಾಲ ಸಮೀಪಿಸಿದೆ. ನಿಮ್ಮ ಕೊರತೆಯನ್ನು ನೀಗಲು ಸಾಕ್ಷಾತ್ ಆ ಭಗವಂತನೇ ಧರೆಗಿಳಿದು ಬಂದಿದ್ದಾನೆ. ನಿಮ್ಮ ಈ ಶೋಕವನ್ನು ದೂರಮಾಡಿ ಮೋಕ್ಷಕ್ಕೆ ಮಾರ್ಗದರ್ಶಿಯಾಗುವ ಮಗುವೊಂದು ನಿಮಗಾಗಿ ಆಶ್ರಮವೊಂದರಲ್ಲಿ ಬೆಳೆಯುತ್ತಿದೆ. ಮುಂಬರುವ ಶುಭ ದಿನದಲ್ಲಿ ಪುಣ್ಯ ತೀರ್ಥಕ್ರೇತ್ರಾದಿಗಳ ದರ್ಶನಾರ್ತಿಗಳಾಗಿ ಪಯಣಿಸಿರಿ, ನಿಮಗೆ ಶುಭವಾಗುತ್ತದೆ, ಎನ್ನಲು ದಂಪತಿಗಳು ಮಹಾ ದಾನದಿಂದ ವೃದ್ಧರಿಗೆ ನಮಸ್ಕರಿಸಿದರು. ಇಷ್ಟಾರ್ಥ ಸಿದ್ಧಿರಸ್ತು ಎಂದು ಆಶೀರ್ವಧಿಸಿದ ವೃದ್ಧರು ಹೊರ. ಬಂದು ನಾಲ್ಕಾರು ಎಚ್ಜೆಯನ್ನಿಡುತ್ತಲೆ ಕಾಣದಾದರು. ವೃದ್ಧರನ್ನೇ ಮೈಮರೆತು ನೋಡುತ್ತಿದ್ದ ದಂಪತಿಗಳು ಎಚ್ಚೆತ್ತು ಕಣ್ಣು ಬಿಟ್ಟು ನೋಡಿದಾಗ ಎಲ್ಲವೂ ಬೆಳಗಿನ ಜಾವದ ಸ್ವಪ್ನವಾಗಿತ್ತು.
ಕನಸು ದಂಪತಿಗಳಿಗೆ ಪರಮಾನ೦ದವನ್ನು೦ಟು ಮಾಡಿತ್ತು. ಭಗವಾನ್ ಸೃಷ್ಟಿಕರ್ತನೇ ವೃದ್ಧರ ವೇಷದಲ್ಲಿ ಬ೦ದು ಆಶೀರ್ವಧಿಸಿದಾನೆಂದು ನಂಬಿ ವೃದ್ಧರ ವಾಣಿಯಂತೆ ಶುಭ ದಿನದಲ್ಲಿ ಯಾತ್ರಾರ್ದಿಗಳಾಗಿ ಹೊರಟು ಅನೇಕ ಪುಣ್ಯ ತೀರ್ಥಗಳಲ್ಲಿ ಮಿಂದು. ಕ್ಷೇತ್ರ ದರ್ಶನಗಳನ್ನು ಮಾಡುತ್ತ. ಮಾರ್ಗ ಮಧ್ಯದಲ್ಲಿನ ಪ್ರಕೃತಿ ಮಾತೆಯ ಏರಿಳಿತಗಳನ್ನು, ಗಿಡ, ಬಳ್ಳಿ, ವೃಕ್ಟಾದಿಗಳ ಸೊಬಗನ್ನು ನೋಡಿ ಆನಂದಿಸುತ್ತ ಅತ್ರಿ ಮಹರ್ಷಿಗಳ ಆಶ್ರಮದಲ್ಲಿ ವಿಶಾಂತಿಗಾಗಿ ತ೦ಗಿದರು.
ವಿಶ್ರಾಂತಿಯನ್ನು ಬಯಸಿ ಆಶ್ರಮದಲ್ಲಿ ತಂಗಿದ್ದ ಯಾತ್ರಾರ್ಡಿಗಳನ್ನು ಕಂಡ ಅತ್ರಿ ಮಹರ್ಷಿಗಳು ದಂಪತಿಗಳ ಬಳಿಗೆ ಬಂದು ಆಯ್ಕಾ! ತಾವುಗಳು ಯಾರು? ಎಲ್ಲಿಂದ ಬಂದಿರಿ. ಎಲ್ಲಿಗೆ ಹೋಗುವವರಿದ್ದೀರಿ? ಎಂದು ವಿಚಾರಿಸಲು, ವೀರಭೋಜಯಾಚಾರ್ಯರು ಸ್ವಾಮಿ! ನಾವು ವಿಶ್ವಬ್ರಾಹ್ಮಣ ದಂಪತಿಗಳು. ನನ್ನ ಹೆಸರು ವೀರಭೋಜಯಾಚಾರ್ಯ, ಈಕೆ ನನ್ನ ಧರ್ಮಪತ್ನಿ ವೀರ ಪಾಪಮಾ೦ಬ ನಮ್ಮದು ಕರ್ನಾಟ ರಾಜ್ಯ. ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರದ ಕಳವರ ಗ್ರಾಮದ ಸಮೀಪ ಪದಲ್ಲಿರುಪ ಪಾಪಾಫ್ಟಿಮಠದ ಪೀಠಾಧಿಪತ್ಯವನ್ನು ವಹಿಸಿಕೊಂಡಿರುವವರು. ನಮಗೆ ಸಂತಾನ ಭಾಗ್ಯವಿಲ್ಲದಕಾರಣ ಕ್ಷೇತ್ರಾರ್ದಿಗಳಾಗಿ ಬಂದಿದ್ದೇವೆ. ಇಂದಿನ ವಿಶ್ರಾಂತಿಗಾಗಿ ಇಲ್ಲಿ ತಂಗಬೇಕಾಯಿತು ಎ೦ದು ಹೇಳಿದರು.
ಆಶ್ರಮಕ್ಕೆ ಬಂದ ಅತಿಥಿಗಳ ವಿವರವನ್ನು ಕೇಳಿದ ಅತ್ರಿ ಮಹರ್ಷಿಗಳು ಆ ದಂಪತಿಗಳನ್ನು ಆದರಿಸಿ ಅಂದು ರಾತ್ರಿ ಭೋಜನಾ ನಂತರ ಒಂದೆಡೆಕುಳಿತು ಅಯ್ಯಾ! ವೀರ ಭೋಜಯಾಚಾರ್ಯ ಅಮ್ಮಾ! ವೀರ ಪಾಪಮಾಂಬ ತಾವು ಯಾತ್ರರ್ಣಗಳಾಗಿ ಬಂದು ನಮ್ಮ ಆಶ್ರಮದಲ್ಲಿ ತಂಗಿದ್ದು ಒಳ್ಳೆಯದೇ ಆಯಿತು. ನಿಮ್ಮಗಳ ಬಯಕೆಯು ಈಡೇರುವ ಸಮಯವು ಹತ್ತಿರದಲ್ಲಿದೆ. ನೀವುಗಳು ನಾಲ್ಕಾರು ದಿನಗಳು ಆಶ್ರಮದಲ್ಲಿಯೇ ಇದ್ದು ವಿಶ್ರಾಂತಿಯನ್ನು ತೆಗೆದುಕೊಳ್ಳಿ, ಎಂದು ಹೇಳಿದ ಅತ್ರಿ ಮಹರ್ಷಿಗಳು ದಂಪತಿಗಳಿಗೆ ತಂಗಲು ಉಚಿತ ಕುಠೀರವನ್ನು ತೋರಿದರು. ಆಶ್ರಮದಲ್ಲಿ ನಾಲ್ಕಾರು ವಾರಗಳೇ ಕಳೆದವು. ಶುಭ ದಿನವೊಂದರಲ್ಲಿ ದಂಪತಿಗಳನ್ನು ಹತ್ತಿರ ಕೂಡಿಸಿಕೊಂಡು. ಆಯ್ಕಾ! ವೀರಭೋಜಯಾಚಾರ್ಯ, ಅಮ್ಮ ವೀರಪಾಪಮಾಂಬ ನಿಮ್ಮ ಮನೋಭಿಷ್ಣವು ಇಂದಿಗೆ ಫಲಿಸಿತು. ಎಂದ ಹೇಳಿದ ಅತ್ರಿ ಮಹರ್ಷಿಗಳು ಆರು ತಿಂಗಳುಗಳಿಂದ ತಮ್ಮ ಆಶ್ರಮದಲ್ಲಿ ಗೋ ಕ್ಷೀರವನ್ನೇ ಸೇವಿಸುತ್ತ ಬೆಳೆಯುತ್ತಿದ್ದ ಮಗುವನ್ನು ಶಿಷ್ಯರಿಂದ 'ಕರಿಸಿಕೊಂಡು ತೋರಿಸುತ್ತ ಈ ಮಗುವು ನಿಮಗಾಗಿ ನಿಮ್ಮ ಕೊರತೆಯನ್ನು ನೀಗಲೆಂದೇ ಜನಿಸಿ ಬಂದ ಯುಗ ಪುರುಷ ಮಗುವು. ಇದು ಎಲ್ಲರಂತೆ ಸಾಮಾನ್ಯ ಮಗುವಲ್ಲ. ಸಾಕ್ಟಾಶ್ ಭಗತ್ಸ್ವರೂಪವೇ ಹೌಡು. ಲೋಕ ಸಲ್ಯಾಣಕ್ಕಾಗಿಯೂ, ನಿಮ್ಮ ಜೀವನ್ಮುಕ್ತಿಗಾಗಿಯೂ ಅವತರಿಸಿರುವ ಈ ಮಗುವನ್ನು ನಿಮ್ಮ " ಮಗನನ್ನಾಗಿ ಸ್ವೀಕರಿಸಿ ನಿಮ್ಮ ಕಣ್ಣುಗಳಂತೆ ಕಾಪಾಡಿಕೊಳ್ಳಿ ಎಂದು ಹೇಳಿ ಹ ಹಲವಾರು ರಸಹ್ಯ ವಿಷಯಗಳನ್ನು ತಿಳಿಸಿ ಮಗುವನ್ನು ವೀರ ಪಾಪಮಾಂಬರ ಮಡಿಲ್ಲಿ ಮಲಗಿಸಿದರು.
ತಮ್ಮ ಮಡಿಲನ್ನು ತುಂಬಿದ ಬ್ರಹ್ಮಕಾಂತಿಯುಳ್ಳ ಮಗುವನ್ನು ನೋಡುತ್ತಿದ್ದ ದಂಪತಿಗಳ ಸ೦ತೋಷಕ್ಕೆ ಪಾರವಿಲ್ಲವಾಯಿತು. ದಂಪತಿಗಳು ಅತ್ರಿ ಮಹರ್ಷಿಗಳಿಗೆ ನಮಸ್ಕರಿಸಿದರು. ಆಶೀರ್ವಧಿಸಿದ ಅತ್ರಿ ಮಹರ್ಷಿಗಳು ನಾಳೆಯೇ ನಿಮ್ಮ ಪ್ರಯಾಣಕ್ಕೆ ಶುಭ ದಿನ ಪ್ರಶಸ್ಥವಾಗಿದೆಯೆಂದು ಅಪ್ಪಣೆ ಕೊಟ್ಟರು.
ಪಾಪಘ್ಟಿ ಮಠ
ಪುಣ್ಯ ತೀರ್ಥಕ್ಷೇತ್ರಗಳನ್ನು ದರ್ಶಿಸಿ ಮಗುವಿನೊಂದಿಗೆ ಹಿಂದಿರುಗಿದ ದಂಪತಿಗಳ ದರ್ಶನವನ್ನು ಪಡೆಯಲೆಂದು ಬಂಧು, ಬಾಂಧವರು ಹಾಗೂ ಅನೇಕ ಭಕ್ತರು ಬಂದು ಮುದ್ದು ಮುಖದ ಮಗುವನ್ನು ನೋಡಿ ಸ೦ತೋಷವನ್ನು ವ್ಯಕ್ತ ಪಡಿಸಿದರು. ಅಂದಿನಿಂದ ಮಗುವು ಪ್ರಭುಧ್ಧಮಾನವಾಗಿ ಬೆಳೆಯ ತೊಡಗಿತು. ಇಷಟ್ಕರ್ಮ ಪದ್ಧತಿಯಂತೆ, ನಾಮಕರಣ ಗುರುಕುಲ ವಾಸ, ಉಪನಯನಾದಿಗಳೆಲ್ಲವೂ ನೆರವೇರಿ ಬಾಲ್ಯಾವಸ್ತೆಯಲ್ಲಿದ್ದ ಮಗು ಹನ್ನೆರಡನೇ ವಯಸ್ಸಿಗೆ ಬರುವಷ್ಟರಲ್ಲಿ ಶ್ರೀ ವೀರಭೋಜಯಾಚಾರ್ಯರು ಹಾಸಿಗೆಯನ್ನಿಡಿದು ದೈವಾಧೀನರಾದರು. ಪತಿಯ ವಯೋಗವನ್ನು ತಾಳಲಾಗದಿದ್ದರೂ ವೀರಪಾಪಮಾ೦ಂಬ ಮಗನ ಮುದ್ದು ಮುಖವನ್ನು ನೋಡುತ್ತ ತಮ್ಮ ಎಲ್ಲಾ ಸಂಕಷ್ಟಗಳನ್ನು ಮರೆತು ಕಾಲವನ್ನು ಕಳೆಯುತ್ತಿದರು.